ಒಬ್ಬರ ನಂತರ ಮತ್ತೊಬ್ಬರು, ಗಟ್ಟಿಮೇಳ ಧಾರಾವಾಹಿಯಲ್ಲಿ ಮತ್ತೊಂದು ದೊಡ್ಡ ಟ್ವಿಸ್ಟ್, ವೇದಾಂತ್ ಜೀವನದಲ್ಲಿ ಮತ್ತೊಬ್ಬರು ಖ್ಯಾತ ನಟಿ. ಯಾರು ಗೊತ್ತೇ??

818

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯಲ್ಲಿ ಅತ್ಯಂತ ಟಾಪ್ ಪ್ರೇಕ್ಷಕರನ್ನು ಹೊಂದಿರುವ ಧಾರವಾಹಿ ಎಂದರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರಾವಾಹಿ ಎಂದರೆ ಖಂಡಿತವಾಗಿಯೂ ಯಾವುದೇ ಅನುಮಾನ ಇಲ್ಲ. ಗಟ್ಟಿಮೇಳ ಧಾರಾವಾಹಿ ಬಂದಾಗಿನಿಂದಲೂ ಕೂಡ ದಿನೇದಿನೇ ಒಂದಲ್ಲ ಒಂದು ಟ್ವಿಸ್ಟ್ ನಿಂದಾಗಿ ಕನ್ನಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕಳೆದ ಹಲವಾರು ದಿನಗಳಿಂದ ಅಮೂಲ್ಯ ಹಾಗೂ ವೇದಾಂತ ಮದುವೆ ತಯಾರಿಗಳು ನಡೆಯುತ್ತಿದ್ದು ಹಲವಾರು ಟ್ವಿಸ್ಟ್ ಹಾಗೂ ಅಡೆತಡೆಗಳನ್ನು ಇಲ್ಲಿ ನೋಡಲಾಗಿತ್ತು.

ಆದರೂ ಕೂಡ ಅಂತು-ಇಂತು ಅಮೂಲ್ಯ ಹಾಗೂ ವೇದಾಂತ ಮದುವೆ ಈಗ ನಡೆದು ಮುಗಿದಿದೆ. ಇದಕ್ಕಿಂತಲೂ ಮುಂಚೆ ಅವನ ಮೂಲ್ಯ ಕಿಡ್ನಾಪ್ ಆದಾಗ ಒಂದು ಕಥೆ ತೆರೆದುಕೊಂಡಿದ್ದು ಇಪ್ಪತ್ತು ವರ್ಷಗಳಷ್ಟು ಹಳೆಯದು. ಇನ್ನು ಆ ಹಳೆಯ ಕಥೆ ವೇದಾಂತ ತಾಯಿ ಸುಹಾಸಿನಿ ಒಬ್ಬ ಮಹಿಳೆಯನ್ನು ಬಂದನ ಗೊಳಿಸಿದ ಕಥೆ. ಹೌದು ಗೆಳೆಯರೇ ವೇದಾಂತ್ ಸೇರಿದಂತೆ ವಿಕ್ರಾಂತ್ ಆದ್ಯ ಹಾಗೂ ಧ್ರುವ ನಾಲ್ಕು ಮಕ್ಕಳ ಸ್ವಂತ ತಾಯಿ ವೈದೇಹಿ ವಸಿಷ್ಠರನ್ನು ಸುಹಾಸಿನಿ ಬರೋಬ್ಬರಿ 20 ವರ್ಷಗಳ ಕಾಲದಿಂದ ಬಂಧನದಲ್ಲಿ ಇಟ್ಟಿರುತ್ತಾಳೆ.

ಇನ್ನು ಅಮೂಲ್ಯಳನ್ನು ಕೂಡ ಕಿಡ್ನಾಪ್ ಮಾಡಿ ಕಟ್ಟಿ ಹಾಕಿದ ಸ್ಥಳದಲ್ಲಿ ವೈದೇಹಿ ಅವರನ್ನು ಕೂಡ ಕಟ್ಟಿ ಹಾಕಿರುತ್ತಾರೆ. ಹೀಗಾಗಿ ಇಬ್ಬರೂ ಕೂಡ ಪರಸ್ಪರ ಪರಿಚಯವಾಗಿ ಮಾತನಾಡಿ ಕೊಂಡಿರುತ್ತಾರೆ. ಈ ಸಂದರ್ಭದಲ್ಲಿ ಅಮೂಲ್ಯ ವೈದೇಹಿಯವರನ್ನು ಕೂಡ ಬಂಧನ ಮುಕ್ತರನ್ನಾಗಿ ಮಾಡಲು ಪ್ರಯತ್ನ ಪಡುತ್ತಾರೆ ಆದರೆ ಅದು ಸಾಧ್ಯವಾಗುವುದಿಲ್ಲ. ಆದರೆ ಇದೇ ಟ್ವಿಸ್ಟ್ ಇರುವ ಎಳೆಯ ದಾರವಾಹಿಯ ಮುಂದಿನ ದಿನಗಳಲ್ಲಿ ಬರೋದರಿಂದ ವೈದೇಹಿ ಪಾತ್ರವನ್ನು ಯಾರು ಮಾಡುತ್ತಾರೆ ಎಂಬ ಗೊಂದಲಗಳು ನಿರ್ಮಾಣವಾಗಿದ್ದವು. ಆದರೆ ಈ ಪಾತ್ರವನ್ನು ಸ್ವಾತಿ ಅವರು ನಿರ್ವಹಿಸಲಿದ್ದಾರೆ ಎಂಬುದಾಗಿ ಈಗ ತಿಳಿದುಬಂದಿದೆ. ಈ ಪಾತ್ರ ಸಾಕಷ್ಟು ಸವಾಲು ದಾಯಕವಾಗಿದೆ ಇದನ್ನು ನಿರ್ವಹಿಸಲು ನಾನು ಕಾತುರಳಾಗಿದ್ದೇನೆ ಎಂಬುದಾಗಿ ಸ್ವಾತಿ ಅವರು ಹಂಚಿಕೊಂಡಿದ್ದಾರೆ.