ಮದುವೆಯಾಗುವ ಹುಡುಗನಿಗೆ ಹೊಸ ಷರತ್ತನ್ನು ವಿಧಿಸಿದ ಸಾರಾ ಅಲಿ ಖಾನ್, ಇಡೀ ಹೆಣ್ಣು ಮಕ್ಕಳು ಈಗೆ ಮಾಡಬೇಕು ಎಂದ ಜನರು. ಏನಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲೂ ಕೂಡ ಮದುವೆಯನ್ನುವುದು ಸಾಕಷ್ಟು ಪ್ರಾಮುಖ್ಯತೆಯನ್ನು ವಹಿಸಿರುತ್ತದೆ. ಇದರ ಕುರಿತಂತೆ ಸಾಕಷ್ಟು ಕನಸುಗಳನ್ನು ಹಾಗೂ ಯೋಜನೆಗಳನ್ನು ಕಟ್ಟಿಕೊಂಡಿರುತ್ತಾರೆ. ಇನ್ನು ಸಡನ್ನಾಗಿ ಮದುವೆ ವಿಷಯ ಮಾತಾಡೋಕೆ ಹೋಗಿರುವುದು ಕೂಡ ಬಾಲಿವುಡ್ ಚಿತ್ರರಂಗದ ಖ್ಯಾತ ಉದಯೋನ್ಮುಖ ಯುವ ನಟಿ ಸಾರಾ ಅಲಿಖಾನ್ ವಿಷಯವಾಗಿ. ಹೌದು ಗೆಳೆಯರೇ ಇತ್ತೀಚಿಗಷ್ಟೇ ಮದುವೆಯಾಗುವ ಹುಡುಗನ ಕುರಿತಂತೆ ಒಂದು ಶರತ್ತನ್ನು ವಿಧಿಸಿದ್ದಾರಂತೆ.
ಅದರ ಕುರಿತಂತೆ ಇಂದು ನಾವು ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ. ಇನ್ನು ಸಾರಾ ಅಲಿ ಖಾನ್ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ರವರ ಪುತ್ರಿ. ಇನ್ನು ನಿಮಗೆಲ್ಲ ತಿಳಿದಿರುವಂತೆ ಸೈಫ್ ಅಲಿ ಖಾನ್ ರವರು ಅಮೃತ ಸಿಂಗ್ ಅವರಿಗೆ ವಿಚ್ಛೇದನವನ್ನು ನೀಡಿ ಕರೀನಾ ಕಪೂರ್ ಅವರನ್ನು ಮದುವೆಯಾಗಿದ್ದರು. ಇನ್ನು ಸಾರಾ ಅಲಿ ಖಾನ್ ರವರು ತಮ್ಮ ತಾಯಿ ಹಾಗೂ ತಮ್ಮನೊಂದಿಗೆ ಇದ್ದಾರೆ.

ಇತ್ತೀಚಿಗಷ್ಟೇ ಸಾರಾ ಅಲಿ ಖಾನ್ ಅಕ್ಷಯ್ ಕುಮಾರ್ ಹಾಗೂ ತಮಿಳು ಚಿತ್ರರಂಗದ ನಟನೆಯ ಅತ್ರಂಗಿ ರೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಿನಿಮಾ ಅತ್ಯಂತ ಶೀಘ್ರದಲ್ಲೆ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದೆ. ಇನ್ನು ಈ ಮಧ್ಯದಲ್ಲಿ ತಾವು ಮದುವೆ ಆಗುವ ಹುಡುಗ ತಮ್ಮ ಈ ಒಂದು ಶರತ್ತನ್ನು ಪಾಲಿಸಲೇಬೇಕು ಎಂಬುದಾಗಿ ಸಾರಾ ಅಲಿ ಖಾನ್ ರವರು ಹೇಳಿದ್ದಾರೆ. ಅದೇನೆಂದರೆ ಅವರು ತಮ್ಮ ತಾಯಿಯನ್ನು ಸಾಕಷ್ಟು ಇಷ್ಟಪಡುತ್ತಾರೆ ಹೀಗಾಗಿ ಮದುವೆ ಆದಮೇಲೆ ಕೂಡ ಹುಡುಗ ತಮ್ಮೊಂದಿಗೆ ಹಾಗೂ ತಾಯಿಯ ಜೊತೆಗೆ ಇರಬೇಕು ಎಂಬುದಾಗಿ ಸಾರಾ ಅಲಿ ಖಾನ್ ಅವರ ಶರತ್ತಾಗಿದೆ. ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.