ಬರಿ ಮೊಟ್ಟೆ ತಿಂತಿರಾ ತಿನ್ನಿ ತೊಂದರೆ ಇಲ್ಲ, ಆದರೆ ಅಪ್ಪಿ ತಪ್ಪಿಯೂ ಕೂಡ ಇವುಗಳ ಜೊತೆ ಮೊಟ್ಟೆ ತಿನ್ನಬೇಡಿ, ತಿಂದರೆ ಮುಗಿಯುತ್ತದೆ ಕಥೆ.
ನಮಸ್ಕಾರ ಸ್ನೇಹಿತರೇ ಮೊಟ್ಟೆ ಸಾಕಷ್ಟು ಪೋಷಕಾಂಶ ಇರುವ ಆಹಾರ ಎನ್ನುವುದು ನಿಮಗೆಲ್ಲಾ ಗೊತ್ತೇ ಇದೆ. ಇನ್ನು ಸರಿಯಾದ ಸಮಯಕ್ಕೆ ಸರಿಯಾದ ಆಹಾರವನ್ನು ನಾವು ನಮ್ಮ ದೇಹಕ್ಕೆ ನೀಡಿದರೆ ಮಾತ್ರ ನಮ್ಮ ಆರೋಗ್ಯ ಸ್ವಾಸ್ಥ್ಯ ಪೂರ್ಣವಾಗಿ ಇರುತ್ತದೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿರುವ ಅಂಶ. ಮೊಟ್ಟೆ ಎನ್ನುವುದು ಸಾಕಷ್ಟು ಪೌಷ್ಟಿಕಾಂಶ ಹಾಗೂ ಪ್ರೋಟೀನ್ ಗಳನ್ನು ಹೊಂದಿರುತ್ತದೆ. ಆದರೆ ಕೆಲವೊಂದು ಆಹಾರ ಪದಾರ್ಥಗಳನ್ನು ಮೊಟ್ಟೆಯೊಂದಿಗೆ ಸೇವಿಸಿ ತಿನ್ನಬಾರದು ಅದರಿಂದಾಗಿ ಆರೋಗ್ಯಕ್ಕೆ ವೈಪರಿತ್ಯ ಪರಿಣಾಮಗಳು ಉಂಟಾಗುವುದು ಗ್ಯಾರಂಟಿ.
ಹಾಗಿದ್ದರೆ ಯಾವ ಆಹಾರ ಪದಾರ್ಥಗಳನ್ನು ಮೊಟ್ಟೆಯೊಂದಿಗೆ ಮಿಶ್ರಣ ಮಾಡಿ ತಿನ್ನಬಾರದು ಎಂಬುದರ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳಲಿದ್ದೇವೆ ತಪ್ಪದೇ ಕೊನೆಯವರೆಗೂ ಓದಿ. ಬೇಕನ್ ಕೆಲವರು ಬೇಕನ್ ಹಾಗೂ ಮೊಟ್ಟೆಯನ್ನು ಏಕಕಾಲದಲ್ಲಿ ಸೇವಿಸುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ. ಇವೆರಡರ ಸೇವನೆ ನಿಮ್ಮಲ್ಲಿ ಪ್ರೋಟಿನ್ ಹಾಗೂ ಜೀವಸತ್ವ ಅಂಶಗಳನ್ನು ಹೆಚ್ಚಿಸಿದರು ಕೂಡ ಇವುಗಳ ಸೇವನೆ ಮಾಡುವುದರಿಂದ ನಮ್ಮಲ್ಲಿ ಶಕ್ತಿ ಕುಗ್ಗಿ ಆಲಸ್ಯ ಹೆಚ್ಚಾಗುತ್ತದೆ. ಸಕ್ಕರೆ ಮೊಟ್ಟೆ ಹಾಗೂ ಸಕ್ಕರೆ ಎರಡು ಆಹಾರವನ್ನು ಕೂಡ ಏಕಕಾಲದಲ್ಲಿ ಸೇವಿಸುವುದರಿಂದಾಗಿ

ಇವುಗಳಲ್ಲಿರುವ ಅಮೈನೋ ಆಮ್ಲ ರಕ್ತವನ್ನು ಹೆಪ್ಪುಗಟ್ಟುವಂತೆ ಮಾಡುವುದರಲ್ಲಿ ಪರಿಣಾಮ ಬೀರಬಹುದಾಗಿದೆ ಈ ಕಾರಣದಿಂದಾಗಿಯೇ ಇವೆರಡರ ಒಟ್ಟಿಗೆ ಸೇವನೆ ದೇಹಕ್ಕೆ ನಕಾರಾತ್ಮಕ ಪರಿಣಾಮ ಬೀರಬಹುದು. ಸೋಯಾ ಹಾಲು ಸೋಯಾ ಹಾಲು ಹಾಗೂ ಮೊಟ್ಟೆಯ ಸಂಯೋಜಿತ ಸೇವನೆ ದೇಹವು ಪ್ರೊಟೀನ್ ಹೀರಲು ಸಾಕಷ್ಟು ಅಡೆ ತಡೆ ಉಂಟು ಮಾಡುತ್ತದೆ. ಹೀಗಾಗಿ ಇವೆರಡರ ಒಟ್ಟಿಗೆ ಸೇವನೆ ಕಡ್ಡಾಯವಾಗಿ ಮಾಡಬಾರದು. ಚಹಾ ಚಹಾ ಹಾಗೂ ಮೊಟ್ಟೆಗಳ ಒಟ್ಟಿಗೆ ಸೇವನೆ ಮಾಡುವುದರಿಂದಾಗಿ ದೇಹದಲ್ಲಿ ಹೆಚ್ಚಾಗಿ ಶಕ್ತಿಯನ್ನು ಕುಗ್ಗಿಸುತ್ತದೆ. ಬಾಳೆಹಣ್ಣು ಒಂದು ವೇಳೆ ನೀವು ಬಾಳೆಹಣ್ಣು ತಿಂದಮೇಲೆ ಮೊಟ್ಟೆಯನ್ನು ಸೇವಿಸುತ್ತಿದ್ದರೆ ಇಂದೇ ಅದನ್ನು ನಿಲ್ಲಿಸಿಬಿಡಿ. ನಿಜಕ್ಕೂ ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ.