ಸಾಮಾನ್ಯರಂತೆ ಸಾಲಿನಲ್ಲಿ ಬಂದು ಪುನೀತ್ ರವರ ಸಮಾಧಿ ದರ್ಶನವನ್ನು ಪಡೆದ ಟಾಪ್ ಮಾಡೆಲ್, ವಿಡಿಯೋ ಸಮೇತ.
ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕಳೆದುಕೊಂಡಿರುವುದಕ್ಕೆ ಇಂದಿಗೂ ಕೂಡ ಯಾವೊಬ್ಬ ಕನ್ನಡಿಗನಿಗೂ ಕೂಡ ಕಡಿಮೆಯಾಗಿಲ್ಲ. ಕನ್ನಡ ಚಿತ್ರರಂಗದ ಧ್ರುವತಾರೆ ಆಗಿದ್ದ ಪುನೀತ್ ರಾಜಕುಮಾರ್ ರವರು ಅಕಾಲಿಕವಾಗಿ ನಮ್ಮನ್ನೆಲ್ಲಾ ಆಗಲಿರುವುದು ಖಂಡಿತವಾಗಿ ಪ್ರತಿಯೊಬ್ಬ ಮನುಷ್ಯನಿಗೆ ಅತೀವ ದುಃಖವನ್ನು ತರಿಸುವಂತಹ ವಿಷಯ. ತಮ್ಮ ಮನೋಜ್ಞವಾದ ನಟನೆ ನೃತ್ಯ ಹಾಗೂ ಸಾಹಸ ದೃಶ್ಯಗಳ ಮೂಲಕ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬೇರೆ ಭಾಷೆಗಳ ಪ್ರೇಕ್ಷಕರನ್ನು ಕೂಡ ಗೆದ್ದಂತಹ ಅಪರೂಪದ ಕಲಾವಿದ.
ಇಂದಿಗೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಎಂದರೆ ಪರಭಾಷೆಯ ಚಿತ್ರಗಳ ಸ್ಟಾರ್ ನಟರಿಗೆ ಎಲ್ಲಿಲ್ಲದ ಸಂಭ್ರಮ. ಯಾಕೆಂದರೆ ಎಲ್ಲರೊಂದಿಗೂ ಕೂಡ ಸಹೋದರತ್ವದ ಸಂಬಂಧವನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹೊಂದಿದ್ದರು. ಇನ್ನೊಬ್ಬ ರಾಜಕುಮಾರ್ ರವರು ಮರಣಹೊಂದಿದಾಗ ಬಂದಿರುವಂತಹ 25 ಲಕ್ಷಕ್ಕೂ ಅಧಿಕ ಜನರ ಪ್ರೀತಿಯನ್ನು ನೋಡಿ ನೀವು ಅಂದುಕೊಳ್ಳಬಹುದು ಪುನೀತ್ ರಾಜಕುಮಾರ್ ಅವರು ಏನನ್ನು ಸಂಪಾದಿಸಿದ್ದಾರೆ ಎಂಬುದನ್ನು. ಇನ್ನು ಪುನೀತ್ ರಾಜಕುಮಾರ್ ರವರ ಸಮಾಧಿಗೆ ಅವರ ದರ್ಶನ ಪಡೆಯಲು ಈಗಾಗಲೇ ಹಲವಾರು ಸೆಲೆಬ್ರಿಟಿಗಳು ಕೂಡ ಬಂದು ಹೋಗಿದ್ದಾರೆ.
ಇನ್ನು ವರದಿಯೊಂದರ ಪ್ರಕಾರ ಇಂದಿಗೂ ಕೂಡ ಪ್ರತಿದಿನ ಆ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಅವರ ದರ್ಶನವನ್ನು ಪಡೆಯಲು 15 ಸಾವಿರಕ್ಕೂ ಅಧಿಕ ಮಂದಿ ಬರುತ್ತಾರೆ ಎಂಬುದಾಗಿ ಹೇಳಲಾಗುತ್ತಿದೆ. ಇನ್ನು ಇತ್ತೀಚಿಗಷ್ಟೇ ಮಾಡೆಲ್ ಒಬ್ಬರು ಸಾಮಾನ್ಯರಂತೆ ಕ್ಯೂ ನಲ್ಲಿ ನಿಂತು ಪುನೀತ್ ರಾಜಕುಮಾರ್ ಅವರ ಸಮಾಧಿ ದರ್ಶನ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇನ್ನು ವರದಿಗಳ ಪ್ರಕಾರ ಇವರು ಮುಂಬೈನಲ್ಲಿ ದೊಡ್ಡ ಮಾಡೆಲ್ ಎಂಬುದಾಗಿ ತಿಳಿದುಬಂದಿದೆ. ಇನ್ನು ಇವರು ಸರದಿ ಸಾಲಿನಲ್ಲಿ ನಿಂತು ಪುನೀತ್ ರಾಜಕುಮಾರ್ ಅವರ ಸಮಾಧಿ ದರ್ಶನವನ್ನು ಮಾಡಿರುವ ವಿಡಿಯೋವನ್ನು ನೀವು ಈ ಕೆಳಗಡೆ ನೋಡಬಹುದಾಗಿದೆ.