ಎರಡು ದಿನಗಳ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡ ರಶ್ಮಿ ರವರು ಇಂದು ತೆಗೆದುಕೊಂಡಿರುವ ದೊಡ್ಡ ನಿರ್ಧಾರ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಕಿರುತೆರೆಯ ನಟ ಹಾಗೂ ನಟಿಯರ ಮದುವೆ ಸಾಲುಸಾಲಾಗಿ ನಡೆಯುತ್ತಿದೆ. ಹೆಸರು ಹೇಳುತ್ತ ಹೋದರೆ ತುಂಬಾನೇ ಇದೆ. ಚಂದನ್ ನಿವೇದಿತಾ ಮಯೂರಿ ಅರುಣ್ ದೀಪಿಕಾ ಆಕಾರ್ಷ್ ಕವಿತಾ ಗೌಡ ಚಂದನ್ ಗೌಡ ಹಲವಾರು ಜನರ ಹೆಸರು ಸಿಗುತ್ತದೆ. ಇನ್ನು ಈಗ ಇದೇ ಮದುವೆಯ ಶುಭ ಸುದ್ದಿಯನ್ನು ನಮಗೆಲ್ಲ ಹೇಳಲು ಲಕ್ಷ್ಮಿ ಬಾರಮ್ಮ ಧಾರವಾಹಿ ಖ್ಯಾತಿಯ ರಶ್ಮಿ ಪ್ರಭಾಕರ್ ಕೂಡ ಸಿದ್ದರಾಗಿದ್ದಾರೆ.
ಹೌದು ಗೆಳೆಯರೆ ರಶ್ಮಿ ಪ್ರಭಾಕರ್ ರವರು ಲಕ್ಷ್ಮೀ ಬಾರಮ್ಮ ಧಾರವಾಹಿ ಕವಿತಾ ಗೌಡ ಬಿಟ್ಟುಹೋಗಿರುವ ಚಿನ್ನು ಪಾತ್ರವನ್ನು ನಿರ್ವಹಿಸುತ್ತಿರುವ ನಟಿ. ನಟಿಸಿದ ಕೆಲವೇ ಸಮಯದಲ್ಲಿ ವೇಗವಾಗಿ ಪ್ರೇಕ್ಷಕರ ಮನಗೆದ್ದಿರುವ ನಟಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರವಾಹಿ ತಮ್ಮ ಪಾತ್ರದ ಮೂಲಕ ಕರ್ನಾಟಕದ ಮೂಲೆಮೂಲೆಗೂ ಕೂಡ ಪರಿಚಿತರಾಗಿದ್ದಾರೆ ರಶ್ಮಿ ಪ್ರಭಾಕರ್. ಇನ್ನು ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ಹಾಗೂ ತೆಲುಗು ಧಾರವಾಹಿಗಳಲ್ಲಿ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಇನ್ನು ಮೊನ್ನೆಯಷ್ಟೇ ನಟಿ ರಶ್ಮಿ ಪ್ರಭಾಕರ್ ಅವರು ಬೆಂಗಳೂರಿನಲ್ಲಿ ತಮ್ಮ ಗುರುಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಆದರೆ ಇದೀಗ ಮದುವೆ ಬಗ್ಗೆ ಬೇರೆಯದೇ ನಿರ್ಧಾರವನ್ನು ತಿಳಿಸಿದ್ದಾರೆ ಅದರ ಕುರಿತಂತೆ ನಿಮಗೆ ವಿವರವಾಗಿ ಹೇಳಲ್ಲಿದ್ದೇವೆ ತಪ್ಪದೆ ಕೊನೆಯವರೆಗೂ ಓದಿ. ಲಕ್ಷ್ಮೀ ಬಾರಮ್ಮ ಶುಭವಿವಾಹ ಮನಸೆಲ್ಲ ನೀನೆ ಜೀವನಚೈತ್ರ ಮಹಾಭಾರತ ದರ್ಪಣ ತಮಿಳಿನ ಅರುಂಧತಿ ತೆಲುಗಿನ ಪೌರ್ಣಮಿ ಹಾಗೂ ಕಾವ್ಯಾಂಜಲಿ ಧಾರವಾಹಿಯಲ್ಲಿ ನಟಿಸಿದ್ದಾರೆ ರಶ್ಮಿ ಪ್ರಭಾಕರ್ ಅವರು. ಇನ್ನು ಈಗ ನಟಿ ರಶ್ಮಿ ಪ್ರಭಾಕರ್ ಅವರು ಮೊನ್ನೆಯಷ್ಟೇ ನಿಖಿಲ್ ಭಾರ್ಗವ್ ಎನ್ನುವವರ ಜೊತೆಗೆ ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ.

ಇನ್ನು ನಿಖಿಲ್ ಭಾರ್ಗವ್ ರವರು ಮೊದಲು ಮಾಧ್ಯಮವೊಂದರಲ್ಲಿ ಕೆಲಸ ಮಾಡುತ್ತಿದ್ದು ಈಗ ಜಾಹೀರಾತು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮೂರು ವರ್ಷಗಳ ಕಾಲ ಇವರಿಬ್ಬರೂ ಕೂಡ ಸಾಕಷ್ಟು ಪರಿಚಿತರಾಗಿ ಪ್ರೀತಿಯನ್ನು ಮಾಡುತ್ತಿದ್ದರು. ಈಗ ಸದ್ಯಕ್ಕೆ ಎಂಗೇಜ್ಮೆಂಟ್ ಆಗಿದ್ದು ಮುಂದಿನ ವರ್ಷ ಏಪ್ರಿಲ್ 25 ರಂದು ಮದುವೆ ಮಾಡಿಕೊಳ್ಳಲಿದ್ದಾರೆ ಎಂಬ ಬಲ್ಲ ಸೂತ್ರಗಳು ಮಾಹಿತಿ ದೊರಕಿದೆ.
ಈಗಾಗಲೇ ತಮ್ಮ ರಾಜಕುಮಾರನ ಜೊತೆಗೆ ರಶ್ಮಿ ಪ್ರಭಾಕರ್ ಅವರು ಫೋಟೋಶೂಟ್ ಮಾಡಿಸಿಕೊಂಡಿದ್ದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ಫೋಟೋಗಳು ಕೂಡ ಹರಿದಾಡುತ್ತಿವೆ. ಇಬ್ಬರ ಫೋಟೋಗಳನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ನೋಡಿ ಅಭಿಮಾನಿಗಳು ಮೇಡ್ ಫಾರ್ ಈಚ್ ಅದರ್ ಜೋಡಿ ಎಂಬುದಾಗಿ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಸಾಮಾನ್ಯವಾಗಿ ಎಲ್ಲರ ಮದುವೆಯಲ್ಲಿ ಆರತಕ್ಷತೆ ಕಾರ್ಯಕ್ರಮ ಇದ್ದೇ ಇರುತ್ತದೆ ಎಂಬುದು ನಿಮಗೆಲ್ಲ ಗೊತ್ತಿದೆ.

ಆದರೆ ರಶ್ಮಿ ಪ್ರಭಾಕರ್ ಅವರ ತಮ್ಮ ಮದುವೆ ಕುರಿತಂತೆ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಅದೇನೆಂದರೆ ಅವರು ತಮ್ಮ ಮದುವೆಯಲ್ಲಿ ಕೇವಲ ಶಾಸ್ತ್ರಬದ್ಧವಾಗಿ ಸುಲಭವಾಗಿ ಹಾಗೂ ಸರಳವಾಗಿ ನಾವು ಮದುವೆಯಾಗುತ್ತೇವೆ ಆದರೆ ಯಾವುದೇ ಆರತಕ್ಷತೆ ಕಾರ್ಯಕ್ರಮ ಬೇಡ ಎಂಬುದಾಗಿ ಹೇಳಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.