ಅಭಿಮಾನಿಗಳು ಕಾಯುತ್ತಿದ್ದ ಸಮಯ ಬಂದೆ ಬಿಡ್ತು, ಗುಡ್ ನ್ಯೂಸ್ ಕೊಟ್ಟ ಅಮೂಲ್ಯ, ಎಷ್ಟು ತಿಂಗಳು ಅಂತೇ ಗೊತ್ತೇ??

3,516

ನಮಸ್ಕಾರ ಸ್ನೇಹಿತರೇ ನಟಿ ಅಮೂಲ್ಯ ರವರ ಬಗ್ಗೆ ನಿಮಗೆಲ್ಲ ಮೊದಲಿನಿಂದಲೂ ಕೂಡ ಖಂಡಿತವಾಗಿ ಗೊತ್ತಿರುತ್ತದೆ. ಯಾಕೆಂದರೆ ಚಿಕ್ಕವಯಸ್ಸಿನಲ್ಲೇ ಇರಬೇಕಾದರೆ ಅವರು ಬಾಲನಟಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೀಗೆ ಹಲವಾರು ನಟರೊಂದಿಗೆ ಬಾಲನಟಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ನಾಯಕ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಚೆಲುವಿನ ಚಿತ್ತಾರ ಚಿತ್ರದ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ನಾಯಕಿಯಾಗಿ ನಟಿಸುವ ಮೂಲಕ ಪಾದಾರ್ಪಣೆ ಮಾಡಿದ್ದರು. ಇದಾದನಂತರ ಹಲವಾರು ಕನ್ನಡ ಚಿತ್ರರಂಗದ ಸ್ಟಾರ್ ನಟರೊಂದಿಗೆ ನಟಿಸಿ ಯಶಸ್ವಿ ನಾಯಕ ನಟಿಯಾಗಿ ಕೂಡ ಕಾಣಿಸಿಕೊಂಡಿದ್ದರು. ರಾಕಿಂಗ್ ಸ್ಟಾರ್ ಯಶ್ ರವರೊಂದಿಗೆ ಗಜಕೇಸರಿ ಚಿತ್ರದಲ್ಲಿ ಕೂಡ ಕಾಣಿಸಿಕೊಂಡು ಎಲ್ಲರ ಮನಸ್ಸನ್ನು ಗೆದ್ದಿದ್ದರು. ಇನ್ನು ಬಹುಭಾಷಾ ತಾರೆ ಆಗಿರುವ ಪ್ರಕಾಶ ರಾಜ್ ರವರ ನಾನು ನನ್ನ ಕನಸು ಚಿತ್ರದಲ್ಲಿ ಅವರ ಮಗಳಾಗಿ ಕೂಡ ನಟಿಸಿ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸುವಲ್ಲಿ ಸಫಲರಾಗಿದ್ದರು.

ಹೀಗೆ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಾಯಕನಟಿ ಆಗಿದ್ದ ಸಂದರ್ಭದಲ್ಲಿ ಅವರು 2017 ರಲ್ಲಿ ಜಗದೀಶ್ ರವರನ್ನು ಮದುವೆಯಾಗುವುದರ ಮೂಲಕ ಕನ್ನಡ ಚಿತ್ರರಂಗದಿಂದ ನಟನೆಯಿಂದ ಹೊರಬಂದಿದ್ದರು. ಇನ್ನು ನಾಲ್ಕು ವರ್ಷಗಳ ನಂತರ ಕನ್ನಡಿಗರಿಗೆ ನಟಿ ಅಮೂಲ್ಯ ಹಾಗೂ ಜಗದೀಶ್ ರವರು ಸಂತೋಷದ ಸುದ್ದಿಯನ್ನು ನೀಡಿದ್ದಾರೆ. ಹೌದು ಗೆಳೆಯರೆ ನಟಿ ಅಮೂಲ್ಯ ರವರು ತಮ್ಮ ಸಾಮಾಜಿಕ ಜಾಲತಾಣಗಳ ಕ್ರಾಂತಿಯಲ್ಲಿ ಈಗ ನಾವು ಇಬ್ಬರಲ್ಲ ಮೂವರು ಎಂಬುದಾಗಿ ಕ್ಯಾಪ್ಷನ್ ನೀಡುವ ಮೂಲಕ ತಾವು ಗರ್ಬಿಣಿಯಾಗಿರುವುದನ್ನು ತಿಳಿಸಿದ್ದಾರೆ ಹಾಗೂ ಆರು ತಿಂಗಳು ಎಂಬುದು ಮೂಲಗಳಿಂದ ತಿಳಿದು ಬಂದಿದೆ. 2022 ರಲ್ಲಿ ನಟಿ ಅಮೂಲ್ಯ ರವರು ಮಗುವಿಗೆ ಜನ್ಮ ನೀಡುವುದು ಗ್ಯಾರಂಟಿಯಾಗಿದೆ. ಇನ್ನು ಇದಕ್ಕಾಗಿ ಅಮೂಲ್ಯ ರವರು ಮಾಡಿಸಿರುವ ಫೋಟೋಶೂಟ್ ಈಗ ಎಲ್ಲರ ಗಮನ ಸೆಳೆದಿದೆ.