ಮತ್ತೊಮ್ಮೆ ಕನ್ನಡಿಗರನ್ನು ಕ್ಷಮೆ ಕೇಳಿದ ರಾಜಮೌಳಿ. ಶಿರಬಾಗಿ ಕ್ಷಮೆ ಕೇಳುತ್ತೇನೆ ಕ್ಷಮಿಸಿಬಿಡಿ ಎಂದಿದ್ದು ಯಾಕೆ ಗೊತ್ತೇ??

162

ನಮಸ್ಕಾರ ಸ್ನೇಹಿತರೇ ಭಾರತೀಯ ಚಿತ್ರರಂಗದಲ್ಲಿ ಬಾಹುಬಲಿ ಎನ್ನುವ ಮಹೋನ್ನತ ಚಿತ್ರವನ್ನು ನಿರ್ದೇಶಿಸುವ ಮೂಲಕ ವಿದೇಶಿ ಪ್ರೇಕ್ಷಕರಿಗೆ ಭಾರತೀಯ ಸಿನಿಮಾ ಮೇಕಿಂಗ್ ಶೈಲಿಯ ವಿಶ್ವರೂಪವನ್ನು ಪರಿಚಯಿಸಿದ ಶ್ರೇಯ ನಿರ್ದೇಶಕ ರಾಜಮೌಳಿ ಅವರಿಗೆ ಹೋಗುತ್ತದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಬೇರೆ ದೇಶದ ಪ್ರೇಕ್ಷಕರಿಗೂ ಕೂಡಾ ಭಾರತೀಯ ಚಿತ್ರರಂಗದಲ್ಲಿ ಇಂತಹ ಚಿತ್ರಗಳು ಮೂಡಿಬರಬಹುದು ಎಂಬುದಾಗಿ ತೋರಿಸಿಕೊಟ್ಟವರು ನಿರ್ದೇಶಕ ರಾಜಮೌಳಿ.

ಯಾವುದೇ ಮಾದರಿಯ ಚಿತ್ರವನ್ನು ಕೂಡ ನಿರ್ದೇಶನ ಮಾಡಿದರು ರಾಜಮೌಳಿಯವರ ನಿರ್ದೇಶನ ಇದೆ ಎಂದರೆ ಖಂಡಿತವಾಗಿಯೂ ಚಿತ್ರ ದೇಶಾದ್ಯಂತ ಹೆಸರು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಮೊದಲು ಚಿತ್ರದ ನಾಯಕ ನಟನ ಹೆಸರು ಕೇಳಿ ವ್ಯಾಪಾರ ನಿರ್ಣಯವಾಗುತ್ತಿತ್ತು. ಆದರೆ ಈಗ ರಾಜಮೌಳಿ ಅವರ ನಿರ್ದೇಶನ ಇದೆಯೆಂದರೆ ಸಾಕು ವ್ಯಾಪಾರಕ್ಕೆ ಮುಗಿಬೀಳುತ್ತಾರೆ. ಇತ್ತೀಚೆಗಷ್ಟೇ ಬೆಂಗಳೂರಿಗೆ ರಾಜಮೌಳಿ ಅವರು ಬಂದಿದ್ದರು ಈ ಸಮಯದಲ್ಲಿ ಎರಡು ವಿಷಯಕ್ಕಾಗಿ ನನ್ನನ್ನು ಕ್ಷಮಿಸಿ ಎಂಬುದಾಗಿ ಮಾಧ್ಯಮದವರ ಬಳಿ ಕೇಳಿಕೊಂಡಿದ್ದಾರೆ. ಹಾಗಿದ್ದರೆ ಆ ಎರಡು ವಿಷಯಗಳು ಏನೆಂಬುದನ್ನು ನಾವು ನಿಮಗೆ ಹೇಳುತ್ತೇವೆ ಬನ್ನಿ.

ಮೊದಲನೇದಾಗಿ ನನ್ನ ಕನ್ನಡ ಅಸ್ಟೊಂದು ಸರಿಯಾಗಿಲ್ಲ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಎಂಬುದಾಗಿ ಮಾಧ್ಯಮದವರ ಬಳಿ ಹೇಳುತ್ತಾರೆ. ಎರಡನೇದಾಗಿ ನಾವು ಈಗ ಇಲ್ಲಿ ಯಾವುದೇ ಪ್ರೆಸ್ಮೀಟ್ ಹಾಗೂ ಇಂಟರ್ವ್ಯೂ ಮಾಡುತ್ತಿಲ್ಲ ಎಂಬುದಾಗಿ ಕ್ಷಮೆ ಕೇಳಿದ್ದಾರೆ. ಹೌದು ಗೆಳೆಯರೇ ಅಂದು ಬಂದಾಗ ಕೇವಲ ಮೂರು ನಿಮಿಷಗಳಷ್ಟೇ ಮಾಧ್ಯಮದವರ ಬಳಿ ರಾಜಮೌಳಿ ಅವರು ಇದ್ದು ಹೋಗಿದ್ದರು. ಡಿಸೆಂಬರ್ ಮೊದಲನೇ ವಾರದಲ್ಲಿ ಟ್ರೈಲರ್ ಬಿಡುಗಡೆಯಾಗಲಿದ್ದು ಬಿಡುಗಡೆಗೆ ಮುನ್ನ ಆರ್ ಆರ್ ಆರ್ ಚಿತ್ರದ ಬಿಡುಗಡೆ ಪೂರ್ವಭಾವಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲಿದ್ದೇವೆ ಎಂಬುದಾಗಿ ಹೇಳಿದ್ದಾರೆ.