90 ರ ದಶಕದಲ್ಲಿ ಹುಡುಗರ ಹೃದಯ ಕದ್ದಿದ್ದ ಚೆಲುವೆ ವಿದ್ಯಾಶ್ರೀ ಈಗ ಹೇಗಿದ್ದಾರೆ ಗೊತ್ತೇ?? ಈಗಲೂ ನಟಿಯಾಗಬಹುದು ಸ್ವಾಮಿ.

1,053

ನಮಸ್ಕಾರ ಸ್ನೇಹಿತರೇ ನಾವು ಇಂದಿನ ಲೇಖನಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ಇಡೀ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿದ್ದ ನಟಿಯೊಬ್ಬರ ಕುರಿತು ಹೇಳಲು ಹೊರಟಿದ್ದೇವೆ. ಹೌದು ಗೆಳೆಯರೇ ನಾವು ಮಾತನಾಡಲು ಹೊರಟಿರುವುದು 90ರ ದಶಕದಲ್ಲಿ ಕನ್ನಡ ಚಿತ್ರರಂಗ ಮಾತ್ರವಲ್ಲದೇ ದಕ್ಷಿಣ ಭಾರತ ಚಿತ್ರರಂಗವನ್ನಾಳಿದ ನಟಿ ವಿದ್ಯಾಶ್ರೀ ಅವರ ಕುರಿತಂತೆ.

ನಟಿ ವಿದ್ಯಾಶ್ರೀ ಅವರು ನಟನೆಯಲ್ಲಿ ಮಾತ್ರವಲ್ಲದೆ ಭರತನಾಟ್ಯ ನೃತ್ಯಗಾರ್ತಿಯಾಗಿಯೂ ಕೂಡ ಇದುವರೆಗೂ 200ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿದ್ದಾರೆ. 1986 ರಲ್ಲಿ ತಮಿಳಿನ ಕೊಡೈ ಮಸಾಯ್ ಎನ್ನುವ ಚಿತ್ರದ ಮೂಲಕ ಚಿತ್ರಲೋಕಕ್ಕೆ ಪಾದರ್ಪಣೆ ಮಾಡುತ್ತಾರೆ. ಇನ್ನು ಕನ್ನಡ ಚಿತ್ರರಂಗಕ್ಕೆ ರಾಘವೇಂದ್ರ ರಾಜ್ ಕುಮಾರ್ ನಟನೆಯ ಅನುಕೂಲಕೊಬ್ಬ ಗಂಡ ಎಂಬ ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಾರೆ.

ರೋಲ್ಕಾಲ್ ರಾಮಕಷ್ಣ, ಕೊಲ್ಲೂರು ಕಳ್ಳ, ಅರಳಿದ ಹೂವುಗಳು, ಪುಕ್ಸಟ್ಟೆ ಗಂಡ ಹೊಟ್ಟೆ ತುಂಬಾ ಉಂಡ, ಚಿರಂಜೀವಿ ರಾಜಾಗೌಡ ಹೀಗೆ ಕನ್ನಡದಲ್ಲಿ ವಿದ್ಯಾಶ್ರೀ ಅವರು ಆರು ಚಿತ್ರಗಳಲ್ಲಿ ನಟಿಸಿದ್ದಾರೆ. ಒಟ್ಟಾರೆಯಾಗಿ ವಿದ್ಯಾಶ್ರೀ ಅವರು 45 ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು ಅದರಲ್ಲಿ ಮಲಯಾಳಂ ಚಿತ್ರಗಳು ಹೆಚ್ಚು ಎಂದು ಹೇಳಬಹುದಾಗಿದೆ. ಇನ್ನು ಈಗ ವಿದ್ಯಾಶ್ರೀ ಅವರು ಏನು ಮಾಡುತ್ತಿದ್ದಾರೆ ಎಂಬುದರ ಕುರಿತಂತೆ ನಾವು ನಿಮಗೆ ಹೇಳುತ್ತೇವೆ. 1996 ರಲ್ಲಿ ವಿದ್ಯಾಶ್ರೀ ಅವರು ರಾಜ್ ಎಂಬುವರನ್ನು ಮದುವೆಯಾಗಿದ್ದಾರೆ ಇನ್ನು ಇವರಿಗೆ ಶಶಾಂಕ್ ಎನ್ನುವ ಗಂಡು ಮಗನಿದ್ದಾನೆ. ಸದ್ಯಕ್ಕೆ ಮದುವೆ ಆದ ಮೇಲಿಂದ ನಟನೆಯನ್ನು ಸಂಪೂರ್ಣವಾಗಿ ಬಿಟ್ಟಿದ್ದು ವಿದ್ಯಾಶ್ರೀ ಅವರು ಯುಎಸ್ಎ ನ ಸೌತ್ ಕೆರೋಲಿನಾದಲ್ಲಿ ನೃತ್ಯಾಂಜಲಿ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥೆಯನ್ನು ನಡೆಸುತ್ತಿದ್ದಾರೆ.