ಚಿಕ್ಕ ವಯಸ್ಸಿನಿಂದಲೂ ಸಾಕಷ್ಟು ಖ್ಯಾತಿ ಗಳಿಸಿರುವ ಮಾಸ್ಟರ್ ಆನಂದ್ ರವರ ಮನೆ ಹೇಗಿದೆ ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

2,593

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ಮಾಸ್ಟರ್ ಆನಂದ ರವರ ಕುರಿತಂತೆ ಗೊತ್ತೇ ಇರುತ್ತದೆ. ಚಿಕ್ಕಂದಿನಿಂದಲೂ ಕೂಡ ಬಾಲನಟನಾಗಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಯಶಸ್ ಪಡೆದಂತಹ ಕೆಲವೇ ಕೆಲವರಲ್ಲಿ ಮಾಸ್ಟರ್ ಆನಂದ್ ರವರು ಅಗ್ರಗಣ್ಯನಾಗಿ ಕಾಣಸಿಗುತ್ತಾರೆ. ಇನ್ನು ಮಾಸ್ಟರ್ ಆನಂದರವರು ಬಾಲ ನಟನೆಯನ್ನು ನೋಡಿ ನಗದವರೇ ಇಲ್ಲ. ಮುತ್ತಿನ ಹಾರ ಕಿಂದರಿಜೋಗಿ ಗೌರಿ-ಗಣೇಶ ಹೀಗೆ ಹಲವಾರು ಚಿತ್ರಗಳಲ್ಲಿ ಬಾಲನಟನಾಗಿ ಮಾಸ್ಟರ್ ಆನಂದ್ ಅವರು ತಮ್ಮ ನಟನಾ ಚಾತುರ್ಯ ತೆಯನ್ನು ಚಿಕ್ಕವರಿರಬೇಕಾದರೆ ತೋರಿಸಿದ್ದವರು.

ಚಿಕ್ಕವಯಸ್ಸಿನಲ್ಲಿ ಕ್ರಿಕೆಟರ್ ಆಗಬೇಕೆಂದು ಕೊಂಡಿದ್ದವರು ನಂತರ ನಟನೆಯಲ್ಲಿ ಆಸಕ್ತಿ ಮೂಡಿ ತಮ್ಮ ಹೊಲವನ್ನು ನಟನೆಯತ್ತ ಬದಲಾಯಿಸುತ್ತಾರೆ. ಇನ್ನು ಬಾಲನಟನಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿಕೊಂಡರು ಮಾಸ್ಟರ್ ಆನಂದ್ ರವರು. ನಂತರ ಹಲವಾರು ಏಳುಬೀಳುಗಳನ್ನು ಜೀವನದಲ್ಲಿ ಕಂಡು ಈಗ ಯಶಸ್ವಿ ಜೀವನವನ್ನು ನಡೆಸುತ್ತಿರುವವರು ಮಾಸ್ಟರ್ ಆನಂದ್. ಇನ್ನು 2010 ರಲ್ಲಿ ಯಶಸ್ವಿನಿ ಎಂಬುವವರನ್ನು ಮಾಸ್ಟರ್ ಆನಂದ್ ಅವರು ವಿವಾಹವಾಗುತ್ತಾರೆ. ಇನ್ನು ಇವರಿಗೆ ಇಬ್ಬರು ಮಕ್ಕಳಿದ್ದಾರೆ.

ಡ್ಯಾನ್ಸ್ ಕರ್ನಾಟಕ ಬಿಗ್ ಬಾಸ್ ಡ್ರಾಮಾ ಜೂನಿಯರ್ಸ್ ಹೀಗೆ ಹಲವಾರು ಕಿರುತೆರೆಯ ಕಾರ್ಯಕ್ರಮಗಳಲ್ಲಿ ನಿರೂಪಕನಾಗಿ ಹಾಗೂ ಸ್ಪರ್ಧಿಯಾಗಿ ಕಾಣಿಸಿಕೊಳ್ಳುವ ಮೂಲಕ ಮತ್ತೊಮ್ಮೆ ತಮ್ಮ ಚಾರ್ಮ್ ನ್ನು ಪಡೆದುಕೊಳ್ಳುತ್ತಾರೆ. ಇನ್ನು ಬೆಂಗಳೂರಿನಲ್ಲಿ ತಮ್ಮ ಸದಭಿರುಚಿಗೆ ತಕ್ಕಂತೆ ಆನಂದ್ ರವರು ಮನೆಯನ್ನು ಕಟ್ಟಿಸಿದ ನೋಡಲು ಸಾಕಷ್ಟು ಚೆನ್ನಾಗಿದೆ‌. ಮಾಸ್ಟರ್ ಆನಂದ ರವರ ಮನೆಯಲ್ಲಿ ನೀವು ಕೂಡ ಈ ಕೆಳಗಡೆ ವಿಡಿಯೋದಲ್ಲಿ ನೋಡಬಹುದಾಗಿದೆ. ಮಾಸ್ಟರ್ ಆನಂದ್ ರವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸಲ್ಲಿ ಹಂಚಿಕೊಳ್ಳಿ.