ಮೈಸೂರಿನಲ್ಲಿ ಇಬ್ಬರು ಅಣ್ಣನ ಜೊತೆ ವಾಸವಿದ್ದ ತಂಗಿಗೆ ಅಣ್ಣ ಎಂತಹ ಕೆಲಸ ಮಾಡಿದ್ದಾನೆ ಗೊತ್ತೇ?? ಶಾಕ್ ಆದ ಜನತೆ. ಎತ್ತ ಸಾಗುತ್ತಿದೆ ಸಮಾಜ.

2,424

ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ಸಂಬಂಧಗಳಿಗೆ ಯಾವುದೇ ಕೂಡ ನಿಜವಾದ ಬೆಲೆ ಇಲ್ಲದಂತಾಗಿಬಿಟ್ಟಿದೆ. ಈ ಯಾಂತ್ರಿಕ ಯುಗದಲ್ಲಿ ಎಲ್ಲವೂ ಕೂಡ ಭಾವನೆಗಳ ವಿರುದ್ಧವಾಗಿಯೇ ಕೆಲಸಗಳು ನಡೆಯುತ್ತದೆ. ಹೀಗಾಗಿ ಇಂದಿನ ಯುಗದ ಮನುಷ್ಯರಲ್ಲಿ ಮಾನವೀಯತೆಯನ್ನು ನಿರೀಕ್ಷಿಸುವುದು ಮನುಷ್ಯರು ಮಾಡುವಂತಹ ಮೂರ್ಖತನದ ಕೆಲಸವೆಂದರೆ ಕೂಡ ತಪ್ಪಾಗಲಾರದು.

ಇನ್ನು ಅಣ್ಣ-ತಂಗಿಯರ ಬಾಂಧವ್ಯ ಕೂಡ ಸಾಕಷ್ಟು ಪವಿತ್ರವಾದದ್ದು. ಅಣ್ಣ-ತಂಗಿ ಗೆ ಯಾವುದೇ ಕಷ್ಟ ಬಂದರೂ ಕೂಡ ತಾನು ಮುಂದೆ ನಿಂತು ಆಕೆಯ ಜೀವನಕ್ಕೆ ಬೆಳಕಾಗಿ ಆಕೆಯ ಬೆನ್ನೆಲುಬಾಗಿ ಇರುತ್ತಾನೆ ಎಂಬುದಾಗಿ ತಂಗಿ ನಂಬಿರುತ್ತಾಳೆ. ಇನ್ನು ಅಣ್ಣನಿಗೂ ಕೂಡ ಅಮ್ಮನ ನಂತರ ತಂಗಿ ಎರಡನೇ ತಾಯಿ ಎಂದರೆ ತಪ್ಪಾಗಲಾರದು. ಆದರೆ ಮೈಸೂರಿನಲ್ಲಿ ನಡೆದಿರುವ ಈ ಘಟನೆಯನ್ನು ನೋಡಿದರೆ ಖಂಡಿತವಾಗಿ ಈ ಸಂಬಂಧಕ್ಕೆ ಯಾವುದೇ ಬೆಲೆ ಇಲ್ಲ ಎಂಬ ಕಾಣುತ್ತದೆ.

ಹೌದು ಗೆಳೆಯರೇ ಮೂರು ಹೆಣ್ಣುಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳು ಇರುವ ಈ ಕುಟುಂಬದ ತಂದೆ ಚಿಕ್ಕವಯಸ್ಸಿನಲ್ಲೇ ಓಡಿಹೋಗಿದ್ದ. ತಾಯಿ ಚಿಕ್ಕ ವಯಸ್ಸಿನಲ್ಲಿ ಇರಬೇಕಾದರೆ ಇಹಲೋಕವನ್ನು ತ್ಯಜಿಸಿರುತ್ತಾರೆ. ಇನ್ನು ಮೊದಲ ಇಬ್ಬರು ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆಗೆ ಹೋಗಿರುತ್ತಾರೆ. ಇನ್ನು ಕಿರಿಯ ತಂಗಿ ಇಬ್ಬರು ಅಣ್ಣಂದಿರೆ ಜೊತೆಗೆ ಮನೆಯಲ್ಲಿ ವಾಸವಾಗಿದ್ದಳು. ಆದರೆ 30ವರ್ಷದ ದೊಡ್ಡಣ್ಣ ತನ್ನ ಆಸೆಗಾಗಿ ತನ್ನ ತಂಗಿಯನ್ನೆ ಬಳಸಿಕೊಳ್ಳುತ್ತಿದ್ದ. ಆದರೆ ಇಷ್ಟೆಲ್ಲಾ ಕಷ್ಟವನ್ನು ಅನುಭವಿಸುತ್ತಿದ್ದರು ಕೂಡ ಆಕೆ ಎಲ್ಲಿ ಕೂಡ ಇದರ ಬಗ್ಗೆ ಹೇಳಿಕೊಂಡಿರಲಿಲ್ಲ.

ಆದರೆ ಕೆಲ ಸಮಯಗಳ ನಂತರ ಆಕೆಗೆ ಹೊಟ್ಟೆನೋ’ವು ಬಂದಾಕ್ಷಣ ಆಸ್ಪತ್ರೆ ಹೋಗಿ ನೋಡಿದಾಗ ಆಕೆ ಗರ್ಭಿಣಿ ಎಂದು ತಿಳಿಯುತ್ತದೆ. ಆಕೆಗೆ ಕೇವಲ ವಯಸ್ಸು 17 ಆಗಿದ್ದರಿಂದ ಆಕೆಯನ್ನು ವೈದ್ಯ ಕ್ಯಾನ್ಸಲಿಂಗ್ ಮಾಡಿ ಈ ವಿಚಾರ ಹೇಗೆ ನಡೆಯಿತು ಎಂದು ಕೇಳಿದಾಕ್ಷಣ ತನ್ನ ಅಣ್ಣನೇ ಹೀಗೆ ಮಾಡುತ್ತಿದ್ದ ಎಂಬುವುದನ್ನು ಬಾಲಕಿ ವೈದ್ಯರಿಗೆ ತಿಳಿಸಿದ್ದಾಳೆ. ಇದರಿಂದ ಕೂಡಲೇ ವೈದ್ಯರು ಆಲನಹಳ್ಳಿ ಪೊಲೀಸರಿಗೆ ಮೆಮೊ ಕಳಿಸಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನು ಕೇಳಿದ ಅಕ್ಕಪಕ್ಕ ಮನೆಯವರು ಕೂಡ ಬೆಚ್ಚಿಬಿದ್ದಿದ್ದಾರೆ. ತಾಯಿ ಇಲ್ಲದ ತಂಗಿಗೆ ತಂದೆಯಂತೆ ಹಾಕಬೇಕಾಗಿದೆ ಅಣ್ಣನ ಹೀಗೆ ಮಾಡಿದ್ದನ್ನು ನೋಡಿ ಎಲ್ಲರೂ ಕೂಡ ಚಿಂತಾಕ್ರಾಂತರಾಗಿದ್ದಾರೆ. ತಂಗಿಯನ್ನು ತಾಯಿಯ ಎರಡನೇ ಸ್ವರೂಪವೆಂದು ತಿಳಿದುಕೊಳ್ಳಬೇಕಾಗಿರುವ ಸಮಾಜ ಹೀಗೆ ಸಂಬಂಧಗಳ ಮೌಲ್ಯ ವಿಲ್ಲದಂತೆ ಅನಾಗರಿಕರಂತೆ ಆಡುವುದನ್ನು ನೋಡಿದರೆ ಈ ಸಮಾಜ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ದಟ್ಟವಾಗಿ ಮೂಡಿಬರುತ್ತದೆ.

ಎಲ್ಲದಕ್ಕಿಂತ ಹೆಚ್ಚಾಗಿ ಈಗ ಒಂದು ವೇಳೆ ಆಕೆಗೆ ಮಗುವಾದರೆ ಅದರ ತಂದೆ ಯಾರು ಎಂದು ಕೇಳಿದರೆ ಆಕೆ ಏನು ಹೇಳುತ್ತಾರೆ ಎಂಬುದು ಇನ್ನಷ್ಟು ದೊಡ್ಡ ಪ್ರಶ್ನೆಯಾಗಿದೆ. ಆಕೆಯ ಮುಂದಿನ ಭವಿಷ್ಯದ ಜೀವನದ ಕುರಿತಂತೆ ನೆನೆಸಿಕೊಂಡರು ಕೂಡ ಮೈಯೆಲ್ಲ ನಡುಕ ಪ್ರಾರಂಭವಾಗುತ್ತದೆ. ಈ ಮೇಲಿನ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೇ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.