ಈ ಐದು ಕಾರಣಗಳಿಂದ ನಿಮ್ಮ ಜೀವನದಲ್ಲಿ ಯಶಸ್ಸು ಸಾಧಿಸಲು ಆಗುವುದಿಲ್ಲ, ಜಸ್ಟ್ ಇವುಗಳನ್ನು ತಿಳಿದುಕೊಂಡರೆ ನಿಮ್ಮ ಜೀವನವೇ ಬದಲಾಗುತ್ತದೆ. ಯಾವ್ಯಾವು ಗೊತ್ತೇ??

1,347

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಸಾಧನೆ ಮಾಡುವುದಕ್ಕೆ ಆತನೇ ಕಾರಣ ಆಗಿರುತ್ತಾನೆ ಮಾತ್ರವಲ್ಲದೆ ಆತನ ಸಾಧನೆ ಕಾರಣ ನಾಗಿರುತ್ತಾನೆ. ಇದಕ್ಕಾಗಿ ಆತ ಬೇರೆಯವರ ಹೆಸರನ್ನು ಹೇಳುತ್ತಾನೆ ಎಂದರೆ ಖಂಡಿತವಾಗಿಯೂ ಅದು ನೆಪ ಮಾತ್ರ ಎಂದು ಹೇಳಬಹುದಾಗಿದೆ. ಪ್ರತಿಯೊಬ್ಬರು ಕೂಡ ತಮ್ಮ ಜೀವನದಲ್ಲಿ ಒಂದು ಹಂತಕ್ಕೆ ಮೇಲಕ್ಕೆ ಸಾಗಲು ಆತನ ಪರಿಶ್ರಮ ಹಾಗೂ ಪ್ರಾಮಾಣಿಕತೆಯೇ ಕಾರಣ.

ಇದನ್ನೆಲ್ಲ ಬಿಡಿ ಒಂದು ವೇಳೆ ಮನುಷ್ಯ ಇನ್ನೂ ಕೆಳಮಟ್ಟದಲ್ಲಿದ್ದು ಆತ ಬದುಕಿನಲ್ಲಿ ಯಾವುದೇ ಪ್ರಗತಿಯನ್ನು ಕಾಣುತ್ತಿಲ್ಲವೆಂದು ಅದಕ್ಕೆ ಐದು ಕಾರಣಗಳಿವೆ ಹೇಳಬಹುದಾಗಿದೆ. ಹಾಗಿದ್ದರೆ ಒಬ್ಬ ಮನುಷ್ಯ ಯಾವುದೇ ಪ್ರಗತಿಯನ್ನು ಕಾಣದೆ ಕೆಳಮಟ್ಟದಲ್ಲಿ ಇರಲು ಯಾವ ಕಾರಣಗಳು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ ಇದನ್ನು ನಿಮ್ಮ ಜೀವನದಲ್ಲಿ ಕೂಡ ಅಡವಡಿಸಿಕೊಳ್ಳಲು ಪ್ರಯತ್ನಪಡಿ.

ಪ್ರಗತಿಯ ಕುರಿತಂತೆ ಯೋಚನೆ ಮಾಡದಿರುವುದು ಇಡೀ ಬ್ರಹ್ಮಾಂಡದಲ್ಲಿ ಯೋಚಿಸುವ ಶಕ್ತಿ ಭಗವಂತ ನೀಡಿರುವುದು ಕೇವಲ ಮನುಷ್ಯ ಜಾತಿಗೆ ಮಾತ್ರ ಎಂದು ಹೇಳುತ್ತಾರೆ. ಒಂದು ವೇಳೆ ನಿಮ್ಮ ಪ್ರಸ್ತುತ ಜೀವನಶೈಲಿಯ ಕುರಿತಂತೆ ನೀವು ತೃಪ್ತಿದಾಯಕವಾಗಿಲ್ಲ ಅಂದರೆ ಅದನ್ನು ಬದಲಾಯಿಸುವ ಕುರಿತಂತೆ ಹಾಗೂ ಇನ್ನಷ್ಟು ಉನ್ನತಿಗೆ ಏರುವ ಕುರಿತಂತೆ ಯೋಚನೆ ಮಾಡಲೇಬೇಕಾಗುತ್ತದೆ. ಇನ್ನು ಕೂಡ ಬಾವಿ ಒಳಗಡೆ ಇರುವ ಕಪ್ಪೆಯಂತೆ ನೀವು ನಿಮ್ಮ ಜಗತ್ತನ್ನು ಸಂಕುಚಿತವಾಗಿರಿಸಿ ಕೊಂಡಿದ್ದಾರೆ ಖಂಡಿತವಾಗಿಯೂ ತಪ್ಪು.

ಈ ಸಮಾಜದಲ್ಲಿ ಇನ್ನಷ್ಟು ಉತ್ತಮ ಹಂತಕ್ಕೆ ಹೋಗಲು ನಿಮ್ಮ ಯೋಚನೆಯ ನಿಮ್ಮನ್ನು ಮುಂದಕ್ಕೆ ಕರೆದೊಯ್ಯುತ್ತದೆ. ಯೋಚನೆಯನ್ನು ಕಾರ್ಯರೂಪಕ್ಕೆ ತರುವುದು ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಹಾಗೆ ಸಾಧಿಸ ಬೇಕು ಈ ಸಾಧನೆಯನ್ನು ಮಾಡಬೇಕೆಂಬ ಯೋಜನೆಯನ್ನು ಹಾಗೂ ಕನಸನ್ನು ಕಾಣುತ್ತಲೇ ಇರುತ್ತಾರೆ. ಪ್ರತಿಯೊಬ್ಬರ ಕನಸೆ ಅವರನ್ನು ಮುಂದಿನ ಹಂತಕ್ಕೆ ಕರೆದೊಯ್ಯುವ ಮೂಲ ಮಾರ್ಗ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಆದರೆ ಕೇವಲ ಯೋಚನೆ ಮಾಡುವುದಷ್ಟೇ ಮುಖ್ಯವಲ್ಲ ಯೋಜನೆಯನ್ನು ನಿಜಜೀವನದಲ್ಲಿ ಕಾರ್ಯರೂಪಕ್ಕೆ ತರುವುದು ಕೂಡ ಮುಖ್ಯವಾಗಿರುತ್ತದೆ ಆದರೆ ಅದನ್ನು ಹೆಚ್ಚಿನವರು ಮಾಡಲು ಹೋಗುವುದಿಲ್ಲ ಇದೇ ಕಾರಣದಿಂದಾಗಿ ಅವರು ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗುವುದಿಲ್ಲ.

ಸಂಘಟಿತ ಪ್ರಯತ್ನ ಕೆಲವೊಮ್ಮೆ ನೀವು ಎಲ್ಲಾ ಕೆಲಸಗಳನ್ನು ಕೂಡ ನೀವೇ ಮಾಡುವ ಯೋಜನೆಯನ್ನು ಮಾಡಿರುತ್ತೇವೆ. ಖಂಡಿತವಾಗಿಯೂ ನೀವು ಈ ಕೆಲಸಗಳನ್ನು ಮಾಡಲು ಅರ್ಹರು ಹಾಗೂ ಸಾಮರ್ಥ್ಯವನ್ನು ಹೊಂದಿರುವವರು ಎನ್ನುವುದರಲ್ಲಿ ಯಾವುದೇ ಅನುಮಾನ ಇರುವುದಿಲ್ಲ. ಆದರೆ ಗಾದೆಮಾತುಗಳು ಹೇಳುವಂತೆ ಎರಡು ಕೈ ಸೇರಿದರೆ ಚಪ್ಪಾಳೆ ಅನ್ನುವಂತೆ ಇದೇ ಮನಸ್ಥಿತಿ ಉಳ್ಳವರನ್ನು ಕಲೆಹಾಕಿ ಒಂದು ಸಂಘಟಿತ ಪ್ರಯತ್ನ ಮಾಡಿದರೆ ಜೀವನದಲ್ಲಿ ವೇಗವಾಗಿ ಪ್ರಗತಿ ಹೊಂದಲು ಸಾಧ್ಯವಿರುತ್ತದೆ.

ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದರಿಂದ ಆ ಕೆಲಸ ನಿಗದಿತ ಸಮಯಕ್ಕಿಂತ ಬೇಗನೆ ಮುಗಿದು ಇನ್ನೂ ಉಳಿದಿರುವ ಸಮಯದಲ್ಲಿ ನೀವು ಇನ್ನೂ ಕೂಡ ಹೆಚ್ಚಿನ ಅಂಶಗಳನ್ನು ಕಲಿಯಲು ಹಾಗೂ ಸಾಧಿಸಲು ಸಿಗುತ್ತದೆ. ಏಕಾಗ್ರತೆಯ ಕೊರತೆ ಕೆಲವರು ಜೀವನದಲ್ಲಿ ಸಾಕಷ್ಟು ವಿಷಯಗಳ ಕುರಿತಂತೆ ಗೊಂದಲಮಯವಾಗಿ ಇರುತ್ತಾರೆ. ಯಾವ ವಿಷಯವನ್ನು ಸಾಧಿಸಬೇಕೆಂಬ ಕುರಿತಂತೆ ಒಂದು ತೀಕ್ಷ್ಣವಾದ ಗುರಿ ಇರುವುದಿಲ್ಲ. ಯಾರ ಜೀವನದಲ್ಲಿ ಏಕಾಗ್ರತೆಯೆನ್ನುವುದು ನಿಶ್ಚಲವಾಗಿ ಒಂದೇ ವಸ್ತುವಿನ ಕಡೆಗೆ ಇರುತ್ತದೆಯೋ ಅವರು ಖಂಡಿತವಾಗಿಯೂ ಅತಿವೇಗವಾಗಿ ಯಶಸ್ಸು ಸಾಧಿಸುತ್ತಾರೆ. ಅಂದುಕೊಂಡ ಕೆಲಸವನ್ನು ಮುಗಿಸುವವರೆಗೂ ಕೂಡ ಏಕಾಗ್ರತೆಯಿಂದ ಇರಬೇಕು.

ಕ್ರಿಯೇಟಿವ್ ಆಗಿ ಯೋಚನೆ ಮಾಡಬೇಕು ನಾವು ಮೊದಲೇ ಹೇಳಿರುವಂತೆ ಬಾವಿ ಒಳಗಡೆ ಯಾಕೆ ಆಗಬಾರದು. ಯಾವುದೇ ಹೊಸ ವಿಚಾರಗಳು ಬಂದರೂ ಕೂಡ ಅದನ್ನು ಇಂದಿನ ಕಾಲಕ್ಕೆ ತಕ್ಕಂತೆ ಅಳವಡಿಸಿಕೊಂಡು ಅದನ್ನು ಸುಧಾರಿಸಿಕೊಂಡು ಹೋಗುವ ಕಾರ್ಯಕ್ಷಮತೆ ನಮ್ಮಲ್ಲಿರಬೇಕು. ಹೊರಗಿನಿಂದ ಬರುವ ಎಲ್ಲಾ ವಿಷಯಗಳನ್ನು ಕೂಡ ನಮ್ಮ ತಲೆಯಲ್ಲಿ ಒಪ್ಪಿಕೊಳ್ಳುವ ಹಾಗೂ ಅದನ್ನು ಪರೀಕ್ಷಿಸಿ ಕಾರ್ಯರೂಪಕ್ಕೆ ತರುವ ಮನಸ್ಥಿತಿಯನ್ನು ಕೂಡ ನಿರ್ಮಾಣ ಮಾಡಿಕೊಳ್ಳಬೇಕು. ಈ ಎಲ್ಲಾ ಅಂಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ನಾವು ಇರುವ ಸ್ಥಿತಿಯಿಂದ ಇನ್ನಷ್ಟು ಉನ್ನತ ಸ್ಥಿತಿಗೆ ಬರಲು ಯಶಸ್ವಿಯಾಗೋದು.