ಟೂತ್ ಪೇಸ್ಟ್ ಗಳಲ್ಲಿನ ಈ ಗುರುತು ಏನನ್ನು ಸೂಚಿಸುತ್ತದೆ ಗೊತ್ತಾ?? ಇದು ಇಲ್ಲದೇ ಇದ್ರೆ ಪೇಸ್ಟ್ ಕೊಳ್ಳಲೇ ಬೇಡಿ. ನೋಡೀನೇ ತಗೋಳಿ.
ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ನಾವು ದಿನಬಳಕೆ ಮಾಡುವ ಯಾವುದೇ ವಸ್ತುಗಳನ್ನು ಖರೀದಿಸುವಾಗ ಅದರ ಮೇಲೀರುವ ಬರಹಗಳನ್ನು ಅಥವಾ ಚಿಹ್ನೆಗಳನ್ನು ಗಮನಿಸುತ್ತೇವೆಯೇ? ಖಂಡಿತವಾಗಿಯೂ ಇಲ್ಲ. ಇನ್ನು ಕೆಲವರು ಆ ಉತ್ಪನ್ನದ ತಯಾರಾದ ಹಾಗೂ ಅವಧಿ ಮುಗಿಯುವ ದಿನಾಂಕವನ್ನೂ ಸಹ ಗಮನಿಸುವುದೇ ಇಲ್ಲ. ಹೀಗೆ ಮಾಡುವುದು ಖಂಡಿತವಾಗಿಯೂ ತಪ್ಪು. ಹಾಗಾದರೆ ನಾವು ಕೊಂಡುಕೊಳ್ಳುವ ವಸ್ತುಗಳ ಕವರ್ ಮೇಲೇ ಏನಿದೆ ಎಂದು ಅಂಗಡಿಯಲ್ಲಿ ನೋಡಿಕೊಂಡು ಕೂರುವುದಕ್ಕೆ ಆಗುವುದಿಲ್ಲ ಅಲ್ಲವೇ! ಚಿಂತೆ ಬೇಡ, ಕೆಲವು ಗುರುತಿಸಬಹುದಾದಂಥ ಚಿಹ್ನೆಗಳ ಬಗ್ಗೆ ನಾವಿಲ್ಲಿ ಹೇಳುತ್ತೇವೆ.
ನಾವು ದಿನವೂ ಬಳಸುವ ಒಂದು ಅತ್ಯಂತ ಅಗತ್ಯ ಎನಿಸಿರುವ ವಸ್ತು ಟೂತ್ ಪೇಸ್ಟ್! ಹಿಂದಿನ ಕಾದಲ್ಲಿ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಳಸುತ್ತಿದ್ದ ವಸ್ತುಗಳೇ ಬೇರೆ ಬಿಡಿ. ಯಾವುದೇ ರಾಸಾಯನಿಕಗಳಿಲ್ಲದ ನೈಜ ಪದಾರ್ಥಗಳನ್ನು ಬಳಸಲಾಗುತ್ತಿತ್ತು. ಆದರೆ ಇಂದು ಹಾಗಲ್ಲ, ನಮಗೆ ಮೊದಲಿನ ಹಾಗೆ ಯಾವುದಾದರೂ ಬೇರು, ಕಾಂಡಗಳನ್ನು ಪುಡಿ ಮಾಡಿ ಹಲ್ಲುಪುಡಿ ತಯಾರಿಸಿಕೊಳ್ಳುವಷ್ಟು ತಾಳ್ಮೆಯಾಗಲಿ, ಪುರುಸೊತ್ತಾಗಲೀ ಇಲ್ಲ. ಹಾಗಾಗಿ ನಾವು ರೆಡಿಮೆಡ್ ಪೇಸ್ಟ್ ಗಳನ್ನೇ ಮಾರುಕಟ್ಟೆಯಿಂದ ತಂದು ಬಳಸುತ್ತೇವೆ. ಆದರೆ ಅವು ಎಷ್ಟು ಹಾನಿಕಾರಕ ಅಥವಾ ಹಾನಿಕಾರಕವಲ್ಲದ್ದು ಎದು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ.

ಪೇಸ್ಟ್ ಗಳ ತುದಿಯಲ್ಲಿ ನಾಲ್ಕು ಬಣ್ಣದ ಸಣ್ಣ ಚೌಕಾಕಾರಗಳನ್ನು ನೀವು ನೋಡಬಹುದು. ಕಪ್ಪು, ಹಸಿರು, ಕೆಂಪು ಹಾಗೂ ನೀಲಿ. ಈ ಬಣ್ಣಗಳ ಅರ್ಥ ನೋಡುವುದಾದರೆ, ಕಪ್ಪು ಬಣ್ಣ – ಪೇಸ್ಟ್ ಸಂಪೂರ್ಣ ರಾಸಾಯನಿಕಗಳಿಂದ ಕೂಡಿದ್ದು, ಕೆಂಪು ಬಣ್ಣ- ಪೇಸ್ಟ್, ನೈಸರ್ಗಿಕ ಹಾಗೂ ರಾಸಾಯನಿಕಗಳ ಮಿಶ್ರಣ, ನೀಲಿ ಬಣ್ಣ -ನೈಸರ್ಗಿಕ ವಸ್ತುಗಳು ಹಾಗೂ ಔಷಧಿ ವಸ್ತುಗಳ ಮಿಶ್ರಣ, ಹಸಿರು ಬಣ್ಣ – ಸಂಪೂರ್ಣ ನೈಸರ್ಗಿಕ. ಈ ಆಧಾರದ ಮೇಲೆ ನಿಮಗೆ ಬೇಕಾಗುವ ಪೇಸ್ಟ್ ನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.