ಹಂಸಲೇಖ ಹಾಗೂ ರವಿಚಂದ್ರನ್ ಕಾಂಬೀನೇಶನ್ ಎಲ್ಲರಿಗೂ ಗೊತ್ತು, ಹಂಸಲೇಖಗಿತಲೂ ಮೊದಲು ರವಿ ಸರ್ ಜೊತೆ ಇದ್ದ ಸಂಗೀತ ನಿರ್ದೇಶಕ ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ, ನಾದ ಬ್ರಹ್ಮ ಹಂಸಲೇಖ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೋಡಿ ಕನ್ನಡ ಚಿತ್ರರಂಗದಲ್ಲಿಯೇ ತುಂಬಾನೇ ಫೇಮಸ್. ಪ್ರೇಮಲೋಕ ಚಿತ್ರದಿಂದ ಪ್ರೀತ್ಸೋದ್ ತಪ್ಪಾ ಚಿತ್ರದ ವರೆಗೆ ಸಾಕಷ್ಟು ಹಿಟ್ ಹಾಡುಗಳನ್ನು ನೀಡಿದವರು ಹಂಸಲೇಖ. ಸುಮಾರು 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ಇವತ್ತಿಗೂ ನೆನಪಿಟ್ಟುಕೊಳ್ಳುವಂಥ ಅತ್ಯಧುತ ಹಾಡುಗಳನ್ನು ನೀಡಿರುವ ಹೆಗ್ಗಳಿಕೆ ಇವರದ್ದು.
ಕ್ರೇಜಿಸ್ಟಾರ್ ಎಂದರೆ ಅವರ ಸಿನಿಮಾದಲ್ಲಿ ಸಂಗೀತಕ್ಕೇ ಹೆಚ್ಚಿನ ಪ್ರಾಮುಖ್ಯತೆ. ಅತೀಹೆಚ್ಚು ಹಾಡುಗಳನ್ನು ಹೊಂದಿರುವ ಚಿತ್ರವೆಂದರೆ ಅದು ರವಿಚಂದ್ರನ್ ಅವರ ಸಿನಿಮಾಗಳು! 8-10 ಹಾಡುಗಳ ವರೆಗೆ ರವಿ ಸರ್ ಚಿತ್ರಗಳಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಈ ಎಲ್ಲಾ ಹಾಡುಗಳಲ್ಲಿ ಕಂಡುಬಂದ ಉತ್ತಮ ಸಾಹಿತ್ಯ ಸಂಗೀತ ನಿರ್ದೇಶಕ ಹಂಸಲೇಖ ಅವರದ್ದು. ಇನ್ನು ಹಂಸಲೇಖ ಅವರನ್ನು ರವಿ ಸರ್ ಹಾಗೂ ರವಿ ಸರ್ ಅವರ ತಪ್ಪುಗಳನ್ನು ಹಂಸಲೇಖ ತಿದ್ದಿ ತೀಡಿ ಚೊಕ್ಕವಾದ ಹಾದುಗಳನ್ನು ಕೊಡುಗೆಯಾಗಿ ನೀಡುತ್ತಿದ್ದುದು ಕನ್ನಡ ಚಿತ್ರರಂಗ ಮರೆಯುವಂಥದ್ದಲ್ಲ.

ಕನ್ನಡ ಚಿತ್ರರಂಗದಲ್ಲಿ ಹಂಸಲೇಖ ತನ್ನ ಛಾಪನ್ನು ಮೂಡಿಸುವುದಕ್ಕೂ ಮೊದಲು, ಆ ಸ್ಥಾನದಲ್ಲಿದ್ದವರು ಶಂಕರ್ ಗಣೇಶ್! ಈಶ್ವರಿ ಪ್ರೊಡಕ್ಷನ್ಸ್ ಸಂಗೀತ ನಿರ್ದೇಶಕರಾಗಿದ್ದ ಶಂಕರ್ ಗಣೇಶ ರವಿಚಂದ್ರನ್ ಅವರೊಡನೆ ಪ್ರಳಯಾಂತಕ, ಸಾವಿರ ಸುಳ್ಳು, ಅಸಂಭವ, ನಾ ನಿನ್ನ ಪ್ರೀತಿಸುವೆ, ಸ್ವಾಭಿಮಾನ, ನಾನು ನನ್ನ ಹೆಂಡತಿ ಮೊದಲಾದ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿ ಹಿಟ್ ಹಾಡುಗಳನ್ನು ನೀಡಿದ್ದಾರೆ. ತಮ್ಮ ವಯಕ್ತಿಕ ಕಾರಣಕ್ಕೆ ಚಿತ್ರರಂಗದಿಂದ ದೂರ ಉಳಿದ ಶಂಕರ್ ಗಣೇಶ್ ಜಾಗವನ್ನು ಅಕ್ಷರಶಃ ತುಂಬಿದವರು ನಾದಬ್ರಹ್ಮ ಹಂಸಲೇಖ. ಅದಾದ ಬಳಿಕ ಕನ್ನಡ ಚಿತ್ರರಂಗಕ್ಕೆ ಇವತ್ತಿಗೂ ಇತರರಿಗೂ ಗುರುವಾಗಿ, ಗುರಿಮುಟ್ಟುವಲ್ಲಿಯೂ ಮಾರ್ಗದರ್ಶನ ನೀಡುತ್ತಿದ್ದಾರೆ ಸಂಗೀತ ನಿರ್ದೇಶಕ ಹಂಸಲೇಖ!