ಲಾಕ್ ಡೌನ್ ನಿಂದ ಮುಂದೂಡಿದ್ದ ಶುಭ ಪೂಂಜಾ ಮಾಡುವೆ ಕೊನೆಗೂ ಫಿಕ್ಸ್ ಆಯಿತು, ಯಾವಾಗ ಅಂತೇ ಗೊತ್ತೆ?? ಅಭಿಮಾನಿಗಳು ಫುಲ್ ಕುಶ್.

49

ನಮಸ್ಕಾರ ಸ್ನೇಹಿತರೇ ಕನ್ನಡ ಬಿಗ್ ಬಾಸ್ ಸೀಸನ್ 8 ಹಿಂದೆಲ್ಲಾ ಬಿಗ್ಬಾಸ್ ಅವತರಣಿಕೆ ಗಳಿಗಿಂತ ಹೆಚ್ಚು ಜನರಿಂದ ಮನ್ನಣೆಗೆ ಒಳಗಾಗಿತ್ತು. ಅದಕ್ಕೆ ಕಾರಣ ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳ ಲಿಸ್ಟ್ ಕೂಡ ಎಂದು ಹೇಳಬಹುದು. ಕನ್ನಡ ಬಿಗ್ ಬಾಸ್ ಸೀಸನ್ 8ನ್ನು ಮಂಜು ಪಾವಗಡ ರವರು ಗೆದ್ದಿರಬಹುದು ಆದರೆ ಈ ಕಾರ್ಯಕ್ರಮದಲ್ಲಿ ಸಾಕಷ್ಟು ಜನ ಕನ್ನಡ ಪ್ರೇಕ್ಷಕರ ಮನಗೆದ್ದಿದ್ದರು. ಅವರಲ್ಲಿ ನಟಿ ಶುಭಾ ಪೂಜಾ ಕೂಡ ಒಬ್ಬರು.

ನಟಿ ಶುಭಾ ಪೂಂಜಾ ರವರು ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದರು ಕೂಡ ಅತಿ ಹೆಚ್ಚು ಜನಪ್ರಿಯತೆ ತಂದುಕೊಟ್ಟಂತಹ ಚಿತ್ರವೆಂದರೆ ದುನಿಯಾ ವಿಜಯ್ ನಟನೆಯ ಚಂಡ ಚಿತ್ರ. ಇನ್ನು ಇದನ್ನು ಹೊರತುಪಡಿಸಿದರೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮೊಗ್ಗಿನ ಮನಸ್ಸು ಚಿತ್ರದಲ್ಲಿ ಕೂಡ ಇವರು ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇನ್ನು ಬಿಗ್ ಬಾಸ್ ಬರುವುದಕ್ಕಿಂತ ಮುಂಚೆ ಶುಭಪುಂಜ ರವರ ಕುರಿತಂತೆ ಬೇಡದ ಅಭಿಪ್ರಾಯಗಳು ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ಇತ್ತು.

ಆದರೆ ಬಿಗ್ ಬಾಸ್ ನಲ್ಲಿ ಶುಭಪೂಂಜಾ ರವರನ್ನು ನೋಡಿದ ಮೇಲೆ ಎಲ್ಲರಿಗೂ ಇರುವ ತಪ್ಪು ಕಲ್ಪನೆಗಳು ಮಾಯವಾಗಿ ಅವರ ಕುರಿತಂತೆ ಗೌರವ ಭಾವನೆಗಳು ಮೂಡಿಬಂದವು. ಇನ್ನು ಶುಭ ಪೂಂಜಾ ರವರು ಮದುವೆ ಆಗುವ ಹುಡುಗನ ಹೆಸರನ್ನು ಈಗಾಗಲೇ ಬಿಗ್ ಬಾಸ್ ನಲ್ಲಿ ಅವರೇ ಹೇಳಿದ್ದಾರೆ. ಹೌದು ಶುಭಪುಂಜ ರವರನ್ನು ಮದುವೆಯಾಗುತ್ತಿರುವುದು ಸುಮಂತ್ ಮಹಾಬಲ ಬಿಲ್ಲವ ಎಂಬವರು. ಈಗಾಗಲೇ ಇವರಿಬ್ಬರಿಗೂ ಮದುವೆ ಆಗಬೇಕಾಗಿತ್ತು ಆದರೆ ಬಿಗ್ ಬಾಸ್ ಹಾಗೂ ಲಾಕ್ ಡೌನ್ ಕಾರಣದಿಂದಾಗಿ ಇವರ ವಿವಾಹ ಮುಂದೂಡಲಾಗಿತ್ತು. ಇನ್ನು ಶುಭ ಪೂಂಜಾ ರವರ ಮದುವೆ ಫಿಕ್ಸ್ ಆಗಿದ್ದು ಡಿಸೆಂಬರ್ನಲ್ಲಿ ನಡೆಯಲಿದೆ.