ಕನ್ನಡದ ಟಾಪ್ ಧಾರವಾಹಿ ಗಟ್ಟಿಮೇಳ ಅಂಜಲಿ ರವರು ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತೆ?? ಯಪ್ಪಾ ಇಷ್ಟೊಂದಾ??

1,196

ನಮಸ್ಕಾರ ಸ್ನೇಹಿತರೇ ಇತ್ತೀಚಿನ ಸಮಯಗಳಲ್ಲಿ ಸಿನಿಮಾಗಳಿಗಿಂತ ಕಿರುತೆರೆಯ ವಾಹಿನಿಗಳು ಸಾಕಷ್ಟು ಜನಪ್ರಿಯ ಹಾಗೂ ಮುಂದುವರೆದಿವೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು. ಯಾಕೆಂದರೆ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದಿದ್ದ ಲಾಕ್ ಡೌನ್ ಸಂದರ್ಭದಲ್ಲಿ ಜನರಿಗೆ ಮನರಂಜನೆ ನೀಡಿದ್ದು ಇದೇ ಕಿರುತೆರೆ ಧಾರಾವಾಹಿಗಳು. ಅದರಲ್ಲೂ ಕೂಡ ಇತ್ತೀಚಿನ ದಿನಗಳಲ್ಲಿ ಗಟ್ಟಿಮೇಳ ಧಾರವಾಹಿ ಕರ್ನಾಟಕ ಪ್ರೇಕ್ಷಕರ ಮನ ಗೆಲ್ಲುವುದರಲ್ಲಿ ಸಾಕಷ್ಟು ಬೇರೆ ಧಾರಾವಾಹಿಗಳಿಗಿಂತ ಮುಂದಿದೆ ಎಂದು ಹೇಳಬಹುದಾಗಿದೆ.

ಧಾರಾವಾಹಿಯಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಕೂಡ ಪ್ರೇಕ್ಷಕರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಿರಿಯ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಕೂಡ ಗಟ್ಟಿಮೇಳ ಧಾರವಾಹಿಯನ್ನು ಇಷ್ಟಪಡುವವರು ಎಲ್ಲರೂ ಕೂಡ ಇದ್ದಾರೆ. ಇನ್ನು ಗಟ್ಟಿಮೇಳ ಧಾರವಾಹಿಯಲ್ಲಿ ಕೊನೆಯ ತಂಗಿಯ ಕುರಿತಂತೆ ಹೆಚ್ಚಿನ ಜನರಿಗೆ ಗೊತ್ತಿಲ್ಲ ಅವರ ಕುರಿತಂತೆ ಇಂದು ಮಾತನಾಡಲು ಹೊರಟಿದ್ದೇವೆ. ಕೊನೆಯ ತಂಗಿಯ ನಿಜವಾದ ಹೆಸರು ಮಹತಿ ವೈಷ್ಣವಿ ಎಂದು. ಈಕೆ ಹುಟ್ಟಿದ್ದು 2006 ರ ಫೆಬ್ರವರಿ ನಾಲ್ಕರಂದು. ಇನ್ನು ಇವಳ ಪೋಷಕರಾದ ಸುಚಿತ್ರ ಹಾಗೂ ಮುರುಳಿದರನ್ ಇಬ್ಬರು ಕೂಡ ವೃತ್ತಿಯಲ್ಲಿ ವೈದ್ಯರು.

ಐದುವರ್ಷದ ವಳಿರಬೇಕಾದರೆ ಮಹತಿ ನೃತ್ಯ ಹಾಗೂ ಸಂಗೀತವನ್ನು ಕರಗತ ಮಾಡಿಕೊಂಡಿದ್ದಾಳೆ. ಗಟ್ಟಿಮೇಳ ಧಾರಾವಾಹಿಯಲ್ಲಿ ಅಂಜಲಿ ಪಾತ್ರವನ್ನು ನಿರ್ವಹಿಸುವ ಮಹತಿ ಕೇವಲ ಸಂಗೀತ ಹಾಗೂ ನೃತ್ಯ ಮಾತ್ರವಲ್ಲದೆ ಒಳ್ಳೆಯ ಭಾಷಣಗಾರ್ತಿ ಕೂಡ ಹೌದು. ಅಂಜಲಿ ಪಾತ್ರವನ್ನು ನಿರ್ವಹಿಸುತ್ತಿರುವ ಮಹತಿ ಈಗ 10ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದು ಧಾರವಾಹಿಗೂ ಬರುವ ಮುನ್ನವೇ ಜನಪ್ರಿಯರಾಗಿದ್ದರು. ಹೌದು ಇದಕ್ಕೂ ಮುನ್ನ ಡ್ರಾಮಾ ಜೂನಿಯರ್ಸ್ ನಲ್ಲಿ ಕೂಡ ಸ್ಪರ್ಧಿಸಿ ಜನಪ್ರಿಯತೆ ಪಡೆದುಕೊಂಡಿದ್ದಳು. ಇನ್ನು ಸುವರ್ಣ ಚಾನೆಲ್ನಲ್ಲಿ ಸಿಂಧೂರ ಎಂಬ ಧಾರವಾಹಿಯಲ್ಲಿ ಕೂಡ ನಟಿಸಿದ್ದಳು. ಇನ್ನು ಈಕೆ ಪ್ರತಿ ಎಪಿಸೋಡಿಗೆ ಐದರಿಂದ ಏಳು ಸಾವಿರ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾಳೆ.