ಸ್ವಂತದವರ ಅಂತಿಮ ದರ್ಶನಕ್ಕೆ ಬಾರದ ಸ್ವಾರ್ಥ ಪ್ರಪಂಚದಲ್ಲಿ ಆ ಬಿಕ್ಷುಕನ ನಿಧನಕ್ಕೆ ಲಕ್ಷಾಂತರ ಜನ ಸೇರಿದ್ದು ಯಾಕೆ ಗೊತ್ತೇ?? ಯಾರು ಆತ ಗೊತ್ತಾ??

4,782

ನಮಸ್ಕಾರ ಸ್ನೇಹಿತರೇ ಬದುಕಿದ್ದಾಗ ನಮ್ಮ ಬಳಿ ಎಷ್ಟು ಜನ ಬರುತ್ತಾರೆ ಎನ್ನುವುದಕ್ಕಿಂತ ಹೆಚ್ಚಾಗಿ ನಾವು ನಿಧನ ಹೊಂದಿದ ಮೇಲೆ ಎಷ್ಟು ಜನ ಬರುತ್ತಾರೆ ಎಂಬುದರ ಮೇಲೆ ಎಷ್ಟು ಜನರು ನಮ್ಮನ್ನು ಪ್ರೀತಿಸುತ್ತಾರೆ ಎಂಬುದರ ಅರಿವಾಗುತ್ತದೆ. ಇದನ್ನು ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನಕ್ಕೆ ಬಂದಂತಹ 25 ಲಕ್ಷಕ್ಕೂ ಅಧಿಕ ಅಭಿಮಾನಿಗಳನ್ನು ನೋಡಿದ ಮೇಲೆ ನಾವು ಅರ್ಥೈಸಿಕೊಳ್ಳಬಹುದಾಗಿದೆ. ಇನ್ನು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಒಂದು ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಹೌದು ಇದು ನಡೆದಿರುವುದು ಬೇರೆ ಎಲ್ಲೂ ಅಲ್ಲ ನಮ್ಮ ಕರ್ನಾಟಕ ರಾಜ್ಯದ ಹೂವಿನ ಹಡಗಲಿಯಲ್ಲಿ. ಈ ವಿಡಿಯೋದಲ್ಲಿ ಜನಸ್ತೋಮವೇ ಹರಿದುಬಂದಿತ್ತು ನೋಡಿದವರಿಗೆ ಇದು ಬಹುಶಃ ಆ ಊರಿನ ಶ್ರೀಮಂತ ವ್ಯಕ್ತಿ ಅಥವಾ ಜನಪ್ರಿಯ ವ್ಯಕ್ತಿ ಇರಬಹುದು ಎಂಬುದಾಗಿತ್ತು. ಆದರೆ ಅಲ್ಲಿ ಮರಣಹೊಂದಿದ್ದು ಯಕಶ್ಚಿತ್ ಕೇವಲ ಊರಿನ ಹುಚ್ಚ ಬಿಕ್ಷುಕ. ಹಾಗಿದ್ದರೆ ಯಾಕೆ ಅಷ್ಟೊಂದು ಜನ ಸೇರಿದ್ದರು ಏನು ವಿಷಯ ಎಂಬುದರ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇವೆ. ಆತನ ಹೆಸರು ಹುಚ್ಚ ಬಸ್ಯ ಎಂದು.

ಚಿಕ್ಕಂದಿನಿಂದ ಬುದ್ಧಿಮಾಂದ್ಯನಾದ ಆತನನ್ನು ಆತನ ತಾಯಿ ಸಾಕುತ್ತಿದ್ದಳು. ತಾಯಿ ಮರಣಹೊಂದಿದ ನಂತರ ಆತನನ್ನು ನೋಡಿಕೊಳ್ಳುವವರು ಇಲ್ಲದೇ ಹುಚ್ಚನಾಗಿ ಭಿಕ್ಷುಕನಾದ. ಇನ್ನು ಆ ಪ್ರದೇಶದಲ್ಲಿ ಆತನಿಗೆ ಯಾರೇ ಬಿಕ್ಷೆ ನೀಡಿದರು ಆತ ಒಂದು ರೂಪಾಯಿಗಿಂತ ಜಾಸ್ತಿ ತೆಗೆದುಕೊಳ್ಳುತ್ತಿರಲಿಲ್ಲ. ಇನ್ನು ಆತನಿಂದ ವಾಪಸು ಚಿಲ್ಲರೆ ಪಡೆದುಕೊಂಡರೆ ಅಲ್ಲಿನ ಜನರು ಶುಭ ಎಂದು ತಿಳಿದುಕೊಳ್ಳುತ್ತಿದ್ದರು. ಇನ್ನು ಯಾರು ಏನೇ ಹೇಳಿದರೂ ಕೂಡ ಅದಕ್ಕೆ ಸೂಕ್ತವಾದ ಉತ್ತರವನ್ನು ಈತ ನೀಡುತ್ತಿದ್ದ. ಇನ್ನು ಇದಕ್ಕಾಗಿಯೇ ಅವರು ಇವನಿಗೆ ಇನ್ನಷ್ಟು ಹೆಚ್ಚಿನ ಹಣವನ್ನು ನೀಡುತ್ತಿದ್ದರು ಕೂಡ ಆತ ಒಂದು ರೂಪಾಯಿ ಮಾತ್ರ ತೆಗೆದುಕೊಂಡು ಉಳಿದುದನ್ನು ಅವರಿಗೆ ವಾಪಸ್ಸು ನೀಡುತ್ತಿದ್ದ.

ಇನ್ನು ಈತ ಹೆಚ್ಚಿಗೆ ಹಣ ನೀಡಿದಾಗ ವಾಪಸು ನೀಡುವ ಚಿಲ್ಲರೆ ಇಂದ ಅವರಿಗೆ ಶುಭವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಇನ್ನು ಇವನು ದುಡ್ಡು ಕೊಟ್ಟಾಗ ನೀಡುವ ಮಂದಹಾಸ ನಗು ಕೂಡ ಅವರಿಗೆ ಶುಭ ತರುತ್ತದೆ ಎಂಬ ಮಾತಿದೆ. ಇನ್ನು ಯಾವುದೇ ಶುಭ ಕಾರ್ಯ ವಿದ್ದರೂ ಕೂಡ ಮೊದಲಿಗೆ ಹುಚ್ಚ ಬಸ್ಯ ನನ್ನು ಕರೆಸಿ ಆಶೀರ್ವಾದ ಪಡೆಯುವುದು ವಾಡಿಕೆ. ಕೇವಲ ಸಾಮಾನ್ಯರು ಮಾತ್ರವಲ್ಲದೆ ರಾಜಕಾರಣಿಗಳು ಹಾಗೂ ಶ್ರೀಮಂತರು ಕೂಡ ಇದನ್ನು ಅಲ್ಲಿ ಅನುಸರಿಸುತ್ತಿದ್ದರು.

ಇನ್ನು ಬಸ್ಯಾ ಕೂಡ ಎಲ್ಲರನ್ನೂ ಹೆಸರು ಹಿಡಿದು ಕರೆಯುತ್ತಿದ್ದ ಅವನಿಗೆ ಶ್ರೀಮಂತಿಕೆ ಹಾಗೂ ಬಡವರ ನಡುವಿನ ಅಂತರವನ್ನು ಮಾನಸಿಕ ಸಂತು ಕಥೆಯನ್ನು ಕಳೆದುಕೊಂಡ ನಂತರ ಅರ್ಥವಾಗುತ್ತಿರಲಿಲ್ಲ. ಆತ ಮನಸ್ಸು ಮಾಡಿದ್ದರೆ ಅತ್ಯಂತ ವೈಭವಯುತ ಜೀವನವನ್ನು ನಡೆಸಬಹುದಿತ್ತು. ಆದರೆ ಆತ ಒಂದು ರೂಪಾಯಿಗಿಂತ ಜಾಸ್ತಿ ಯಾರ ಬಳಿ ಕೂಡ ತೆಗೆದುಕೊಳ್ಳುತ್ತಿರಲಿಲ್ಲ.

ಮಾನಸಿಕ ವಿಕಲಾಂಗನಾಗಿದ್ದರೂ ಕೂಡ ಯಾರ ಬಳಿಯೂ ಕೂಡ ಹೆಚ್ಚಿನ ಸಹಾಯವನ್ನಾಗಲಿ ಲಾಭವನ್ನಾಗಲಿ ಅಪೇಕ್ಷಿಸದೆ ತನ್ನ ಪಾಡಿಗೆ ತಾನು ಇರುತ್ತಿದ್ದ. ಆದರೆ ಇದೇ ನವೆಂಬರ್ ತಿಂಗಳಂದು ರಸ್ತೆ ದಾಟುತ್ತಿರಬೇಕಾದರೆ ಬಸ್ಸಿಗೆ ಸಿಕ್ಕಿ ಇಹಲೋಕವನ್ನು ತ್ಯಜಿಸಿದ. ತಮ್ಮ ಪ್ರೀತಿಯ ಬಸ್ಯಾ ನನ್ನು ಕಳೆದುಕೊಂಡು ಇಡೀ ಹೂವಿನಹಡಗಲಿ ತಾಲೂಕು ಒಂದಾಗಿತ್ತು. ಆತನನ್ನು ಇಡೀ ಊರಿಗೆ ಊರೇ ಅಂತಿಮ ವಿದಾಯ ಸಲ್ಲಿಸಿತ್ತು. ಬದುಕಿದ್ದಾಗ ವೀಕ್ಷಕನಾಗಿ ಬದುಕಿದ್ದರು ಕೂಡ ಹೋದಾಗ ಸಂತನಾಗಿ ಹೋಗಿದ್ದ. ನಿಧನರಾದ ಮೇಲೂ ಕೂಡ ಇಷ್ಟು ಜನರನ್ನು ಸಂಪಾದಿಸುವುದು ಖಂಡಿತವಾಗಿಯೂ ಪುಣ್ಯಾತ್ಮರು ಮಾಡುವ ಕೆಲಸವೇ ಸರಿ.