ಟಾಪ್ ನಟಿಯಾಗಬೇಕು ಎನ್ನುವ ಕನಸಿನಿಂದ ಬಂದಳು, ಆದರೆ ಆರು ಸಾವಿರ ರೂಪಾಯಿ ಇವರ ಜೀವನವನ್ನು ಏನು ಮಾಡಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಚಿತ್ರರಂಗ ಎನ್ನುವುದು ಯುವಪ್ರತಿಭೆಗಳನ್ನು ಕೈಬೀಸಿ ಕರೆಯುತ್ತಲೇ ಇರುತ್ತದೆ. ಆದರೆ ಚಿತ್ರರಂಗ ಅಂದರೆ ಸಿನಿಮಾರಂಗ ಎನ್ನುವುದು ಅಷ್ಟೊಂದು ಸುಲಭವಾದ ಕ್ಷೇತ್ರವಲ್ಲ. ಈ ಕ್ಷೇತ್ರದಲ್ಲಿ ರಾತ್ರೋರಾತ್ರಿ ಸೆಲೆಬ್ರಿಟಿ ಕೂಡ ಆಗಬಹುದು ಯಾಮಾರಿದರೆ ಯಾರಿಗೂ ಕಾಣದಂತೆ ಆರಡಿ ಭೂಮಿಯ ಒಳಗಡೆ ನಿರ್ಜೀವವಾಗಿ ಕೂಡ ಹೋಗಬಹುದು. ಆದರೆ ಇದರ ಸಾಧಕ ಹಾಗೂ ಬಾಧಕಗಳನ್ನು ಅರಿತು ಈ ಕ್ಷೇತ್ರಕ್ಕೆ ಕಾಲಿಡಲು ಜಗತ್ತಿನ ಯುವ ಪ್ರತಿಭೆಗಳು ಯಾವುದನ್ನು ಕೂಡ ಯೋಚಿಸುತ್ತಿಲ್ಲ.
ಹೀಗಾಗಿ ನಾವು ಈ ಬಣ್ಣದ ದುನಿಯಾದ ಆಸೆಗಾಗಿ ಬಂದು ನಂತರ ಹೇಳಹೆಸರಿಲ್ಲದಂತೆ ಮಾಯವಾಗಿ ಹೋಗುವವರನ್ನು ಸುದ್ದಿಗಳಲ್ಲಿ ಕೇಳುತ್ತಿರುತ್ತೇವೆ. ಇನ್ನು ಇಂದು ನಾವು ಮಾತನಾಡಲು ಹೊರಟಿರುವ ಹುಡುಗಿ ಕೂಡ 21 ವರ್ಷದ ಕೃತಿಕಾ ಎನ್ನುವುದಾಗಿ. ಇವಳು ಹರಿದ್ವಾರದಿಂದ ಹೊಸ ಬದುಕನ್ನು ಕಟ್ಟಿಕೊಳ್ಳುವ ಕನಸಿನಿಂದ ಮುಂಬೈಗೆ ಬಂದು ಕೈತುಂಬ ಸಂಬಳ ಇರುವ ಕೆಲಸವನ್ನು ಕೂಡ ಪಡೆಯುತ್ತಾಳೆ. ಇನ್ನು ಇವಳು ಕೆಲಸದ ಜೊತೆಗೆ ಮಾಡೆಲಿಂಗ್ ಕೂಡ ಮಾಡುತ್ತಾ ರಣವತ್ ಎನ್ನುವ ಚಿತ್ರದಲ್ಲಿ ಪುಟ್ಟ ಪಾತ್ರವನ್ನು ನಿರ್ವಹಿಸುತ್ತಾಳೆ.

ಇದಾದ ನಂತರ ಅವಳಿಗೆ ಈ ಕ್ಷೇತ್ರದಲ್ಲಿ ಸಾಕಷ್ಟು ಹಣದ ಹೊಳೆಯೇ ಹರಿದು ಬರುತ್ತದೆ. ಇನ್ನು ಇವಳು ಅಪಾರ್ಟ್ಮೆಂಟ್ ಒಂದರಲ್ಲಿ ಫ್ಲ್ಯಾಟನ್ನು ಕೂಡ ಖರೀದಿಸುತ್ತಾಳೆ. ಇನ್ನು ಇವಳಿಗೆ ಹಣವನ್ನು ಹೇಗೆ ಖರ್ಚು ಮಾಡಬಹುದು ಎಂಬ ಪರಿವೆಯೂ ಕೂಡ ಇಲ್ಲದೆ ಬೇಕಾಬಿಟ್ಟಿಯಾಗಿ ಹಣವನ್ನು ಖರ್ಚು ಮಾಡಿ ಪೋಲು ಮಾಡುತ್ತಾಳೆ. ಹಣ ಹೆಚ್ಚಾಗುತ್ತಿದ್ದಂತೆಯೇ ಇವಳಿಗೆ ದುಶ್ಚಟಗಳು ಕೂಡ ಪ್ರಾರಂಭವಾದವು. ಇನ್ನು ಇವಳು ಹಲವಾರು ಧಾರವಾಹಿಗಳಲ್ಲಿ ಕೂಡ ಕಾಣಿಸಿಕೊಂಡಳು. ಇನ್ನು ಇವಳ ಚಟಕ್ಕಾಗಿ ಇವಳ ಆದಾಯದ ಹಣ ಸಾಕಾಗುತ್ತಿರಲಿಲ್ಲ.

ಇಷ್ಟು ಮಾತ್ರವಲ್ಲದೆ ಇದರಲ್ಲಿ ಆಕೆಯ ದುಬಾರಿ ಕಟ್ಟಡದ ಬಾಡಿಗೆಯನ್ನು ಕೂಡ ಸಂಭಾಳಿಸಬೇಕಾಗಿತ್ತು. ನಂತರ ಈಕೆ ವಿಜಯ್ ಎಂಬಾತನ ಜೊತೆಗೆ ಪ್ರೇಮಪಾಶದಲ್ಲಿ ಬಿದ್ದು ಮದುವೆಯಾಗುತ್ತಾಳೆ. ಇದಾದ ನಂತರ ಇಬ್ಬರು ಕೂಡ ಪರಸ್ಪರ ವಿಚ್ಛೇದನದ ಮೂಲಕ ದೂರವಾಗುತ್ತಾರೆ. ಇದಾದನಂತರ ಇವಳು ಮನೋರೋಗಿಯಾಗಿ ಮಾರ್ಪಟ್ಟು ಸಂಪೂರ್ಣವಾಗಿ ಮಾದಕದ್ರವ್ಯಗಳ ವ್ಯಸನಿಯಾಗಿ ಬದಲಾಗುತ್ತಾಳೆ. ಎಷ್ಟರಮಟ್ಟಿಗೆ ಈ ಕೆಟ್ಟ ಚಟಕ್ಕೆ ಇವಳು ಅಡಿಕ್ಟ್ ಆಗುತ್ತಾಳೆ ಎಂದರೆ ಊಟ ಬಿಟ್ಟರು ಕೂಡ ಕೆಟ್ಟ ಅಭ್ಯಾಸ ಗಳನ್ನು ಬಿಡುತ್ತಿರಲಿಲ್ಲ
ನಂತರ ಇವಳನ್ನು ಅವಳು ಇದ್ದ ಅಪಾರ್ಟ್ಮೆಂಟ್ನ ವಾಸಿಗಳು ಪೊಲೀಸರ ಸಹಾಯದಿಂದ ಹೊರಗೆ ಹಾಕುತ್ತಾರೆ. ನಂತರ ಇವಳು ಬೇರೆ ಅಪಾರ್ಟ್ಮೆಂಟ್ ಒಂದನ್ನು ಬಾಡಿಗೆಗೆ ಪಡೆಯುತ್ತಾಳೆ. ಅಲ್ಲೂ ಕೂಡ ಏಕೆ ಇದೇ ಕೆಟ್ಟ ಚಾಳಿಯನ್ನು ಮತ್ತೆ ಮುಂದುವರಿಸುತ್ತಾಳೆ. ಎಷ್ಟರಮಟ್ಟಿಗೆ ಮಾದಕ ದ್ರವ್ಯಗಳನ್ನು ಬಳಸುತ್ತಾಳೆ ಎಂದರೆ ಅದರ ಸಾಲವನ್ನು ತೀರಿಸಲಾಗದೆ ತಾನೇ ತನ್ನ ಜೀವವನ್ನು ಕಳೆದುಕೊಳ್ಳುತ್ತಾಳೆ.

ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಹಾಗೂ ಮಾಡಲಾಗಿರುವ ಕೃತಿಕಾ ಳ ಈ ಸ್ಟೋರಿಯನ್ನು ನಿಮಗೆಲ್ಲ ಹೇಳಿರುವ ಮುಖ್ಯ ಉದ್ದೇಶವೆಂದರೆ ಇಂದಿನ ಯುವಜನತೆ ಕೆಟ್ಟ ಹವ್ಯಾಸಗಳಿಗೆ ದಾಸರಾಗಿದ್ದಾರೆ. ತಂದೆ-ತಾಯಿಗಳು ನಿಮ್ಮ ಕುರಿತಂತೆ ಸಾಕಷ್ಟು ಕನಸುಗಳನ್ನು ಕಂಡಿರುತ್ತಾರೆ ಅವರಿಗೆ ಮೋಸ ಮಾಡದೆ ನಿಮ್ಮ ಜೀವನದ ಕುರಿತಂತೆ ಜೋಪಾನವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಿ ಎಂಬುದನ್ನು ನಿಮಗೆ ಮನವರಿಕೆ ಮಾಡಲು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸಲ್ಲಿ ಹಂಚಿಕೊಳ್ಳಿ.