ಮೊದಲು ಸೀರಿಯಲ್ ಗಳಲ್ಲಿ ನಟನೆ ಮಾಡಿ, ಕಿರುತೆರೆಯಲ್ಲಿ ಮೋಡಿ ಮಾಡಿ ಇಂದು ಸ್ಟಾರ್ ನಟರಾಗಿರುವವರು ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಹಲವಾರು ಜನ ಆದರೆ ನಿಮಗೆ ಯಾವ ಹಿನ್ನೆಲೆ ಕುರಿತು ಮಾಹಿತಿ ಇರುವುದಿಲ್ಲ. ನಮ್ಮ ಕನ್ನಡ ಚಿತ್ರರಂಗದಲ್ಲಿ ಅದೆಷ್ಟುಜನ ಸ್ಟಾರ್ ನಟರು ಕಿರುತೆರೆ ಹಿನ್ನೆಲೆಯಿಂದ ಬಂದಿದ್ದಾರೆ ಎಂಬುದು ನಿಮಗೆ ಗೊತ್ತಿದೆಯೇ. ಹೌದು ಸ್ನೇಹಿತರೇ ನಾವು ಇಂದಿನ ವಿಚಾರದಲ್ಲಿ ಕಿರುತೆರೆ ಹಿನ್ನೆಲೆಯಿಂದ ಬಂದಂತಹ ನಟರ ಕುರಿತಂತೆ ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ ತಪ್ಪದೆ ಕೊನೆಯವರೆಗೂ ಓದಿ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಶ್ರೀನಿವಾಸ್ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಖ್ಯಾತರಾಗಿರುವ ದರ್ಶನ್ ಅವರು ಕೂಡ ಕಿರುತೆರೆಯ ಮೂಲದಿಂದ ಬಂದವರು. ಅಂಬಿಕ ಎಂಬ ಧಾರವಾಹಿಯ ಮೂಲಕ ಮನರಂಜನೆ ಕ್ಷೇತ್ರಕ್ಕೆ ಕಾಲಿಟ್ಟ ದರ್ಶನ್ ರವರು ಇಂದು ಕನ್ನಡ ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಎಂಬ ಹೆಸರಿನಿಂದ ಜನಪ್ರಿಯರಾಗಿದ್ದಾರೆ. ಇನ್ನು ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಚಿತ್ರ ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಿದೆ.

ರಾಕಿಂಗ್ ಸ್ಟಾರ್ ಯಶ್ ನವೀನ ಗೌಡ ಆಗಿದ್ದ ಯಶ್ ರವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಮೊಗ್ಗಿನ ಮನಸ್ಸು ಚಿತ್ರದಿಂದ. ಆದರೆ ಅವರು ಕನ್ನಡ ಚಿತ್ರಗಳಲ್ಲಿ ನಟಿಸುವ ಮೊದಲು ನಂದಗೋಕುಲ ಎಂಬ ಧಾರವಾಹಿ ಮೂಲಕ ಕಿರುತೆರೆಯ ಪ್ರೇಕ್ಷಕರಿಗೆ ಪರಿಚಿತರಾಗುತ್ತಾರೆ. ಈಗ ನಿಮಗೆಲ್ಲ ತಿಳಿದಿರುವಂತೆ ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಚಿತ್ರದ ಮೂಲಕ ವಿಶ್ವಾದ್ಯಂತ ಜನಪ್ರಿಯರಾಗಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ ನಂತರ ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮೊದಲ 50 ಕೋಟಿ ಗಳಿಕೆ ಕಂಡಂತಹ ಚಿತ್ರವನ್ನು ನೀಡಿದಂತಹ ಗೋಲ್ಡನ್ ಸ್ಟಾರ್ ಗಣೇಶ್ ರವರು ಕೂಡ ಪಾಪ ಪಾಂಡು ಎಂಬ ಕಾಮಿಡಿ ಧಾರವಾಹಿಯ ಮೂಲಕ ಮನರಂಜನೆ ಕ್ಷೇತ್ರಕ್ಕೆ ಪರಿಚಿತರಾಗುತ್ತಾರೆ. ರಮೇಶ್ ಅರವಿಂದ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಹಾಗೂ ಎವರ್ಗ್ರೀನ್ ನಿರ್ದೇಶಕ ಹಾಗೂ ನಟನಾಗಿರುವ ರಮೇಶ್ ಅರವಿಂದ್ ರವರು ಕೂಡ ಪರಿಚಯ ಎಂಬ ಕಿರುತೆರೆಯ ಕಾರ್ಯಕ್ರಮದ ಮೂಲಕ ಎಲ್ಲರಿಗೆ ಪರಿಚಿತರಾಗಿ ನಂತರ ಸಿನಿಮಾಗಳಲ್ಲಿ ಅಭಿಮಾನಿಗಳನ್ನು ಪಡೆಯುತ್ತಾರೆ.

ಪ್ರಕಾಶ್ ರಾಜ್ ಕನ್ನಡ ಚಿತ್ರರಂಗದಿಂದ ತಮ್ಮ ಸಿನಿ ಜೀವನವನ್ನು ಪ್ರಾರಂಭಿಸಿ ನಂತರ ಈಗಾಗಲೇ ದೇಶದಾದ್ಯಂತ ಎಲ್ಲಾ ಭಾಷೆಯಲ್ಲಿ ಬಹುಬೇಡಿಕೆಯ ಪೋಷಕ ನಟ ಹಾಗೂ ಖಳನಾಯಕನ ಪಾತ್ರದಲ್ಲಿ ಮಿಂಚುತ್ತಿರುವ ಪ್ರಕಾಶ್ ರಾಜ್ ಅವರು ಕೂಡ ಗುಡ್ಡದ ಭೂತ ಎಂಬ ಧಾರವಾಹಿಯ ಮೂಲಕ ತಮ್ಮ ನಟನೆ ವೃತ್ತಿಜೀವನವನ್ನು ಪ್ರಾರಂಭಿಸುತ್ತಾರೆ. ಶ್ರೀನಗರ ಕಿಟ್ಟಿ ರವಿಬೆಳಗೆರೆಯವರ ಅಳಿಯ ನಾಗಿರುವ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಟನಾಗಿರುವ ಶ್ರೀನಗರ ಕಿಟ್ಟಿ ಅವರು ಕೂಡ ಚಂದ್ರಿಕಾ ಎಂಬ ಧಾರವಾಹಿಯ ಮೂಲಕ ಮೊದಲ ಬಾರಿಗೆ ಮನರಂಜನೆ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.
ದುನಿಯಾ ವಿಜಯ್ ಮೊದಲಿಗೆ ಸಾಹಸ ದೃಶ್ಯಗಳಲ್ಲಿ ಸೈಡ್ ಆಕ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದ ದುನಿಯಾ ವಿಜಯ್ ಅವರು ದುನಿಯಾ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆಯ ಛಾಪನ್ನು ಮೂಡಿಸುತ್ತಾರೆ. ಇನ್ನು ಇವರು ಕೂಡ ಪಾಪ ಪಾಂಡು ಧಾರವಾಹಿಯ ಮೂಲಕವೇ ಎಂಟ್ರಿ ನೀಡಿದ್ದು. ಚಂದನ್ ಗೌಡ ಕಿರುತೆರೆಯ ಧಾರಾವಾಹಿಗಳಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಚಂದನ್ ಗೌಡರವರು ಈಗಾಗಲೇ ಹಲವಾರು ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಇನ್ನು ಇವರು ಮೊದಲ ಬಾರಿ ಕಾಣಿಸಿದ್ದು ಪ್ರಖ್ಯಾತ ಲಕ್ಷ್ಮೀ ಬಾರಮ್ಮ ಧಾರವಾಹಿ ಮೂಲಕ ಎಂಬುದು ನಿಮಗೆಲ್ಲ ತಿಳಿದಿದೆ.

ವಿಜಯ್ ಸೂರ್ಯ ವಿಜಯ್ ಸೂರ್ಯ ಕೂಡ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಉದಯೋನ್ಮುಖ ಯುವ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇವರು ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಂತಹ ಸೂಪರ್ಹಿಟ್ ಧಾರವಾಹಿ ಅಗ್ನಿಸಾಕ್ಷಿ ಯಲ್ಲಿ ತಮ್ಮ ಮೊದಲ ಪರಿಚಯವನ್ನು ಮಾಡಿಕೊಳ್ಳುತ್ತಾರೆ. ಡಾರ್ಲಿಂಗ್ ಕೃಷ್ಣ ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್ ಚಿತ್ರದ ನಂತರ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಯಶಸ್ವಿ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರು ಕೂಡ ಕಾಣಿಸಿಕೊಂಡಿದ್ದು ಕೃಷ್ಣ-ರುಕ್ಮಿಣಿ ಧಾರವಾಹಿಯ ಮೂಲಕ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.