ಆಕೆಯ ತಂಗಿಯಿಂದಾಗಿ ಪ್ರೀತಿಯನ್ನೇ ಕಳೆದುಕೊಂಡ ನಾಗ ಚೈತನ್ಯ, ಅಸಲಿಗೆ ನಾಗ ಚೈತನ್ಯ ಜೀವನದಲ್ಲಿ ನಡೆದ್ದದೇನು ಗೊತ್ತೇ??

4,916

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ತೆಲುಗು ಚಿತ್ರರಂಗದ ಸೂಪರ್ ಜೋಡಿ ಗಳಾಗಿದ್ದವರು ನಾಗಚೈತನ್ಯ ಹಾಗೂ ಸಮಂತ. ಆರು ವರ್ಷಗಳ ಕಾಲ ಪರಸ್ಪರ ಪ್ರೀತಿಸಿ ನಾಲ್ಕು ವರ್ಷಗಳ ಕಾಲ ತುಂಬು ಜೀವನ ನಡೆಸಿದವರು ಇವರಿಬ್ಬರು. ಆದರೆ ಇವರಿಬ್ಬರು ಈಗ ಹೀಗೆ ಆಗಿರುವುದು ನೋಡಿದರೆ ಎಲ್ಲರಿಗೂ ಕೂಡ ಬೇಸರವಾಗುತ್ತದೆ. ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುವ ಮೊದಲೇ ಇವರಿಬ್ಬರು ವಿವಾಹ ವಿಚ್ಛೇದನವನ್ನು ಪಡೆದುಕೊಂಡಿರುವುದು ಅವರ ಅಭಿಮಾನಿಗಳಿಗೆ ಸೇರಿದಂತೆ ಎಲ್ಲರಿಗೂ ಕೂಡ ಬೇಸರವನ್ನು ತರಿಸಿದೆ.

ಇನ್ನು ಇದೇ ಸಂದರ್ಭದಲ್ಲಿ ಸಮಂತ ರವರ ಹಳೆಯ ಲವರ್ ಆಗಿರುವ ಸಿದ್ಧಾರ್ಥ್ ಸಾಮಾಜಿಕ ಜಾಲತಾಣಗಳಲ್ಲಿ ಇದರ ಕುರಿತಂತೆ ಲೇವಡಿ ಮಾಡಿಕೊಳ್ಳುತ್ತಾ ಸಮಯ ಎಲ್ಲರಿಗೂ ಬುದ್ಧಿ ಕಲಿಸುತ್ತದೆ ಎಂಬ ಪೋಸ್ಟನ್ನು ಹಾಕಿದ್ದರು. ಆಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಪೇಜ್ ಗಳು ಹುಡುಗಿಯ ಡಿವೋರ್ಸ್ ಆಗಿದ್ದಕ್ಕೆ ಹಳೆಯ ಲವರ್ ಸಂಭ್ರಮಾಚರಣೆ ಮಾಡಿಕೊಳ್ಳುತ್ತಿದ್ದಾರೆ ಎಂಬಂತೆ ಟ್ರೋಲ್ ಮಾಡಲಾಗಿತ್ತು.

ಆದರೆ ಇಲ್ಲಿ ನಾವು ಗಮನಿಸಬೇಕಾದ ವಿಷಯ ಇದು ಮಾತ್ರವಲ್ಲ ಯಾಕಂದರೆ ಕೇವಲ ಸಮಾಂತರ ಅವರಿಗೆ ಮಾತ್ರವಲ್ಲ ನಾಗಚೈತನ್ಯ ರವರಿಗೆ ಕೂಡ ಹಳೆಯ ಲವ್ ಸಂಬಂಧ ಇತ್ತು ಎಂದು ಹೇಳಲಾಗುತ್ತದೆ. ಇದು ನೀವು ಕೇಳಿರಬಹುದು ಈ ಹಿಂದೆ ನಾಗಚೈತನ್ಯ ರವರು ಕಮಲ್ ಹಾಸನ್ ಅವರ ಪುತ್ರಿ ಆಗಿರುವ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯಾಗಿರುವ ಶ್ರುತಿ ಹಾಸನ್ ಅವರೊಂದಿಗೆ ಪ್ರೇಮ ಸಂಬಂಧದಲ್ಲಿ ಇದ್ದರಂತೆ. ಇನ್ನು ಇವರಿಬ್ಬರು ಮದುವೆ ಆಗುವುದಕ್ಕೆ ಕೂಡ ನಿರ್ಧರಿಸಿದ್ದರಂತೆ.

ಆದರೆ ಇವರಿಬ್ಬರ ಮದುವೆ ಆಗದೆ ಇರುವುದಕ್ಕೆ ಕಾರಣ ಶ್ರುತಿ ಹಾಸನ್ ರವರ ತಂಗಿ ಆಗಿರುವ ಅಕ್ಷರ ಹಾಸನ್ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ ಇದರ ಹಿಂದಿನ ಕಾರಣ ಏನೆಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ. ನಾಗಚೈತನ್ಯ ಹಾಗೂ ಶ್ರುತಿಹಾಸನ್ ರವರು ಒಂದು ಅವಾರ್ಡ್ ಫಂಕ್ಷನ್ ಗೆ ಹೋಗಿರುತ್ತಾರೆ. ಈ ಸಂದರ್ಭದಲ್ಲಿ ಅವರಿಬ್ಬರ ಜೊತೆಗೆ ಅಕ್ಷರ ಹಾಸನ್ ಕೂಡ ಹೋಗಿರುತ್ತಾರೆ. ಅವಾರ್ಡ್ ಫಂಕ್ಷನ್ ನಲ್ಲಿ ಶೃತಿಹಾಸನ್ ರವರು ನೃತ್ಯ ಮಾಡಬೇಕಾಗಿರುತ್ತದೆ.

ಹೀಗಾಗಿಯೇ ನಾಗಚೈತನ್ಯ ಅವರಿಗೆ ಅಕ್ಷರ ಹಾಸನ್ ರವರ ಜೊತೆಗೆ ಇರುವಂತೆ ಹೇಳಿ ನೃತ್ಯ ಪ್ರದರ್ಶನ ನೀಡಲು ಶ್ರುತಿಹಾಸನ್ ರವರು ತೆರಳುತ್ತಾರೆ. ಆದರೆ ಶ್ರುತಿ ಹಾಸನ್ ರವರು ನೃತ್ಯವನ್ನು ಮುಗಿಸಿ ವಾಪಸ್ಸು ಬರಬೇಕಾದರೆ ಅಲ್ಲಿ ಅಕ್ಷರ ಹಾಸನ್ ಅವರನ್ನು ಬಿಟ್ಟು ನಾಗಚೈತನ್ಯ ರವರು ಹೋಗಿರುತ್ತಾರೆ.

ಈ ಕಾರಣದಿಂದಾಗಿಯೇ ಶ್ರುತಿಹಾಸನ್ ಆಗುವ ನಾಗಚೈತನ್ಯ ರವರ ನಡುವೆ ಮನಸ್ತಾಪಗಳು ಬೆಳೆದುಕೊಂಡು ಬಂದು ನಂತರ ಅದು ದೊಡ್ಡ ಮಟ್ಟಕ್ಕೆ ತಿರುಗಿ ಅವರಿಬ್ಬರು ದೂರವಾಗುತ್ತಾರೆ. ಹೀಗಾಗಿಯೇ ಮದುವೆಯಾಗಬೇಕಾಗಿ ಇದ್ದವರು ಅಕ್ಷರ ಹಾಸನ್ ರವರಿಂದಾಗಿ ಇಬ್ಬರು ಕೂಡ ದೂರ ಆಗಿ ಇದ್ದಾರೆ. ಈಗ ಅಭಿಮಾನಿಗಳು ಮತ್ತೊಮ್ಮೆ ನಾಗಚೈತನ್ಯ ಹಾಗೂ ಶ್ರುತಿ ಹಾಸನ್ ರವರಿಗೆ ಮತ್ತೊಮ್ಮೆ ಮದುವೆಯಾಗಿ ಎನ್ನುವುದಾಗಿ ಕೇಳುತ್ತಿದ್ದಾರೆ. ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆಗಳೇನು ಎಂಬುದರ ನಮಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.