ಗೀತಾ ಧಾರಾವಾಹಿಯಲ್ಲಿ ಅದ್ಭುತವಾಗಿ ನಟನೆ ಮಾಡಿರುವ ವಿಂದ್ಯಾ ರವರ ಜೀವನದಲ್ಲಿ ನಡೆದ್ದದೇನು ಗೊತ್ತೇ??

2,945

ನಮಸ್ಕಾರ ಸ್ನೇಹಿತರೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಈಗಾಗಲೇ ಹಲವಾರು ಕಾರ್ಯಕ್ರಮಗಳು ಬಂದಿದ್ದು ಎಲ್ಲವೂ ಕೂಡ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾವೆ. ಇನ್ನು ಇತ್ತೀಚಿಗೆ ಅಮ್ಮ ಹಾಗೂ ಮಕ್ಕಳ ನಡುವಿನ ಬಾಂಧವ್ಯವನ್ನು ಎತ್ತಿ ಹಿಡಿಯುವಂತಹ ನಮ್ಮಮ್ಮ ಸೂಪರ್ಸ್ಟಾರ್ ಎನ್ನುವ ಕಾರ್ಯಕ್ರಮ ಕೂಡ ಬಂದಿದ್ದು ಇದು ಕೂಡ ಅತಿ ಕಡಿಮೆ ಸಮಯದಲ್ಲಿ ಜನರ ಮೆಚ್ಚುಗೆಯನ್ನು ಪಡೆಯಲು ಯಶಸ್ವಿಯಾಗಿದೆ.

ಇನ್ನು ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದಲ್ಲಿ ಈಗಾಗಲೇ ಹಲವಾರು ಜನರು ಬಂದು ಹೋಗಿದ್ದಾರೆ. ಅಮ್ಮ ಮಕ್ಕಳ ಕಾಂಬಿನೇಷನ್ ಅನ್ನು ಕಿರುತೆರೆಯ ಪ್ರೇಕ್ಷಕರು ಸಾಕಷ್ಟು ಎಂಜಾಯ್ ಮಾಡಿದ್ದಾರೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಇನ್ನು ಈ ಕಾರ್ಯಕ್ರಮದಲ್ಲಿ ಗೀತಾ ದಾರವಾಹಿಯ ನಟಿ ವಿಂದ್ಯಾ ರವರು ಕೂಡ ತಮ್ಮ ಮಗನೊಂದಿಗೆ ಬಂದಿದ್ದಾರೆ. ವಿಂದ್ಯಾ ರವರ ಮಗನ ತುಂಟಾಟವನ್ನು ನೋಡಿ ಎಲ್ಲರೂ ಕೂಡ ಇಷ್ಟಪಟ್ಟಿದ್ದಾರೆ. ಇನ್ನು ವಿಂದ್ಯಾ ರವರನ್ನು ಕೂಡ ನೋಡಿ ಎಲ್ಲರೂ ಇಷ್ಟಪಟ್ಟಿದ್ದಾರೆ. ಆದರೆ ಅವರ ಜೀವನದ ಕಣ್ಣೀರ ಕಹಾನಿಯನ್ನು ಯಾರು ಕೂಡ ಬಲ್ಲವರು ಇರಲಿಲ್ಲ. ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದ ಮೂಲಕ ವಿಂದ್ಯಾ ರವರ ಕಣ್ಣೀರಿನ ಜೀವನದ ಕಹಾನಿಯನ್ನು ಎಲ್ಲರೂ ಕೂಡ ಅರಿತುಕೊಂಡಿದ್ದಾರೆ. ಹೌದು ಗೆಳೆಯರೇ ನಮ್ಮಮ್ಮ ಸೂಪರ್ಸ್ಟಾರ್ ವೇದಿಕೆಯಲ್ಲಿ ತಮ್ಮ ಕಣ್ಣೀರ ಕಹಾನಿಯನ್ನು ವಿಂದ್ಯಾ ರವರು ಎಲ್ಲರಿಗೂ ಹೇಳಿದ್ದಾರೆ. ಅವರ ಜೀವನದ ಸತ್ಯವನ್ನು ಕೇಳಿ ಎಲ್ಲರೂ ಕೂಡ ಕಣ್ಣೀರನ್ನು ಇಟ್ಟಿದ್ದಾರೆ.

ಹೌದು ಗೆಳೆಯರೇ ವಿಂದ್ಯಾ ರವರ ತಂದೆ-ತಾಯಿ ಇಬ್ಬರೂ ಕೂಡ ಹುಟ್ಟಿನಿಂದ ಕುರುಡರು. ಆದರೂ ಕೂಡ ತಮ್ಮ ಮಗಳಿಗೆ ಏನು ಕಡಿಮೆಯಾಗದಂತೆ ಸಾಕಿದ್ದಾರೆ. ಇನ್ನು ವಿಂದ್ಯಾ ರವರು ತಮ್ಮ ಮಗನಿಗೆ ಸಿಂಗಲ್ ಪೇರೆಂಟ್. ಇನ್ನು ವಿಂದ್ಯಾ ರವರ ಮಗ ಹುಟ್ಟಿದ್ದು ಕೇವಲ ಏಳು ತಿಂಗಳಿಗೆ. ವೈದ್ಯರು ಕೂಡ ಹುಟ್ಟಿದ 48 ಗಂಟೆಗಳ ಕಾಲ ಏನನ್ನು ಹೇಳಲು ಸಾಧ್ಯವಿಲ್ಲ ಎಂಬುದಾಗಿ ಹೇಳಿದರು. ಒಂದು ವೇಳೆ ಈ 48 ಗಂಟೆಗಳಲ್ಲಿ ಆತ ಬದುಕಿದರೆ ಮುಂದೆ ಜೀವನದಲ್ಲಿ ಆರೋಗ್ಯವಂತರಾಗಿ ಬಾಳಲು ಸಾಧ್ಯ ಎಂಬುದಾಗಿ ಹೇಳಿದ್ದಾರಂತೆ. ಇಷ್ಟೆಲ್ಲ ಕಷ್ಟದ ಬದುಕಿನಲ್ಲಿ ಏಳುಬೀಳುಗಳನ್ನು ಕಂಡು ಬಂದಿದ್ದರೂ ಕೂಡ ಈಗ ಎಲ್ಲರೆದುರಿಗೆ ವಿಂಧ್ಯ ಅವರು ಉತ್ತಮ ನಟಿಯಾಗಿದ್ದಾರೆ ಹಾಗೂ ಜೀವನದಲ್ಲಿ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತುತ್ತಿದ್ದಾರೆ ಎಂಬುದೇ ಎಲ್ಲರೂ ಮೆಚ್ಚಬೇಕಾದ ವಿಷಯ.