ಹೊಸ ವರ್ಷ ಹತ್ತಿರ ಬರುತ್ತಿದೆ, ಹೊಸ ವರ್ಷದ ಸಮಯದಲ್ಲಿ ಈ ವಸ್ತುಗಳನ್ನು ನಿಮ್ಮ ಮನೆಗೆ ತನ್ನಿ, ಜೀವನವೇ ಬದಲಾಗಿ ಹೋಗುತ್ತದೆ. ಯಾವ್ಯಾವು ಗೊತ್ತೇ??

51

ನಮಸ್ಕಾರ ಸ್ನೇಹಿತರೇ, ಹೊಸ ವರ್ಷ ಬಂತು ಅಂದ್ರೆ ಸಾಕು ಅದೇನೋ ಖುಷಿ, ಹೊಸತನದ ಹುಮ್ಮಸ್ಸು ಮನಸ್ಸಿನಲ್ಲಿ ತುಂಬಿಕೊಳ್ಳತ್ತೆ. ಹೊಸ ವರ್ಷಕ್ಕೆ ಹೊಸತನ್ನೇನಾದರೂ ಮಾಡಬೇಕು, ಕಳೆದ ವರ್ಷ ಮಾಡಿದ ತಪ್ಪನ್ನೇ ಮಾಡಬಾರದು ಅಂತೆಲ್ಲಾ ಅಂದುಕೊಳ್ತಿವಿ ಅಲ್ವಾ? ಹಾಗಾದರೆ ನಿಮ್ಮ ಯಶಸ್ಸಿಗಾಗಿ ನಾವು ಹೇಳುವ ಈ ಕೆಲವು ವಸ್ತುಗಳನ್ನು ಹೊಸವರ್ಷಕ್ಕೆ ಮನೆಗೆ ತಂದ್ರೆ ಎಷ್ಟು ಲಾಭವಾಗತ್ತೆ ಗೊತ್ತಾ?

ವಾಸ್ತು ಪ್ರಕಾರ ಕೆಲವು ವಸ್ತುಗಳು ಮನೆಯಲ್ಲಿದ್ದರೆ ಅದು ಮನೆಗೂ ಮನಸ್ಸಿಗೂ ಒಳ್ಳೆಯದನ್ನೇ ಮಾಡುತ್ತದೆ. ಕೆಲವು ವಸ್ತುಗಳು ಮನೆಗೆ ಶ್ರೇಯೋಭಿವೃದ್ಧಿಯನ್ನು ತರುತ್ತವೆ. ಅವುಗಳಲ್ಲಿ ಮೊದಲನೆಯದಾಗಿ ನವಿಲುಗರಿ. ನವಿಲುಗರಿ ಸಮೃದ್ಧಿಯನ್ನೂ, ಸಂಪತ್ತನ್ನೂ ತಂದುಕೊಡುತ್ತದೆ. ಸಕಾರಾತ್ಮಕ ಶಕ್ತಿಯನ್ನು ಮನೆಯಲ್ಲಿ ತುಂಬುತ್ತದೆ. ಮನೆಯಲ್ಲಿ ೧-೨ ನವಿಲುಗರಿಯನ್ನಷ್ಟೇ ಇಡಿ. ಅದಕ್ಕಿಂತ ಹೆಚ್ಚು ಇಡಬಾರದು.

ಇನ್ನು ಗೋಮತಿ ಚಕ್ರ. ಇದು ಸಮೃದ್ಧಿ, ಸಂತೋಷ, ಉತ್ತಮ ಆರೋಗ್ಯದ ಸಂಕೇತ. ಮನಸ್ಸಿಗೆ ಶಾಂತಿಯನ್ನು ನೀಡುವಂಥದ್ದು. 11 ಗೋಮತಿ ಚಕ್ರಗಳನ್ನು ಹಳದಿ ಬಣ್ಣದ ಬಟ್ಟೆಯಲ್ಲಿ ಕಟ್ಟಿ ಅದನ್ನು ಕಪಾಟಿನಲ್ಲಿ ಇಟ್ಟರೆ ಒಳ್ಳೆಯದಾಗುತ್ತದೆ. ಇನ್ನು ಅಡಿಕೆ. ರೈತರ ಜೀವಾಳವಾಗಿರುವ ಅಡಿಕೆ ಪೂಜನೀಯವೂ ಕೂಡ. ಇದನ್ನು ಹಣದ ಸಮಾನವಾಗಿ ಕಾಣಲಾಗುತ್ತದೆ. ಹಾಗಾಗಿ ಮನೆಯಲ್ಲಿ ದುಡ್ಡು ಇಡುವ ಕಡೆಯೆ ಅಡಿಕೆಯನ್ನು ಇಟ್ಟರೆ ಆರ್ಥಿಕ ಸಬಲತೆ ಸಿಗುತ್ತದೆ.

ಸಾಮಾನ್ಯವಾಗಿ ಕೈಬೆರಳುಗಳಿಗೆ ಆಮೆಯ ಉಂಗುರ ಧರಿಸುವುದನು ನೀವು ಕಾಣಬಹುದು. ಇದು ಸಂಪತ್ತಿನ ಸಂಕೇತ. ಇನ್ನು ಆಮೆ ಮೂರ್ತಿಯನ್ನು ಮನೆಯಲ್ಲಿ ತಂದು ಇಡುವುದು ಶ್ರೇಯಸ್ಕರ. ಹಿತ್ತಾಳೆ, ಕಂಚು ಅಥವಾ ಬೆಳ್ಳಿ ಆಮೆಯನ್ನು ತಂದು ಮನೆಯಲ್ಲಿ ಉತ್ತರ ದಿಕ್ಕಿನಲ್ಲಿ ಮುಖ ಮಾಡಿ ಇಟ್ಟರೆ ಮನೆಯಲ್ಲಿ ಲಕ್ಷ್ಮಿ ವಾಸಮಾಡುತ್ತಾಳೆ ಎಂದು ಹೇಳಲಾಗುತ್ತದೆ. ಇನ್ನು ಮಂಗಳಕರವಾದ ತುಳಸಿ ಗಿಡವನ್ನು ಹೊಸವರ್ಷದಂದು ಮನೆಗೆ ತನ್ನಿ, ಜೊತೆಗೆ ಒಂದು ಮನಿ ಪ್ಲಾಂಟ್ ಕೂಡ ಇರಲಿ. ಈ ಎರಡೂ ಗಿಡಗಳನ್ನು ಮನೆಯಲ್ಲಿಟ್ಟರೆ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ನೆಮ್ಮದಿ ದೊರೆಯುತ್ತದೆ.