ವಿಚ್ಛೇದನ ಪಡೆದಾಗ ಸುಮ್ಮನಿದ್ದ ನಾಗಚೈತನ್ಯ ಫ್ಯಾನ್ಸ್ ಈಗ ಇದ್ದಕಿದ್ದ ಹಾಗೆ ಸಮಂತಾಗೆ ಬಾಯಿಗೆ ಬಂದ ಹಾಗೆ ಬೈದದ್ದು ಯಾಕೆ ಗೊತ್ತೇ??

322

ನಮಸ್ಕಾರ ಸ್ನೇಹಿತರೇ ನಾಗಚೈತನ್ಯ ಹಾಗೂ ಸಮಂತ ದಂಪತಿಗಳು ಈಗಾಗಲೇ ಕಾನೂನಾತ್ಮಕವಾಗಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ಹಲವಾರು ಸಮಯಗಳು ಕಳೆದುಹೋಗಿದೆ. ಇನ್ನು ಇದು ಎಲ್ಲರಿಗೂ ಗೊತ್ತಾಗಿರುವುದು ಇಬ್ಬರೂ ಕೂಡ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಮಾಡಿರುವ ಪೋಸ್ಟ್ ನಿಂದಾಗಿ. ಇತ್ತ ಸಮಂತಾ ರವರು ದೇಶ-ವಿದೇಶಗಳ ಪ್ರವಾಸವನ್ನು ಮಾಡುತ್ತಾ ಹಳೆಯ ನೆನಪುಗಳನ್ನು ಮರೆಯಲು ಪ್ರಯತ್ನಿಸುತ್ತಿದ್ದಾರೆ ಹಾಗೂ ಹೊಸ ಹೊಸ ಸಿನಿಮಾಗಳನ್ನು ಕೂಡ ಒಪ್ಪಿಕೊಳ್ಳಲು ಪ್ರಾರಂಭಿಸಿದ್ದಾರೆ.

ಇನ್ನು ಈ ಕಡೆ ನಾಗಚೈತನ್ಯ ರವರು ನವೆಂಬರ್ 23ರಂದು ತಮ್ಮ ಜನ್ಮ ದಿನದ ವಿಶೇಷವಾಗಿ ಹೊಸ ಚಿತ್ರಗಳಾದಂತಹ ಥ್ಯಾಂಕ್ಯೂ ಹಾಗೂ ಬಂಗಾರ ರಾಜು ಚಿತ್ರಗಳನ್ನು ಘೋಷಿಸುವ ಮೂಲಕ ಚಿತ್ರೀಕರಣದಲ್ಲಿ ತಾನು ಕೂಡ ಬ್ಯುಸಿ ಇದ್ದೇನೆ ಎಂಬುದನ್ನು ತೋರಿಸಿದ್ದಾರೆ. ಇಬ್ಬರು ಕೂಡ ತಮ್ಮ ಜೀವನದಲ್ಲಿ ಸಿನಿಮಾಗಳು ಹಾಗೂ ಇತರ ಕಾರ್ಯಗಳೊಂದಿಗೆ ಬ್ಯುಸಿ ಆಗಿದ್ದಾರೆ. ಆದರೆ ಇದೇ ನವೆಂಬರ್ 23ರಂದು ನಾಗಚೈತನ್ಯ ರವರ ಜನ್ಮ ದಿನ ಇದ್ದ ಕಾರಣ ಚಿತ್ರರಂಗದ ಹಲವಾರು ಗಣ್ಯರು ಹಾಗೂ ಸಹ ನಟರು ನಟಿಯರು ಅವರಿಗೆ ಜನ್ಮದಿನದ ಶುಭಾಶಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕೋರಿದ್ದರು.

ಆದರೆ ಈಗ ನಾಗಚೈತನ್ಯ ಅವರ ಕೆಲವು ಅಭಿಮಾನಿಗಳು ಸಮಂತ ಅವರಿಗೆ ನಿಂದನಾತ್ಮಕ ಪದ ಪ್ರಯೋಗ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಬೈಯುತ್ತಿದ್ದಾರೆ. ಹೌದು ಗೆಳೆಯರೆ ಇಷ್ಟು ವರ್ಷ ಇಬ್ಬರು ಜೊತೆಯಾಗಿ ಇದ್ದಾಗ ಅದ್ದೂರಿಯಾಗಿ ಜನ್ಮ ದಿನವನ್ನು ಆಚರಿಸಿಕೊಂಡು ಪರಸ್ಪರ ಸಂತೋಷವಾಗಿದ್ದ ಸಮಂತ ಹಾಗೂ ನಾಗಚೈತನ್ಯ ರವರು ಈ ವರ್ಷ ಬೇರೆಯಾದ ಕಾರಣ ಜನ್ಮ ದಿನವನ್ನು ಆಚರಿಸಿಕೊಂಡಿಲ್ಲ. ಅದಕ್ಕಾಗಿ ಸಮಂತ ಅವರು ಈ ವರ್ಷ ನಾಗಚೈತನ್ಯ ರವರಿಗೆ ಜನ್ಮದಿನದ ಶುಭಾಶಯಗಳನ್ನು ಕೂಡ ಕೋರಿರಲಿಲ್ಲ. ಈ ಕಾರಣಕ್ಕಾಗಿಯೇ ಸಮಂತಾ ಅವರಿಗೆ ನಾಗಚೈತನ್ಯ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬೈದಿದ್ದಾರೆ. ಕಾನೂನಾತ್ಮಕವಾಗಿ ಯೇ ಇಬ್ಬರು ವಿವಾಹ ವಿಚ್ಛೇದನವನ್ನು ಪಡೆದುಕೊಂಡ ನಂತರ ಅವರ ಪಾಡಿಗೆ ಅವರು ಇರುವುದು ಸಾಮಾನ್ಯ. ಹೀಗಾಗಿ ಸಮಂತ ಅವರಿಗೆ ಬೈಯಲು ಹಕ್ಕು ಯಾರಿಗೂ ಇಲ್ಲ ಎಂಬುದು ಕೆಲವರ ಅಭಿಪ್ರಾಯ.