50 ಲಕ್ಷ ಮೌಲ್ಯದ ಚಿನ್ನದ ಸರವನ್ನು ಅಭಿಮಾನಿಯೊಬ್ಬರು ಕೊಟ್ಟಾಗ ಪುನೀತ್ ರಾಜಕುಮಾರ್ ಮಾಡಿದ್ದೇನು ಗೊತ್ತಾ??

19,439

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಾಡಿರುವ ಒಳ್ಳೆಯ ಸಾಮಾಜಿಕ ಕಾರ್ಯಗಳ ಕುರಿತಂತೆ ಅವರ ಮರಣದ ನಂತರ ನಮಗೆಲ್ಲ ಒಂದೊಂದಾಗಿ ತಿಳಿಯುತ್ತ ಬಂದಿದೆ. ಇನ್ನು ಸಿನಿಮಾಗಳಿಗಿಂತ ಹೊರತಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಸಾಮಾಜಿಕ ಕಾರ್ಯಗಳನ್ನು ಎಲ್ಲಾ ಕ್ಷೇತ್ರದಲ್ಲಿ ಕೂಡ ಮಾಡಿದ್ದಾರೆ ಇದಕ್ಕಾಗಿ ಅವರಿಗೆ ಇತ್ತೀಚಿಗಷ್ಟೇ ಬಸವಶ್ರೀ ಪ್ರಶಸ್ತಿಯನ್ನು ಕೂಡ ನೀಡಲಾಗಿದೆ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಹತ್ತನೇ ವ್ಯಕ್ತಿಯಾಗಿ ಕೂಡ ಮರಣೋತ್ತರವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇನ್ನು ಅಪ್ಪು ಅವರನ್ನು ಕಳೆದುಕೊಂಡಿರುವ ದುಃಖದಲ್ಲಿರುವ ಪುನೀತ್ ರಾಜಕುಮಾರ್ ಅವರ ಪತ್ನಿ ಮಕ್ಕಳು ಹಾಗೂ ಕುಟುಂಬಸ್ಥರು ಇನ್ನೂ ಕೂಡ ಅವರನ್ನು ಕಳೆದುಕೊಂಡಿರುವ ದುಃಖವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೂ ಕೂಡ ಪುನೀತ್ ರಾಜಕುಮಾರ್ ರವರ ಪತ್ನಿ ಅಶ್ವಿನಿ ಅವರು ಅಪ್ಪು ಅವರು ನಡೆಸಿಕೊಂಡು ಬರುತ್ತಿದ್ದ ಎಲ್ಲಾ ಕಾರ್ಯಗಳನ್ನು ಒಂದೊಂದಾಗಿ ಮುಂದುವರಿಸಿಕೊಂಡು ಹೋಗಲು ಈಗಾಗಲೇ ನಿಶ್ಚಯಿಸಿದ್ದಾರೆ. ಇನ್ನು ಈಗ ಪುನೀತ್ ರಾಜಕುಮಾರ್ ರವರು ಮಾಡಿರುವ ಒಂದು ಕೆಲಸದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಕೂಡ ದೊಡ್ಮನೆ ಹುಡುಗನನ್ನು ಹೊಗಳುತ್ತಿದ್ದಾರೆ. ಹಾಗಿದ್ದರೆ ಆ ಕೆಲಸ ಏನು ಎಂಬುದನ್ನು ನಾವು ನಿಮಗೆ ಹೇಳುತ್ತೇವೆ ಬನ್ನಿ.

ಹೌದು ಗೆಳೆಯರೇ ಒಂದು ದಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಚಿನ್ನದಂಗಡಿಗೆ ಹೋಗಿದ್ದಾಗ ಆ ಚಿನ್ನದಂಗಡಿ ಮಾಲೀಕ ನೀವು ಬರುತ್ತೀರಿ ಎಂಬುದನ್ನು ಅರಿತು ನಿಮಗಾಗಿ ಒಂದು ಉಡುಗೊರೆಯನ್ನು ಸಿದ್ಧಪಡಿಸಿದ್ದೇವೆ ಎಂಬುದಾಗಿ ಪುನೀತ್ ಅವರಿಗೆ ಹೇಳುತ್ತಾರೆ. ಹೌದು ಬರೋಬ್ಬರಿ ಒಂದು ಕೆಜಿ ತೂಕವಿರುವ ಅಣ್ಣಾವ್ರ ಡಾಲರ್ ಇರುವ 50 ಲಕ್ಷ ಮೌಲ್ಯದ ಚಿನ್ನದ ಸರವನ್ನು ಅಪ್ಪು ಅವರಿಗೆ ಉಡುಗೊರೆಯಾಗಿ ಅವರ ಅಭಿಮಾನಿಯಾಗಿರುವ ಅಂಗಡಿ ಮಾಲೀಕ ನೀಡಲು ಬಂದಿದ್ದರು. ಅಭಿಮಾನಿಗೆ ಬೇಸರವಾಗಬಾರದೆಂದು ಅವರು ಚಿನ್ನದ ಸರವನ್ನು ತೊಡಿಸುವವರೆಗೂ ಸುಮ್ಮನಿದ್ದರು ನಂತರ ಆ ಸರವನ್ನು ಪುನಹ ಅಭಿಮಾನಿಗೆ ತಮ್ಮ ಕೈಯ್ಯಾರೆ ತಾವೇ ತೊಡಿಸಿದ್ದರು. ಇದು ದೊಡ್ಮನೆ ಹುಡುಗನ ನಿಜವಾದ ಚಿನ್ನದ ಮನಸ್ಸು ಎಂದು ಹೇಳಬಹುದಾಗಿದೆ. ಈ ವಿಚಾರದ ಕುರಿತಂತೆ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.