ಮೊದಲ ಬಾರಿಗೆ ಪುನೀತ್ ಅವರ ಆಸ್ತಿ ಬಗ್ಗೆ ಕಾರ್ ಗಳ ಬಗ್ಗೆ ಮಾತನಾಡಿದ ರಾಘಣ್ಣ, ಇದ್ದಕ್ಕಿದ್ದಂತೆ ಯಾಕೆ ಗೊತ್ತೇ?? ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನಾವು ಅಕಾಲಿಕವಾಗಿ ಕಳೆದುಕೊಂಡು ಈಗಾಗಲೇ ಬರೋಬ್ಬರಿ ಒಂದು ಮಾಸವಾಗಿದೆ. ಇಂದಿಗೂ ಕೂಡ ಪುನೀತ್ ರಾಜಕುಮಾರ್ ಅವರ ಮರಣವನ್ನು ಅಭಿಮಾನಿಗಳಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂದಿಗೂ ಕೂಡ ಪುನೀತ್ ರಾಜಕುಮಾರ್ ಅವರ ಸಮಾಧಿಯ ಬಳಿ ಸಾವಿರಾರು ಜನರು ಅವರ ದರ್ಶನವನ್ನು ಪಡೆಯಲು ಬಂದಾಗ ಅವರು ಮಾಡಿರುವ ಒಳ್ಳೆಯ ಕೆಲಸಗಳ ಪರಿಣಾಮಗಳ ಕುರಿತಂತೆ ನಮಗೆ ಅರಿವಾಗುತ್ತದೆ.
ಇನ್ನು ಪುನೀತ್ ರಾಜಕುಮಾರ್ ಅವರ ಅಣ್ಣನ್ ಆಗಿರುವ ರಾಘವೇಂದ್ರ ರಾಜಕುಮಾರ್ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಪುನೀತ್ ರಾಜಕುಮಾರ್ ಅವರ ಬಗ್ಗೆ ಭಾವನಾತ್ಮಕವಾಗಿ ಹೇಳಿಕೊಳ್ಳುತ್ತಾರೆ. ಶಂಕರಾಚಾರ್ಯರು ಎಪ್ಪತ್ತು-ಎಂಬತ್ತು ವರ್ಷದಲ್ಲಿ ಮಾಡುವ ಕೆಲಸವನ್ನು ಮೂವತ್ತರಲ್ಲಿ ಮಾಡಿ ಮುಗಿಸಿ ಹೋಗಿದ್ದರು. ಹಾಗೆ ನನ್ನ ತಮ್ಮ ಪುನೀತ್ ರಾಜಕುಮಾರ್ ಕೇವಲ 46ನೇ ವಯಸ್ಸಿನಲ್ಲಿ ಅದಕ್ಕಿಂತಲೂ ಹೆಚ್ಚಿನ ವಯಸ್ಸಿನವರು ಮಾಡಬೇಕಾದ ಎಲ್ಲ ಕಾರ್ಯಗಳನ್ನು ಮಾಡಿ ಹೋಗಿದ್ದ ಎಂಬುದಾಗಿ ಹೇಳಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೆ ಮುಂದುವರೆದು ಹಲವಾರು ವಿಚಾರಗಳನ್ನು ಕೂಡ ಹೇಳಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಪುನೀತ್ ಬಳ್ಳಿ ಕೋಟ್ಯಾಂತರ ರೂಪಾಯಿ ಹಣವನ್ನು ಆಸ್ತಿ ಇತ್ತು ಆರರಿಂದ ಏಳು ಕಾರುಗಳಿದ್ದವು ಐಶಾರಾಮಿ ವಸ್ತುಗಳಿದ್ದವು ಮನೆಯಲ್ಲಿ ಸಂಬಂಧಿಕರಾದ ನಾವಿದ್ದೆವು ಎಲ್ಲರೂ ಇದ್ದರೂ ಕೂಡ ಆತನಿಗೆ ಬದುಕಲು ಬೇಕಾದ 5 ನಿಮಿಷಗಳು ಹೆಚ್ಚಾಗಿ ಸಿಗಲಿಲ್ಲ. ಇದೇ ಜೀವನ ಎಂಬುದಾಗಿ ಭಾವುಕರಾಗಿ ಹೇಳಿಕೊಂಡಿದ್ದಾರೆ. ಹೌದಲ್ವಾ ಗೆಳೆಯರೇ ಜೀವನದಲ್ಲಿ ಎಷ್ಟೇ ನಾವು ಒಳ್ಳೆಯ ಕೆಲಸಗಳನ್ನು ಮಾಡಿದ್ದರೂ ಒಳ್ಳೆಯ ಸ್ಥಿತಿಯಲ್ಲಿದ್ದರೂ ಕೂಡ ಕಾಲದ ಕರೆಗೆ ಓಗೊಡಲೇಬೇಕು. ಇದು ಪುನೀತ್ ರಾಜಕುಮಾರ್ ಅವರ ವಿಷಯದಲ್ಲಿ ನೂರಕ್ಕೆ ನೂರು ಪ್ರತಿಶತ ನಿಜವಾಗಿದೆ ಎಂದರೆ ತಪ್ಪಾಗಲಾರದು.