ಅಪಹಾಸ್ಯದ ನಡುವೆಯೂ ಕೂಡ ಯಾರು ಅಂದುಕೊಂಡಿರದ ಸಾಧನೆಯನ್ನು ಮಾಡಿದ ನಿತ್ಯಾನಂದಸ್ವಾಮಿ, ಅಸಾದ್ಯವಾದದನ್ನು ಸಾಧಿಸಿ ತೋರಿಸಿದ್ದು ಹೇಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗು ಸಾಕಷ್ಟು ವಿವಾದದಲ್ಲಿ ಸಿಲುಕಿಕೊಂಡು ಸುದ್ದಿಯಾಗಿದ್ದ ಬಿಡದಿಯ ಮಠದ ಸ್ವಾಮೀಜಿ ಆಗಿರುವ ನಿತ್ಯಾನಂದ ರವರ ಕುರಿತಂತೆ ಗೊತ್ತೇ ಇರುತ್ತದೆ. ನಿತ್ಯಾನಂದ ಸ್ವಾಮಿಯ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಸಾಕಷ್ಟು ಕಾಮಿಡಿ ವಿಡಿಯೋಗಳು ಸರ್ವೇಸಾಮಾನ್ಯವಾಗಿದೆ ಇದನ್ನು ನೀವು ಕೂಡ ನೋಡಿ ಮನೋರಂಜನೆಯನ್ನು ಪಡೆದುಕೊಳ್ಳುತ್ತಿದ್ದಿರಿ.
ಇತ್ತೀಚಿಗಷ್ಟೇ ನಿತ್ಯಾನಂದ ಸ್ವಾಮಿ ಭಾರತ ದೇಶದಿಂದ ಹೊರಗೆ ಹೋಗಿ ಅಮೆರಿಕದ ಇಕ್ವೆಡಾರ್ ದ್ವೀಪದ ಬಳಿ ಇರುವ ದ್ವೀಪವನ್ನು ಖರೀದಿಸಿ ಅದಕ್ಕೆ ಕೈಲಾಸ ಎಂಬ ಹೊಸ ಹೆಸರನ್ನು ನೀಡಿ ಹೊಸ ದೇಶವನ್ನೇ ಕಟ್ಟಿದ್ದಾರೆ. ಮೊದಲೆಲ್ಲಾ ನಿತ್ಯಾನಂದಸ್ವಾಮಿ ಹೊಸ ದೇಶವನ್ನು ಕಟ್ಟುವ ಗುರುತು ಹೇಳಿದಾಗಲೆಲ್ಲ ನಾವು ಹಾಸ್ಯಸ್ಪದವಾಗಿ ತೆಗೆದುಕೊಳ್ಳುತ್ತಿದ್ದೆವು. ಆದರೆ ನಿತ್ಯಾನಂದ ಸ್ವಾಮಿ ಅದನ್ನು ಈಗ ಮಾಡಿ ಸಾಧಿಸಿ ತೋರಿಸಿದ್ದಾರೆ. ಇನ್ನು ಈ ದೇಶವನ್ನು ಇಡೀ ಪ್ರಪಂಚದಲ್ಲಿ ಕೇವಲ ಹಿಂದೂಗಳೇ ವಾಸಿಸುವ ಹಿಂದೂ ರಾಷ್ಟ್ರವೆಂಬುದು ಆಗಿ ಜಾಗತಿಕವಾಗಿ ಪ್ರದರ್ಶಿಸಲು ಸನ್ನದ್ಧರಾಗಿದ್ದಾರೆ. ಇನ್ನು ಕೈಲಾಸ ದೇಶಕ್ಕೆ ಜಗತ್ತಿನ ಏಕೈಕ ಹಿಂದೂ ರಾಷ್ಟ್ರವೆಂಬ ಜಾಗತಿಕ ಮಾನ್ಯತೆಯನ್ನು ತೆಗೆದುಕೊಳ್ಳಲು ವಿಶ್ವಸಂಸ್ಥೆಯಲ್ಲಿ ಸಾಕಷ್ಟು ಕಸರತ್ತುಗಳನ್ನು ನಿತ್ಯಾನಂದಸ್ವಾಮಿ ನಡೆಸುತ್ತಿದ್ದಾರೆ.

ಇನ್ನು ನಿತ್ಯಾನಂದಸ್ವಾಮಿ ಅವರ ಈ ಪ್ರಯತ್ನ ಫಲ ಕೊಡುವ ನಿರೀಕ್ಷೆಯಲ್ಲಿದ್ದಾರೆ. ಯಾಕೆಂದರೆ ಇತ್ತೀಚಿಗಷ್ಟೇ ವಿಶ್ವಸಂಸ್ಥೆಯ ಸಭೆಯಲ್ಲಿ ನಿತ್ಯಾನಂದ ಸ್ವಾಮಿಯವರ ಕೈಲಾಸ ದೇಶದ ಪ್ರತಿನಿಧಿಯಾಗಿ ಒಬ್ಬರು ಹೋಗಿ ಹಿಂದೂ ಧರ್ಮದ ಕುರಿತಂತೆ ಹಾಗೂ ದೇಶದ ಕುರಿತಂತೆ ಭಾಷಣ ಮಾಡಿ ಬಂದಿದ್ದಾರೆ. ವಿಶ್ವಸಂಸ್ಥೆಯ ಮಾನ್ಯತೆ ಇಲ್ಲದ ಯಾವುದೇ ದೇಶಗಳು ಕೂಡ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಆಗಲು ಸಾಧ್ಯವಿಲ್ಲ. ಹೀಗಾಗಿ ನಿತ್ಯಾನಂದ ಸ್ವಾಮಿ ಅವರ ಪರವಾಗಿ ಹಿಂದೂ ಸಂಸ್ಕೃತಿಯ ಕುರಿತಂತೆ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ್ದಾರೆ. ಇನ್ನು ಇವರು ಮಾತಾಡಿರುವ ವಿಚಾರಗಳು ಕೂಡ ವಿಶ್ವಸಂಸ್ಥೆಯಲ್ಲಿ ಸಾಕಷ್ಟು ಪ್ರಭಾವ ಬೀರಿದೆ ಎಂದು ಹೇಳಬಹುದಾಗಿದೆ. ಮೊದಲಿನಿಂದಲೂ ಕೂಡ ಕೈಲಾಸ ದೇಶವನ್ನು ವಿಶ್ವಸಂಸ್ಥೆಯಲ್ಲಿ ಸದಸ್ಯ ರಾಷ್ಟ್ರವನ್ನಾಗಿ ಮಾಡಲು ನಿತ್ಯಾನಂದ ರವರ ಲೀಗಲ್ ಟೀಂ ಸಾಕಷ್ಟು ಪರಿಶ್ರಮ ಪಡುತ್ತಿದೆ.