ಬಿಗ್ ನ್ಯೂಸ್: ಪುನೀತ್ ರವರ ಕನಸಾದ ಗಂಧದಗುಡಿಯ ಟೀಸರ್ ನೋಡಿ ದರ್ಶನ್ ಹೇಳಿದ್ದೇನು ಗೊತ್ತಾ??
ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರ ಕನಸಿನ ಡ್ರೀಮ್ ಪ್ರಾಜೆಕ್ಟ್ ಆಗಿದ್ದ ಗಂಧದ ಗುಡಿ ಡಾಕ್ಯುಮೆಂಟರಿಯ ಟೈಟಲ್ ಟೀಸರ್ ಇಂದು ಪಿಆರ್ಕೆ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಲಾಕ್ ಡೌನ್ ಸಮಯದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಕರ್ನಾಟಕದ ಬಹುತೇಕ ಎಲ್ಲಾ ಕಾಡುಮೇಡುಗಳಲ್ಲಿ ಬೆಟ್ಟ ಜಲಪಾತಗಳಲ್ಲಿ ತಿರುಗಿ ದಂತಹ ವಿಡಿಯೋಗಳ ಸಂಗ್ರಹವೇ ಗಂಧದಗುಡಿ ಡಾಕ್ಯುಮೆಂಟರಿ.
ಕನ್ನಡನಾಡಿನ ಪ್ರಾಕೃತಿಕ ಸೌಂದರ್ಯವನ್ನು ಪ್ರತಿಯೊಬ್ಬ ಕನ್ನಡಿಗರಿಗೂ ಕೂಡ ತಲುಪಿಸುವಂತಹ ಕೆಲಸವನ್ನು ಮಾಡುವ ಕನಸನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕಂಡಿದ್ದರು. ಆ ಪ್ರಯತ್ನದ ಫಲವೇ ಇಂದು ನಾವು ನೋಡುತ್ತಿರುವ ನಯನ ಮನೋಹರ ದೃಶ್ಯಗಳನ್ನು ಒಳಗೊಂಡಂತಹ ಡಾಕ್ಯುಮೆಂಟರಿ ಗಂಧದಗುಡಿ. ಇನ್ನೂ ಕೆಲವು ಸಮಯಗಳ ಹಿಂದಷ್ಟೇ ಅಶ್ವಿನಿ ಪುನೀತ್ ರಾಜಕುಮಾರ್ ರವರು ತಮ್ಮ ಪತಿಯ ಕೊನೆಯ ಆಸೆಯನ್ನು ಈಡೇರಿಸುವುದಾಗಿ ಹೇಳಿಕೊಂಡಿದ್ದರು. ಅವರು ಹೇಳಿದಂತಹ ಮಾತಿನಂತೆ ಇಂದು ಗಂಧದಗುಡಿ ಡಾಕ್ಯುಮೆಂಟರಿಯ ಟೀಸರ್ ಬಿಡುಗಡೆಯಾಗಿದ್ದು 2022 ರಲ್ಲಿ ಚಿತ್ರಮಂದಿರಗಳಲ್ಲಿ ಡಾಕ್ಯುಮೆಂಟರಿ ಬಿಡುಗಡೆಯಾಗುವುದಾಗಿ ಟೀಸರ್ ನಲ್ಲಿ ಹೇಳಲಾಗಿದೆ.

ಇನ್ನು ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಕೂಡ ಹಾಗೂ ಅಭಿಮಾನಿಗಳು ಗಂಧದಗುಡಿಯ ಟೈಟಲ್ ಟೀಸರನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಯಶ್ ಕಿಚ್ಚ ಸುದೀಪ್ ಶಿವಣ್ಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೀಗೆ ಬಹುತೇಕ ಎಲ್ಲ ದೊಡ್ಡ ದೊಡ್ಡ ಸ್ಟಾರ್ ನಟರು ಅವರ ಕನಸಿನ ಗಂಧದಗುಡಿ ಡಾಕ್ಯುಮೆಂಟರಿಯ ಟೀಸರ್ ಅನ್ನು ಶೇರ್ ಮಾಡಿಕೊಂಡು ಅಪ್ಪು ಅವರನ್ನು ಸ್ಮರಿಸಿದ್ದಾರೆ. ಈ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಶೇರ್ ಮಾಡಿಕೊಂಡು ಟೀಸರ್ ಬಹಳಷ್ಟು ಸೊಗಸಾಗಿ ಮೂಡಿ ಬಂದಿದ್ದು ಅಪ್ಪು ಅವರು ಇಂದಿಗೂ ಕೂಡ ನಮ್ಮೊಂದಿಗೆ ಇರುವಂತೆ ಭಾಸವಾಗುತ್ತದೆ ಎಂಬುದಾಗಿ ಹೇಳಿದ್ದಾರೆ. ಅಪ್ಪು ಎಂದಿಗೂ ಸದಾ ಅಮರ ಎಂಬುದಾಗಿ ಕೂಡ ಭಾವುಕರಾಗಿ ಹೇಳಿದ್ದಾರೆ.