ಹೊಸದಾಗಿ ಮದುವೆಯಾದ ಮೊದಲ ವರ್ಷದಲ್ಲಿ ಎಲ್ಲರಿಗೂ ಬರಲಿದೆ ಈ ನಾಲ್ಕು ಸಮಸ್ಯೆಗಳು ಯಾವ್ಯಾವು ಗೊತ್ತೇ??
ನಮಸ್ಕಾರ ಸ್ನೇಹಿತರೇ ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಕೂಡ ಸಾಕಷ್ಟು ಸಂತೋಷಗಳನ್ನು ತುಂಬುವ ವಾತಾವರಣವನ್ನು ನಿರ್ಮಿಸುವಂತಹ ಕಾರ್ಯಕ್ರಮವಾಗಿದೆ. ಆದರೆ ಮದುವೆಯಾದ ಕೆಲವೇ ವರ್ಷಗಳಲ್ಲಿ ಅಥವಾ ಮೊದಲನೇ ವರ್ಷದಲ್ಲಿ ಹಲವಾರು ಸಮಸ್ಯೆಗಳು ಹಾಗೂ ಬದಲಾವಣೆಗಳು ಕಂಡು ಬರಬಹುದಾಗಿದೆ. ಇದರ ಕುರಿತಂತೆ ನಾವು ಇಂದಿನ ವಿಚಾರದಲ್ಲಿ ಹೇಳಲು ಹೊರಟಿದ್ದೇವೆ. ಹೌದು ಗೆಳೆಯ ಖಂಡಿತವಾಗಿಯೂ ಮದುವೆಯಾದ ಮೊದಲ ವರ್ಷದಲ್ಲಿ ಈ ನಾಲ್ಕು ಸಮಸ್ಯೆಗಳು ಖಂಡಿತವಾಗಿಯೂ ನಿಮಗೆ ಕಂಡುಬರುವುದು ಗ್ಯಾರಂಟಿ.
ಮೊದಲನೆಯದಾಗಿ ಮದುವೆ ಆದ ಮೇಲೆ ಹುಡುಗ ಹಾಗೂ ಹುಡುಗಿ ಇಬ್ಬರು ಕೂಡ ಪರಸ್ಪರ ಪತಿ-ಪತ್ನಿ ಆಗಿ ಮಾತ್ರ ಸಂಬಂಧವನ್ನು ಸ್ವೀಕರಿಸುತ್ತಾರೆ. ಹೀಗಾಗಿ ಅವರು ಒಬ್ಬರಿಗೊಬ್ಬರು ಜವಾಬ್ದಾರಿಯುತರು ಆಗಿರುತ್ತಾರೆ. ಆದರೆ ಮದುವೆಯಾದ ಮೇಲೆ ಹುಡುಗಿಗೆ ಕೇವಲ ಮದುವೆಯಾದ ಹುಡುಗನ ಹೆಂಡತಿಯಾಗಿ ಮಾತ್ರವಲ್ಲದೆ ಗಂಡನ ಮನೆಗೆ ಹೋಗಿ ಆತನ ತಂದೆ ಹಾಗೂ ತಾಯಿಗೆ ಉತ್ತಮ ಸೊಸೆಯಾಗಿ ಕೂಡ ಬರಬೇಕಾಗುತ್ತದೆ.

ಹೀಗಾಗಿ ಹೆಂಡತಿಯನ್ನು ಗುರುತಿನಿಂದ ಹೆಚ್ಚಾಗಿ ಸೊಸೆಯನ್ನು ಗುರುತನ್ನು ಕೂಡ ಕಾಪಾಡಿಕೊಳ್ಳಬೇಕಾಗಿದೆ ಅತಿ ಕಡಿಮೆ ಸಮಯದಲ್ಲಿ ಕಷ್ಟಕರವಾಗಿರಬಹುದು. ಹೀಗಾಗಿ ಅದಕ್ಕೆ ಹೊಂದಿಕೊಳ್ಳಲು ಆಕೆಗೆ ಸ್ವಲ್ಪ ಸಮಯವಕಾಶ ಕಾಯಬೇಕಾಗುತ್ತದೆ.
ಎರಡನೆಯದಾಗಿ ಮದುವೆ ಮುಂಚೆ ಗೆ ಭವಿಷ್ಯದ ಕುರಿತಂತೆ ಏನಾದರೂ ಕೂಡ ಪ್ಲಾನ್ ಮಾಡಿಕೊಂಡಿರಬಹುದು ಆದರೆ ಮದುವೆಯಾದ ಮೇಲೆ ಎಲ್ಲಾ ಪ್ಲಾನ್ಗಳು ಕೂಡ ತಲೆಕೆಳಗಾಗಿ ಹೋಗಿಬಿಡುತ್ತದೆ. ಮದುವೆಯಾದ ನಂತರ ಆರ್ಥಿಕವಾಗಿ ಕೂಡ ಸಬಲರಾಗಬೇಕು ಆಗಿರುತ್ತದೆ ಆದರೆ ಮದುವೆಯಾದ ಮೇಲೆ ಖರ್ಚುಗಳು ಕೂಡ ಜಾಸ್ತಿ ಆಗಿಬಿಡುತ್ತದೆ. ಹೀಗಾಗಿ ಮದುವೆ ಆದ ನಂತರ ಗಂಡ-ಹೆಂಡತಿ ಪರಸ್ಪರ ಇಬ್ಬರೂ ಕೂಡ ಖರ್ಚುಗಳ ಹಾಗೂ ಜೀವನ ಕ್ರಮಗಳ ಕುರಿತಂತೆ ಒಟ್ಟಾಗಿ ಕುಳಿತುಕೊಂಡು ಚರ್ಚಿಸಿ ನಿರ್ಧಾರಕ್ಕೆ ಬಂದ ಮೇಲೆ ಖಂಡಿತವಾಗಿಯೂ ಈ ಸಮಸ್ಯೆಗಳು ಜೀವನಪರ್ಯಂತ ಪರಿಹಾರವಾಗಿಬಿಡುತ್ತವೆ.

ಮೂರನೆಯದಾಗಿ ಇನ್ನು ಮದುವೆ ಆಗುವುದಕ್ಕಿಂತ ಮುಂಚೆ ನೀವು ನಿಮ್ಮ ಪರಿವಾರದವರಿಗೆ ಅಷ್ಟೇ ಮಾತ್ರ ನಿಮ್ಮ ಜವಾಬ್ದಾರಿ ಸೀಮಿತವಾಗಿರುತ್ತದೆ. ಆದರೆ ಮದುವೆಯಾದ ಮೇಲೆ ನಿಮ್ಮ ಮನೆಯವರಿಗೆ ಮಾತ್ರವಲ್ಲದೆ ನೀವು ಮದುವೆಯಾಗಿ ಹೋಗುವ ಮನೆಯವರೆಗೂ ಕೂಡ ನೀವು ಜವಾಬ್ದಾರರಾಗಿರುತ್ತೀರಿ. ಹಾಗೂ ನೀವು ಇರುವ ಮನೆಯವರಿಗೆ ನೀವು ನಿಷ್ಠರಾಗಿ ಹಾಗೂ ಅವರ ಸುಖ ಕಷ್ಟಗಳನ್ನು ನೀವು ನೋಡಿಕೊಂಡು ಹೋಗುವಂತಹರಾಗಿರಬೇಕು. ಇದನ್ನು ಕೂಡ ನೀವು ಮದುವೆಯಾದ ನಂತರವೇ ಚರ್ಚಿಸಿ ಒಂದು ಉತ್ತಮ ಸಾಂಸಾರಿಕ ಜೀವನಕ್ಕೆ ರಹದಾರಿಯನ್ನಾಗಿರಿಸಬೇಕು.

ನಾಲ್ಕನೆಯದಾಗಿ ಇನ್ನು ಮದುವೆಯಾದ ನಂತರ ನಿಮ್ಮ ಹಲವಾರು ಜೀವನಶೈಲಿ ಬದಲಾಗಿಬಿಡುತ್ತದೆ. ಯಾಕೆಂದರೆ ಈಗ ಕೇವಲ ನೀವೊಬ್ಬರೇ ಆಗುವುದಿಲ್ಲ ನಿಮ್ಮೊಂದಿಗೆ ಜೀವನಪೂರ್ತಿ ಬಾಳಿ ಬದುಕುವ ಒಬ್ಬ ವ್ಯಕ್ತಿ ಕೂಡ ನಿಮ್ಮ ಜೀವನದಲ್ಲಿ ಪ್ರವೇಶವನ್ನು ಮಾಡಿರುತ್ತಾರೆ. ಹೀಗಾಗಿ ನೀವು ಜೀವನದಲ್ಲಿ ನಿರ್ಧರಿಸುವ ನಿರ್ಧಾರಗಳು ಕೂಡ ಅವರ ಮೇಲೆ ಪರಿಣಾಮ ಬೀರುವುದರಿಂದ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಮದುವೆ ಆದ ಮೇಲೆ ನಿಮ್ಮ ಸೋಶಿಯಲ್ ಲೈಫ್ ನಲ್ಲಿ ಕೂಡ ಸಾಕಷ್ಟು ಬದಲಾವಣೆಗಳು ಕಂಡು ಬರಬಹುದು. ಹೀಗಾಗಿ ಜೀವನದ ಪ್ರತಿಯೊಂದು ನಿರ್ಧಾರಗಳನ್ನು ಕೂಡ ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಿ ನಿರ್ಧಾರ ಮಾಡಿ ಮುನ್ನಡೆಯುವುದು ರಿಂದಾಗಿ ಜೀವನ ಸುಖಮಯವಾಗಿ ಬಹುದೆಂಬ ಅಭಿಪ್ರಾಯಗಳು ಕೂಡ ಇವೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.