ಕೋಚ್ ರಾಹುಲ್ ದ್ರಾವಿಡ್ ರವರಿಗೆ ಹೊಸ ತಲೆನೋವು ತಂದಿಟ್ಟ ನಾಯಕ ವಿರಾಟ್ ಕೊಹ್ಲಿ, ಹೇಗೆ ನಿಭಾಯಿಸುತ್ತಾರೆ?? ಏನು ಗೊತ್ತೇ??

11,451

ನಮಸ್ಕಾರ ಸ್ನೇಹಿತರೇ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ದದ ಮೊದಲನೇ ಟೆಸ್ಟ್ ಪಂದ್ಯ ರೋಚಕ ಡ್ರಾ ನಲ್ಲಿ ಕೊನೆಗೊಂಡಿತು. ಎರಡನೇ ಟೆಸ್ಟ್ ನಾಳೆಯಿಂದ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲನೇ ಟೆಸ್ಟ್ ಪಂದ್ಯವನ್ನು ಅಜಿಂಕ್ಯಾ ರಹಾನೆ ಮುನ್ನಡೆಸಿದ್ದರು. ಆದರೇ ಈಗ ಏರಡನೇ ಟೆಸ್ಟ್ ಗೆ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಸೇರಿಕೊಂಡಿದ್ದು, ಈಗ ವಿರಾಟ್ ಗೆ ಜಾಗ ಬಿಟ್ಟುಕೊಡುವುದು ಯಾರು ಎಂಬ ಟೆನ್ಷನ್ ಕೋಚ್ ರಾಹುಲ್ ದ್ರಾವಿಡ್ ತಲೆಗೇರಿದೆ.

ವಿರಾಟ್ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನಗಿಟ್ಟಿಸಿದ ಶ್ರೇಯಸ್ ಅಯ್ಯರ್ ಪದಾರ್ಪಣೆಯ ಪಂದ್ಯದಲ್ಲೇ ಶತಕ ಭಾರಿಸಿ, ಎರಡನೇ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಭಾರಿಸಿ ಗಮನ ಸೆಳೆದಿದ್ದರು. ಹೀಗಾಗಿ ಅವರನ್ನು ಕೈ ಬಿಡಲು ಆಗುವುದಿಲ್ಲ. ಹಾಗಾಗಿ ಸದ್ಯ ಫಾರ್ಮ್ ನಲ್ಲಿ ಇಲ್ಲದ ಪೂಜಾರ, ರಹಾನೆ ಹಾಗೂ ಮಯಾಂಕ್ ಅಗರ್ವಾಲ್ ತಲೆ ಮೇಲೆ ತೂಗುಕತ್ತಿ ನೇತಾಡುತ್ತಿದೆ. ಆದರೇ ಅನುಭವಿಗಳಾದ ಪೂಜಾರ ಹಾಗೂ ರಹಾನೆಯವರನ್ನ ಕೈ ಬಿಟ್ಟರೇ, ಮುಂದಿನ ಸರಣಿಗಳಲ್ಲಿ ತಂಡದ ಮೇಲೆ ನಕರಾತ್ಮಕ ಪರಿಣಾಮ ಬೀಳಬಹುದು. ಹಾಗಾಗಿ ಮಯಾಂಕ್ ಅಗರ್ವಾಲ್ ತಂಡದಿಂದ ಹೊರಹೋಗುವುದು ಖಚಿತ ಎಂದು ಹೇಳಲಾಗುತ್ತಿದೆ. ಆದರೇ ಮಯಾಂಕ್ ಹೊರಗುಳಿದರೇ, ಇನ್ನಿಂಗ್ಸ್ ಆರಂಭಿಸಿವುವವರಾರು ಎಂಬ ಪ್ರಶ್ನೆ ಸಹ ಎದುರಾಗಿದೆ.

ಇದಕ್ಕೆ ಉಪಾಯ ಮಾಡಿರುವ ರಾಹುಲ್ ದ್ರಾವಿಡ್, ವಿಕೇಟ್ ಕೀಪರ್ ಕೆ.ಎಸ್.ಭರತ್ ಟೆಸ್ಟ್ ಪದಾರ್ಪಣೆ ಮಾಡುವುದು ಬಹುತೇಖ ಖಚಿತ ಎಂದು ಹೇಳಬಹುದು. ರಣಜಿಯಲ್ಲಿ ತ್ರಿಶತಕ ಭಾರಿಸಿದ ಸಾಧನೆ ಹೊಂದಿರುವ ಭರತ್, ಆರಂಭಿಕ ಬ್ಯಾಟ್ಸಮನ್ ಸಹ ಹೌದು. ಹಾಗಾಗಿ ಗಾಯಾಳು ಸಹಾ ಬದಲಿಗೆ , ಭರತ್ ರನ್ನ ತಂಡದಲ್ಲಿ ಸೇರಿಸಿಕೊಂಡು, ವಿರಾಟ್ ಗೆ ಜಾಗ ಮಾಡಿಕೊಡುವ ಮಾಸ್ಟರ್ ಪ್ಲಾನ್ ರಾಹುಲ್ ಬಳಿಯಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.