ಪುರುಷರೇ ಎಚ್ಚರ, ಅಪ್ಪಿ ತಪ್ಪಿಯೂ ಕೂಡ ಬೆಲ್ಟ್ ಧರಿಸುವಾಗ ಈ ಚಿಕ್ಕ ತಪ್ಪು ಮಾಡಬೇಡಿ, ಪುರುಷತ್ವ ಕಳೆದುಕೊಳ್ಳಬಹುದು. ಯಾವುದು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಸ್ಟೈಲನ್ನು ಮುಖ್ಯವಾಗಿ ನಮ್ಮ ಜೀವನದಲ್ಲಿ ಉಡುಗೆ-ತೊಡುಗೆಗಳಲ್ಲಿ ಅಳವಡಿಸಿಕೊಂಡು ಮುಂದುವರೆದಿದ್ದಾರೆ. ಒಂದು ವೇಳೆ ಇಂದಿನ ದಿನದ ಶೈಲಿಗೆ ತಕ್ಕಂತೆ ಫ್ಯಾಷನ್ ಅನ್ನು ಮಾಡಿಕೊಂಡಿಲ್ಲ ವೆಂದರೆ ಅವರನ್ನು old-school ಎಂದು ಕರೆಯುತ್ತಾರೆ.

ಇಂದು ನಾವು ಮಾತನಾಡಲು ಹೊರಟಿರುವುದು ಬೆಲ್ಟ್ ಧಾರಣೆ ಕುರಿತಂತೆ. ನಿಮಗೆಲ್ಲರಿಗೂ ತಿಳಿದಿರುವಂತೆ ಆಫೀಸಿಗೆ ಹೋಗಲು ಅಥವಾ ಬೇರೆ ಯಾವುದೇ ಸಮಾರಂಭಗಳಿಗೂ ಹೋಗುವಾಗಲೂ ಕೂಡ ಬೆಲ್ಟ್ ಧರಿಸಿ ಎಲ್ಲರೂ ಹೋಗುತ್ತಾರೆ. ಇನ್ನು ಬೆಲ್ಟ್ ಧರಿಸುವವರು ನಾವು ಇಂದು ಹೇಳಲು ಹೊರಟಿರುವ ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಇಲ್ಲವಾದರೆ ಪುರುಷತ್ವಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಬೆಲ್ಟನ್ನು ಯಾವಾಗಲೂ ಕೂಡ ಧರಿಸುವ ಸಂದರ್ಭದಲ್ಲಿ ಟೈಟಾಗಿ ಹಾಕಿಕೊಳ್ಳಬಾರದು. ಇದು ಸಾಕಷ್ಟು ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ.
ಯಾವಾಗಲೂ ಕೂಡ ಬೆಲ್ಟ್ ಧರಿಸುವಾಗ ಸಡಿಲವಾಗಿ ಧರಿಸುವುದನ್ನು ಇಂದಿನಿಂದಲೇ ಅಭ್ಯಾಸ ಮಾಡಿಕೊಳ್ಳಿ. ಇಲ್ಲವಾದರೆ ಮುಂದೊಂದು ದಿನ ಈ ಅಭ್ಯಾಸದಿಂದಾಗಿ ನಿಮಗೆ ಹಲವಾರು ಸಮಸ್ಯೆಗಳು ಎದುರಾಗುವುದು ಗ್ಯಾರಂಟಿ. ಒಂದು ವೇಳೆ ನಾವು ಬೆಲ್ಟ್ ಧರಿಸುವಾಗ ಟೈಟಾಗಿ ಹಾಕಿಕೊಂಡರೆ ಇದು ದೇಹದ ನರಗಳನ್ನು ಸಾಕಷ್ಟು ಒತ್ತಡದಲ್ಲಿ ಇರಿಸಿ ಅಪಧಮನಿಗೆ ಸಮಸ್ಯೆ ಆಗುವಂತೆ ಮಾಡುತ್ತದೆ. ಅದರಲ್ಲೂ ಕೂಡ ಪುರುಷರಿಗೆ ಇದರಿಂದಾಗಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ ಹಾಗೂ ದೇಹದಲ್ಲಿ ಫಲವತ್ತತೆ ಕೂಡ ಕಡಿಮೆಯಾಗುತ್ತದೆ. ಇನ್ನು ಈಗಾಗಲೇ ನಡೆದಿರುವ ಸಂಶೋಧನೆಯಲ್ಲಿ ಹೀಗೆ ಟೈಟಾಗಿ ಬೆಲ್ಟನ್ನು ಧರಿಸುವುದರಿಂದಾಗಿ ಸೊಂಟದ ಕೆಳಗಿನ ಎಲ್ಲಾ ಸ್ನಾಯು ಹಾಗೂ ಮಾಂಸಖಂಡಗಳು ಬಲಹೀನ ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ತಿಳಿದುಬಂದಿದೆ. ಹೀಗಾಗಿ ಬೆಲ್ಟ್ ಧರಿಸುವುದನ್ನು ಸರಿಯಾಗಿ ನೋಡಿಕೊಂಡು ಮಾಡಿ.