ಪುನೀತ್ ರವರು ನೀಡಿದ್ದ ಕೊನೆಯ ಉಡುಗೊರೆ ನೋಡಿ ಕಣ್ಣೀರಿಟ್ಟ ಅಶ್ವಿನಿ, ಅಷ್ಟಕ್ಕೂ ಆ ಉಡುಗೊರೆ ಏನು ಗೊತ್ತೇ?? ಎಷ್ಟು ಕೋಟಿ ಬೆಲೆ ಬಾಳುತ್ತದೆ ಗೊತ್ತೇ??

12,523

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರು ತಮ್ಮ ಪತ್ನಿ ಅಶ್ವಿನಿ ರವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರು ಅದೆಷ್ಟೋ ಯುವ ಜೋಡಿಗಳಿಗೆ ಆದರ್ಶ ದಂಪತಿಗಳು ಆಗಿದ್ದರು. ಆದರೆ ಈ ಜೋಡಿಯ ಮೇಲೆ ಆ ದೇವರಿಗೆ ಯಾವ ಕೆಟ್ಟ ಕಣ್ಣು ಬಿತ್ತೋ ಏನೋ ಪುನೀತ್ ಅವರನ್ನು ನಾವು ಇಂದು ಅಕಾಲಿಕವಾಗಿ ಕಳೆದುಕೊಂಡಿದ್ದೇವೆ. ಪುನೀತ್ ರಾಜಕುಮಾರ್ ಅವರು ಬೇರೆ ನಟರಂತೆ ಕೇವಲ ಸಿನಿಮಾ ಹಾಗೂ ಸ್ನೇಹಿತರೆಂದು ಇರುತ್ತಿರಲಿಲ್ಲ.

ಪುನೀತ್ ರಾಜಕುಮಾರ್ ಅವರು ಸಿನಿಮಾದಲ್ಲಿ ಕಾಣಿಸಿಕೊಳ್ಳುವಂತೆ ನಿಜಜೀವನದಲ್ಲೂ ಕೂಡ ಪಕ್ಕಾ ಫ್ಯಾಮಿಲಿ ಮ್ಯಾನ್. ಸಿನಿಮಾ ಚಿತ್ರೀಕರಣದಲ್ಲಿ ಬಿಡುವು ಸಿಕ್ಕರೆ ತಮ್ಮ ಫ್ಯಾಮಿಲಿ ಯೊಂದಿಗೆ ಸಮಯವನ್ನು ಅದ್ಭುತವಾಗಿ ಕಳೆಯುತ್ತಿದ್ದರು. ಇನ್ನು ಹಲವಾರು ಸಮಾಜ ಸೇವೆಗಳ ಮೂಲಕವೂ ಕೂಡ ಪುನೀತ್ ರಾಜಕುಮಾರ್ ರವರ ಜನರ ಪ್ರೀತಿಯನ್ನು ಸಂಪಾದಿಸಿದ್ದರು. ಅದಕ್ಕಾಗಿಯೇ ಇಂದಿಗೂ ಕೂಡ ಪುನೀತ್ ರಾಜಕುಮಾರ್ ರವರ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ದಿನಕ್ಕೆ ಹತ್ತರಿಂದ ಹದಿನೈದು ಸಾವಿರ ಜನರು ಭೇಟಿಯನ್ನು ನೀಡುತ್ತಾರೆ.

ಮರಣದ ನಂತರವೂ ಕೂಡ ಕನ್ನಡ ಚಿತ್ರರಂಗದ ಒಬ್ಬ ನಟನಿಗೆ ಇಷ್ಟೊಂದು ಗೌರವ ಹಾಗೂ ಪ್ರೀತಿ ಜನರಿಂದ ಸಿಕ್ಕಿದ್ದು ಇದೇ ಮೊದಲು ಎಂದು ಹೇಳಲಾಗುತ್ತದೆ. ಇನ್ನು ಇತ್ತೀಚಿಗಷ್ಟೇ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮನೆಯಿಂದ ಹೊರಗೆ ಹೋಗುತ್ತಿರಬೇಕಾದರೆ ಪುನೀತ್ ರಾಜಕುಮಾರ್ ಅವರು ನೀಡಿರುವ ಉಡುಗೊರೆಯನ್ನು ನೋಡಿ ಪುನೀತ್ ರವರನ್ನು ನೆನಪಿಸಿಕೊಂಡು ಕಣ್ಣೀರು ಇಟ್ಟಿದ್ದಾರೆ. ಹೌದು 2019 ರಲ್ಲಿ ಪುನೀತ್ ರಾಜಕುಮಾರ್ ಅವರು ಮಹಿಳಾ ದಿನಾಚರಣೆಯ ಪ್ರಯುಕ್ತ ತಮ್ಮ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ರವರಿಗೆ 4 ಕೋಟಿ ಬೆಲೆಬಾಳುವ ಲ್ಯಾಂಬೋರ್ಗಿನಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು ಈಗ ಇದನ್ನು ನೋಡಿ ಕಣ್ಣೀರಿಟ್ಟಿದ್ದಾರೆ.