ಇದ್ದಕ್ಕಿದ್ದಂತೆ ಅಶ್ವಿನಿ ಮನೆಗೆ ಬಂದ ನಟಿ ಮೇಘನಾ ರಾಜ್ ! ಮೇಘನಾ ಹೇಳಿದ್ದು ಕೇಳಿ ಕಣ್ಣೀರಿಟ್ಟ ಅಶ್ವಿನಿ. ಹೇಳಿದ್ದೇನು ಗೊತ್ತೇ??

1,508

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈಗಾಗಲೆ ನಮ್ಮನ್ನೆಲ್ಲಾ ಅಗಲಿ ಸಾಕಷ್ಟು ಸಮಯ ಕಳೆದರೂ ಕೂಡ ಇಂದಿಗೂ ಕೂಡ ಅವರ ಸಮಾಧಿಯ ಬಳಿ ಬರುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಇನ್ನು ಇತ್ತೀಚಿಗಷ್ಟೇ ನಟಿ ಮೇಘನಾ ರಾಜ್ ರವರು ಕೂಡ ಪುನೀತ್ ರಾಜಕುಮಾರ್ ರವರ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಭೇಟಿ ನೀಡಿ ದರ್ಶನ ಪಡೆದು ನಮಸ್ಕರಿಸಿ ಅವರ ಮನೆಗೆ ಹೋಗಿದ್ದಾರೆ.

ಇನ್ನು ಈಗಾಗಲೇ ಮೇಘನಾ ರಾಜ್ ರವರು ಚಿರು ಸರ್ಜಾ ರವರನ್ನು ಕಳೆದುಕೊಂಡಿರುವುದರಿಂದ ಅಶ್ವಿನಿಯವರ ಪರಿಸ್ಥಿತಿ ಏನೆಂಬುದನ್ನು ಅವರು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲರು. ಇನ್ನು ಮೇಘನಾರಾಜ್ ರವರು ತಮ್ಮ ಮಗ ರಾಯನ್ ರಾಜ್ ಸರ್ಜಾ ರವರನ್ನು ಕರೆದುಕೊಂಡು ಸದಾಶಿವನಗರದಲ್ಲಿರುವ ಅಶ್ವಿನಿ ಅವರ ಮನೆಗೆ ಹೋಗಿ ಅವರಿಗೆ ಸಂತೈಸುವ ಕೆಲಸವನ್ನು ಮಾಡಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ಸರ್ಜಾ ಕುಟುಂಬ ಹಾಗೂ ಪುನೀತ್ ರಾಜಕುಮಾರ್ ಅವರ ಕುಟುಂಬ ಮೊದಲಿನಿಂದಲೂ ಕೂಡ ಸಾಕಷ್ಟು ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಮೇಘನರಾಜ್ ರವರು ಅಶ್ವಿನಿ ಪುನೀತ್ ರಾಜಕುಮಾರ್ ರವರಿಗೆ ಕೆಲವು ಉತ್ತಮ ಮಾತುಗಳಿಂದ ಸಂತೈಸಿದ್ದಾರೆ. ನೀವು ನಿಮ್ಮ ಮಕ್ಕಳಿಗಾಗಿ ಬದುಕಬೇಕು. ನಿಮ್ಮ ಮಕ್ಕಳ ಉಜ್ವಲ ಭವಿಷ್ಯದಲ್ಲಿ ನೀವು ಪುನೀತ್ ರಾಜಕುಮಾರ್ ರವರನ್ನು ಕಾಣಬಹುದಾಗಿದೆ. ಪುನೀತ್ ರಾಜಕುಮಾರ್ ರವರು ಎಲ್ಲೂ ಹೋಗಿಲ್ಲ ಅವರನ್ನು ಆರಾಧಿಸುವ ಕೋಟ್ಯಾಂತರ ಅಭಿಮಾನಿಗಳಲ್ಲಿ ಅವರನ್ನು ನೀವು ಕಾಣಬಹುದು. ಅವರು ಮಾಡಿರುವ ನೂರಾರು ಜನಪರ ಕಾರ್ಯಗಳಲ್ಲಿ ನೀವು ಅವರನ್ನು ಕಾಣಬಹುದು ಎಂಬುದಾಗಿ ಅಶ್ವಿನಿ ಅವರನ್ನು ಮೇಘನರಾಜ್ ಸಮಾಧಾನ ಪಡಿಸಿದ್ದಾರೆ. ಇನ್ನು ಈ ಮಾತುಗಳನ್ನು ಕೇಳಿ ಅಶ್ವಿನಿಯವರು ಭಾವುಕರಾಗಿದ್ದಾರೆ.