ಡಿಕೆ ರವಿ ರವರು ಇಹಲೋಕ ತ್ಯಜಿಸಿದಾಗ ಅವರ ತಾಯಿಯವರಿಗೆ ಪುನೀತ್ ರಾಜಕುಮಾರ್ ಕೊಟ್ಟ ಹಣವೆಷ್ಟು ಗೊತ್ತಾ?? ಯಾರಿಗೂ ತಿಳಿಯದ ಅಸಲಿ ಸತ್ಯವೇನು ಗೊತ್ತೇ??

956

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರು ಈಗಾಗಲೇ ಯಾವ ಮಟ್ಟದಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಎನ್ನುವುದನ್ನು ಅವರ ಮರಣಾನಂತರ ನಾವು ತಿಳಿದುಕೊಂಡಿದ್ದೇವೆ. ಕೇವಲ ನಟನೆಯಿಂದ ಮಾತ್ರವಲ್ಲದೇ ಜನಸೇವೆ ಇಂದಲೂ ಕೂಡ ಪುನೀತ್ ರಾಜಕುಮಾರ್ ರವರ ವ್ಯಕ್ತಿತ್ವ ಎಲ್ಲರಿಗೂ ಇಷ್ಟವಾಗುತ್ತದೆ. ಇದಕ್ಕಾಗಿ ಪುನೀತ್ ರಾಜಕುಮಾರ್ ರವರು ಮರಣಹೊಂದಿದಾಗ ಅವರನ್ನು ನೋಡಲು ಕಂಠೀರವ ಸ್ಟೇಡಿಯಂ ಗೆ 25 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರು.

ಇನ್ನು ಇವರ ಸಾಧನೆಯನ್ನು ಅರಿತ ರಾಜ್ಯ ಸರ್ಕಾರ ಇವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಿಸಿದೆ. ಪುನೀತ್ ರಾಜಕುಮಾರ್ ಅವರ ಮರಣದ ನಂತರ ಒಂದೊಂದಾಗಿ ಎಲ್ಲರೂ ಕೂಡ ಅವರು ಮಾಡಿರುವ ಸಹಾಯವನ್ನು ನೆನೆದು ಈಗ ಕಣ್ಣೀರಿಡುತ್ತಿದ್ದಾರೆ. ಈಗಾಗಲೇ ಹಲವಾರು ಮಂದಿ ಪುನೀತ್ ರಾಜಕುಮಾರ್ ಅವರು ಮಾಡಿರುವ ಸಹಾಯವನ್ನು ಹೇಳಿಕೊಂಡಿದ್ದಾರೆ ಇದರಿಂದಾಗಿ ತಿಳಿಸಿದೆ ಪುನೀತ್ ರಾಜಕುಮಾರ್ ರವರು ಬಂಗಾರದ ಮನಸ್ಸಿನ ಮನುಷ್ಯ ಎಂಬುದಾಗಿ. ಇನ್ನು ಈ ಸಾಲಿಗೆ ಕರ್ನಾಟಕ ಕಂಡಂತಹ ಅತ್ಯಂತ ದಕ್ಷ ಅಧಿಕಾರಿ ಆಗಿರುವ ಡಿಕೆ ರವಿ ಅವರ ತಾಯಿ ಕೂಡ ಸೇರ್ಪಡೆಯಾಗಿದ್ದಾರೆ.

ಹೌದು ಈಗ ಡಿಕೆ ರವಿ ಅವರ ತಾಯಿಯವರು ಕೂಡ ಪುನೀತ್ ರಾಜಕುಮಾರ್ ಅವರ ಸಮಾಧಿ ಮುಂದೆ ಬಂದು ಪುನೀತ್ ರಾಜಕುಮಾರ್ ಅವರು ಮಾಡಿರುವ ಸಹಾಯವನ್ನು ನೆನೆದಿದ್ದಾರೆ. ಈ ಹಿಂದೆ ಡಿಕೆ ರವಿ ಅವರು ಮರಣ ಹೊಂದಿದ ನಂತರ ಪುನೀತ್ ರಾಜಕುಮಾರ್ ರವರು ಡಿಕೆ ರವಿ ಅವರ ಪೋಷಕರನ್ನು ಸಿದ್ದಗಂಗಾ ಮಠಕ್ಕೆ ಕರೆಸಿಕೊಂಡು ಅಲ್ಲಿ ಅವರಿಗೆ ನಿಮ್ಮ ಮಗ ಇಲ್ಲ ಎಂದು ಚಿಂತಿಸಬೇಡಿ ನಿಮ್ಮ ಮಗನಂತೆ ನಾನಿದ್ದೇನೆ ಎಂಬುದಾಗಿ ಸಂತೈಸಿದ್ದರು. ಇಷ್ಟು ಮಾತ್ರವಲ್ಲದೆ 50 ಸಾವಿರ ರೂಪಾಯಿ ಚೆಕ್ ನೀಡಿ ನಿಮಗೆ ಏನೇ ಸಹಾಯ ಬೇಕಿದ್ದರೂ ನನ್ನನ್ನು ಜ್ಞಾಪಿಸಿಕೊಳ್ಳಿ ಎಂಬುದಾಗಿ ದೈರ್ಯವನ್ನು ನೀಡಿದ್ದರು. ಡಿಕೆ ರವಿ ಅವರ ತಾಯಿ ಪುನೀತ್ ರಾಜಕುಮಾರ್ ಅವರು ಮಾಡಿರುವ ಈ ಸಹಾಯವನ್ನು ನೆನಪಿಸಿಕೊಳ್ಳುತ್ತಾ ನಾನು ನಿಮ್ಮ ಮಗನಂತೆ ನಿಮ್ಮೊಂದಿಗೆ ಇದ್ದೇನೆ ಎಂದು ಹೇಳಿದವರು ಈಗ ನನ್ನ ಮಗನ ಜೊತೆಗೆ ಹೋಗಿದ್ದಾರೆ ಎಂಬುದಾಗಿ ಭಾವುಕರಾಗಿ ಹೇಳುತ್ತಾರೆ.