ಕನ್ನಡ ಟಾಪ್ ಐದರ ಧಾರಾವಾಹಿಗಳಲ್ಲಿ ಒಂದಾಗಿರುವ ನಾಗಿಣಿ – 2 ಸೀರಿಯಲ್ ನಿಂದ ಬಂತು ಷಾಕಿಂಗ್ ಸುದ್ದಿ, ಏನು ಗೊತ್ತೇ???

631

ನಮಸ್ಕಾರ ಸ್ನೇಹಿತರೇ ನಾಗಿಣಿ ಸೀರೀಸ್ ನ ಧಾರವಾಹಿಗಳು ಒಂದು ರೀತಿಯ ಎವರ್ ಗ್ರೀನ್ ಧಾರವಾಹಿಗಳು. ನಾಗದೇವತೆ ಕತೆ ಇರುವ ಈ ಸೀರಿಯಲ್ ಗಳು ಹಲವಾರು ಭಾಷೆಗಳಲ್ಲಿ ಹಲವಾರು ಭಾರಿ ಬಂದಿವೆ. ಆದರೇ ಪ್ರತಿ ಭಾರಿಯೂ ಇಂತಹ ಸೀರಿಯಲ್ ಗಳು ಪ್ರಸಾರವಾದಾಗ ಜನರನ್ನ ಸುಲಭವಾಗಿ ತಲುಪುತ್ತವೆ. ಈಗ ಕನ್ನಡದ ಸೀರಿಯಲ್ ಗಳಲ್ಲಿ ಹಲವಾರು ಭಾರಿ ನಾಗಿಣಿ ಕಥಾ ಹಂದರದ ಧಾರಾವಾಹಿಗಳು ಬಂದು ಅವುಗಳು ಯಶಸ್ವಿಯೂ ಸಹ ಆಗಿದ್ದವು.

ಈಗ ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ – 2 ಸಹ ಉತ್ತಮವಾಗಿ ಪ್ರಸಾರವಾಗುತ್ತಿದ್ದು, ಸದ್ಯ 400 ಏಪಿಸೋಡ್ ಗಳನ್ನ ಯಶಸ್ವಿಯಾಗಿ ಮುಟ್ಟಿ ಮುಂದಕ್ಕೆ ಹೋಗುತ್ತಿದೆ. ನಾಗಿಣಿ – 2 ಧಾರವಾಹಿಯಲ್ಲಿ ನಾಯಕ ತ್ರಿಶೂಲ್ ಹಾಗೂ ನಾಗಿಣಿ ಶಿವಾನಿ ಪಾತ್ರಧಾರಿಯ ನಡುವೆ ಸಾಗುವ ಪ್ರೇಮಕತೆಯೇ ಮುಖ್ಯ ಹಂದರವಾಗಿದೆ. ಇಬ್ಬರ ನಡುವೆ ಸಾಗುವ ಪ್ರೇಮ ಕತೆಯು ಜನರಿಗೆ ಬಹಳ ಖುಷಿ ನೀಡುತ್ತಿದೆ.

ಈಗ ಧಾರವಾಹಿಯಲ್ಲಿ ಟ್ವಿಸ್ಟ್ ವೊಂದು ದೊರೆತಿದ್ದು, ಧಾರವಾಹಿಯ ಮತ್ತೊಂದು ಪ್ರಮುಖ ಪಾತ್ರ ದಮಯಂತಿ ಪಾತ್ರದಲ್ಲಿ ಅಭಿನಯಿಸುತ್ತಿದ್ದ ಜೆನ್ನಿಫರ್ ಸೀರಿಯಲ್ ನಿಂದಲೆ ಹೊರ ನಡೆದಿದ್ದಾರೆ. ಅಚ್ಚರಿಯೆಂಬಂತೆ ಈ ಪಾತ್ರಕ್ಕೆ ಈಗ ಕನ್ನಡದ ಹಿರಿಯ ನಟಿ ರೇಖಾ ದಾಸ್ ಆ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನಾಗಿಣಿ – 2 ಧಾರವಾಹಿ ಸದ್ಯ 400 ಏಪಿಸೋಡ್ ಗಳನ್ನ ಮುಗಿಸಿದ್ದು, ಮುಂದೆ ಇನ್ನಷ್ಟು ಟ್ವಿಸ್ಟ್ ಗಳ ಮೂಲಕ ಹೆಚ್ಚು ಜನರನ್ನು ಮನರಂಜಿಸಲಿದೆ ಎಂದು ನಿರ್ದೇಶಕ ಕೆ‌.ಎಸ್.ರಾಮ್ ಜೀ ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.