ಪಾರ್ವತಮ್ಮ ರವರ ಕೊನೆಯ ಬರ್ತಡೆ ಆಚರಿಸಿದ ಅಪ್ಪು ರವರ ವಿಡಿಯೋ ಹೇಗಿದೆ ಗೊತ್ತಾ?? ಆಚರಣೆಯಲ್ಲಿ ಅಪ್ಪು ಹೇಗೆ ಭಾಗವಹಿಸಿದ್ದಾರೆ ಎಂದು ವಿಡಿಯೋ ತೋರಿಸುತ್ತೇವೆ ನೋಡಿ.

6,409

ನಮಸ್ಕಾರ ಸ್ನೇಹಿತರೇ ಕನ್ನಡಚಿತ್ರರಂಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಾಯಕನಟನಾಗಿ ಆಸೆಪಟ್ಟು ಬಂದವರಲ್ಲ ಆದರೂ ಕೂಡ ಅವರ ರಕ್ತಗತವಾಗಿ ಬಂದಂತಹ ನಟನೆಯ ಗುಣದಿಂದಾಗಿ ಇಂದು ಕನ್ನಡ ಚಿತ್ರರಂಗದಲ್ಲಿ ಯಾರು ಕೂಡ ಮರೆಯಲಾಗದಂತಹ ಮಾಣಿಕ್ಯ ನಾಗಿ ಮಿಂಚಿ ಮರೆಯಾಗಿದ್ದಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಚಿಕ್ಕಂದಿನಿಂದಲೂ ಕೂಡ ಜೋಪಾನವಾಗಿ ಕಾಪಾಡಿಕೊಂಡು ಸಲಹೆ ಅವರಿಗೆ ಒಳ್ಳೆಯ ಗುಣಗಳನ್ನು ಸ್ವಭಾವದಲ್ಲಿ ರೂಢಿಸಿಕೊಳ್ಳುವಂತೆ ಮಾಡಿದವರು ಅವರ ತಾಯಿ ಪಾರ್ವತಮ್ಮ.

ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿಯೂ ಕೂಡ ಪಾರ್ವತಮ್ಮ ರಾಜಕುಮಾರ್ ಅವರು ಸಾಕಷ್ಟು ಜನರಿಗೆ ಅನ್ನ ನೀಡಿದ ಅನ್ನಪೂರ್ಣೇಶ್ವರಿ ಆಗಿದ್ದಾರೆ. ಮಹಿಳಾ ನಿರ್ಮಾಪಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಯಾರು ಮಾಡಲಾಗದಂತಹ ಸಾಧನೆಯನ್ನು ಮಾಡಿದ್ದಾರೆ ಎಂದರೆ ಅದು ಕೇವಲ ಪಾರ್ವತಮ್ಮ ರಾಜಕುಮಾರ್ ಮಾತ್ರ. ಪಾರ್ವತಮ್ಮ ರಾಜಕುಮಾರ್ ರವರು ಎಂದಿಗೂ ಕೂಡ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ದೊಡ್ಡಮನೆಯ ಮೂಲ ಶಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ.

ಅಣ್ಣಾವ್ರು ಬೆನ್ನ ಹಿಂದಿನ ಪ್ರಮುಖ ಶಕ್ತಿಯಾಗಿ ದೊಡ್ಡಮನೆಯ ಮೂರು ಮುತ್ತುಗಳು ಜನ್ಮದಾತೆ ಯಾಗಿ ಪಾರ್ವತಮ್ಮನವರು ಕಾಣಿಸಿಕೊಳ್ಳುತ್ತಾರೆ. ಇನ್ನು ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ಮತ್ತು ಕುಟುಂಬಸ್ಥರು ಪಾರ್ವತಮ್ಮ ರಾಜಕುಮಾರ್ ಅವರ ಕೊನೆಯ ಜನ್ಮದಿನಾಚರಣೆಯನ್ನು ಆಚರಿಸಿಕೊಂಡ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿದಾಕ್ಷಣ ನಿಮ್ಮ ಕಣ್ಣಲ್ಲಿ ಕಂಬನಿ ಜಿನುಗುವುದು ಖಂಡಿತ. ನೀವು ಕೂಡ ಈ ವಿಶೇಷ ವಿಡಿಯೋವನ್ನು ಇಲ್ಲಿ ಕೆಳಗಡೆ ನೋಡಬಹುದಾಗಿದೆ. ಈ ವಿಡಿಯೋ ನೋಡಿ ನಿಮಗೆ ಏನು ಅನ್ನಿಸಿತು ಎಂಬುದನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.