ಆಗಾಗ್ಗೆ ಟೊಮೊಟೊ, ಈರುಳ್ಳಿ ಬೆಲೆ ಜಾಸ್ತಿ ಆಗುತ್ತದೆ, ಆ ಸಮಯದಲ್ಲಿ ಟೊಮೊಟೊ,ಈರುಳ್ಳಿ ಇಲ್ಲದೆ ಸಾಂಬರ್ ಮಾಡುವುದು ಹೇಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ, ಆಗಾಗ್ಗೆ ಎಲ್ಲರಿಗೂ ಗೊತ್ತು ಪ್ರಕೃತಿ ವೈಪರಿತ್ಯದಿಂದ, ವರುಣನ ಆರ್ಭಟದಿಂದ ಬೆಳೆಗಳೆಲ್ಲಾ ನಾಶವಾಗಿ ರೈತರು ಚಿಂತೆ ಮಾಡುವಂತಾಗಿದೆ. ಅದರಲ್ಲಿಯೂ ನಾವು ಅಡುಗೆಗೆ ದಿನವೂ ಬಳಸುವ ಟೊಮ್ಯಾಟೋ ದರವಂತೂ ಗಗನಕ್ಕೇರಿದೆ. ಹಾಗಾದರೆ ಟೊಮ್ಯಾಟೊ ಇಲ್ಲದೆ ರಸಂ, ಸಾಂಬಾರ್ ಮಾಡೋದಾದ್ರೂ ಹೇಗೆ? ಖಂಡಿತ ಸಾಧ್ಯ. ಇಲ್ಲಿದೆ ಸುಲಭ ರೆಸಿಪಿ.

ಸಾರು ಮಾಡಲು ಬೇಕಾಗುವ ಸಾಮಗ್ರುಗಳು: ನಿಂಬೆಹಣ್ಣು- 1-2, ಎಣ್ಣೆ –ಅಗತ್ಯಕ್ಕೆ ತಕ್ಕಷ್ಟು, ಜೀರಿಗೆ – ಒಂದು ಚಮಚ, ಮೆಂತ್ಯೆ- 1 ಟೀ ಚಮಚ, ಒಣ ಮೆಣಸಿನಕಾಯಿ – 4, ಉದ್ದಿನಬೇಳೆ- 2 ಟೀ ಚಮಚ, ಬೆಳ್ಳುಳ್ಳಿ- 4 -5 ಎಸಳುಗಳು, ಹುಣಸೆಹಣ್ಣು ಸ್ವಲ್ಪ, ಉಪ್ಪು – ರುಚಿಗೆ ತಕ್ಕಷ್ಟು, ಹಸಿ ಮೆಣಸು – 2, ಅರಿಶಿನ- 1 ಟೀ ಚಮಚ.
ಸಾರು ಮಾಡುವ ವಿಧಾನ : ಮೊದಲು ನೀರಿಗೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಒಂದು ಮಿಕ್ಸಿಗೆ ಹುಣಸೆಹಣ್ಣು, ಹಸಿ ಮೆಣಸು, ಬೆಳ್ಳುಳ್ಳಿ ಹಾಕಿ ರುಬ್ಬಿಕೊಳ್ಳಿ. ಈಗ ಒಂದು ಪ್ಯಾನ್ ಗ್ಯಾಸ್ ಮೇಲಿಟ್ಟು ಎಣ್ಣೆ ಹಾಕಿ ಬಿಸಿಮಾಡಿಕೊಳ್ಳಿ. ಎಣ್ಣೆ ಕಾದ ನಂತರ ಅದಕ್ಕೆ ಜೀರಿಗೆ ಹಾಕಿ ನಂತರ ಅದಕ್ಕೆ ಅರ್ಧ ಚಮಚ ಮೆಂತ್ಯ ಹಾಕಿ ಚನ್ನಾಗಿ ಹುರಿಯಿರಿ. ಈಗ ಇದಕ್ಕೆ ಒಣ ಮೆಣಸಿನಕಾಯಿ, ಬೆಳ್ಳುಳ್ಳಿ ಎಸಳು, ಉದ್ದಿನಬೇಳೆ ಹಾಕಿ ಹುರಿಯಿರಿ. ಈ ಮಿಶ್ರಣ ತಣ್ನಗಾದ ನಂತರ ಅದನ್ನು ಪುಡಿ ಮಾಡಿಕೊಳ್ಳಿ.
ಈಗ ಒಂದು ಬಾಣಲೆಯನ್ನು ಎಣ್ಣೆಯನ್ನು ಹಾಕಿ. ಅದಕ್ಕೆ ರುಬ್ಬಿಕೊಂಡ ಪುಡಿಯನ್ನು ಹಾಕಿ ಸ್ವಲ್ಪ ಬಿಸಿ ಮಾಡಿ. ನಂತರ ರುಬ್ಬಿದ ಹುಣಸೆಹಣ್ಣಿನ ಪೇಸ್ಟ್ ಅನ್ನು ಸೇರಿಸಿ. ಅದಕ್ಕೆ ಅರಿಶಿನ ಮತ್ತು ಉಪ್ಪು ಹಾಕಿ. ನಂತರ ನಿಂಬೆ ರಸದ ನೀರನ್ನು ಬಾಣಲೆಗೆ ಹುಯ್ಯಿರಿ. ಅಗತ್ಯವಿದ್ದರೆ ಇನ್ನಷ್ಟು ನೀರನ್ನು ಹಾಕಿ. ನಂತರ ೫-೧೦ ನಿಮಿಷ ಕುದಿಸಿ ಗ್ಯಾಸ್ ಆಫ್ ಮಾಡಿದರೆ ರುಚಿಯಾದ ರಸಂ ಊಟಕ್ಕೆ ಸಿದ್ಧ!