ಕಂಪ್ಯೂಟರ್ ಕ್ಲಾಸ್ ಗೆ ಎಂದು ಹೋದ ಹೆಂಡತಿ, ಆಮೇಲೆ ಹಿಂತಿರುಗಿ ಬರಲೇ ಇಲ್ಲ, ಮಂಡ್ಯದಲ್ಲಿ ನಡೆಯಿತು ಸಿನಿಮೀಯ ರೀತಿಯ ಪ್ಲಾನ್, ಹೀಗೂ ಇರ್ತಾರ.
ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ಸಂಸಾರ ಎಂದರೆ ಎಲ್ಲರೂ ಕೂಡ ಮೆಚ್ಚಿಕೊಳ್ಳುವಂತಾದ್ದಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹೊಂದಿಕೊಂಡು ಹೋಗುವಂತ ಹೆಣ್ಣು ಹಾಗೂ ಗಂಡು ಮಕ್ಕಳು ಸಂಸಾರದಲ್ಲಿ ಕಂಡುಬರುತ್ತಿಲ್ಲ. ಹೌದು ಗೆಳೆಯರೇ ಒಂದು ಕಾಲದಲ್ಲಿ ಎರಡು ಮನಸ್ಸುಗಳನ್ನು ಒಂದಾಗುವ ಶುಭ ಸಮಾರಂಭವೇ ಮದುವೆ ಎಂದು ಹೇಳಲಾಗುತ್ತಿದೆ. ಈಗ ಮದುವೆಯಾದ ವರ್ಷದ ಒಳಗಡೆ ಇಬ್ಬರ ನಡುವೆ ಕೂಡ ಮನಸ್ತಾಪ ಭಿನ್ನಾಭಿಪ್ರಾಯಗಳು ಮೂಡಿಬಂದು ಬೇರೆಯಾಗುತ್ತಾರೆ ಇಲ್ಲವೇ ಒಬ್ಬರನ್ನೊಬ್ಬರು ಮುಗಿಸಿಬಿಡುತ್ತಾರೆ. ಇನ್ನು ಇಂದು ನಾವು ಹೇಳ ಹೊರಟಿರುವ ಕಥೆ ಕೂಡ ಇದಕ್ಕೆ ಹೊರತಾಗಿಲ್ಲ. ಈ ವಿಚಾರ ನಡೆದಿರುವುದು ಬೇರೆಲ್ಲೂ ಅಲ್ಲ ನಮ್ಮ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿ.
ಆತನ ಹೆಸರು ಷಡಕ್ಷರಿ ಎಂದು. ಅವಳ ಹೆಸರು ಸಂಧ್ಯಾ ಎಂದು ಕೇವಲ 23 ವರ್ಷ ವಯಸ್ಸು. ಇಬ್ಬರಿಗೂ ಮದುವೆ ಒಂದುವರೆ ವರ್ಷದ ಹಿಂದೆ ನಡೆದಿತ್ತು. ಮದುವೆಯಾದ ಹೊಸತರಲ್ಲಿ ಎಲ್ಲವೂ ಕೂಡ ಚೆನ್ನಾಗಿತ್ತು ಸಂಸಾರ ಸ್ವರ್ಗದಂತಿತ್ತು. ಆದರೆ ಬರಬರುತ್ತಾ ಇಬ್ಬರ ನಡುವೆ ಕೂಡ ಮನಸ್ತಾಪಗಳು ಹೆಚ್ಚಾಗಿ ನಂತರ ದಾರಿಕಾಣದೆ ಸಂಧ್ಯಾ ತನ್ನ ತಂದೆಯ ಮನೆಗೆ ಹೋಗುತ್ತಾಳೆ. ಇನ್ನು ಸುಮ್ಮನೆ ಇದ್ದು ಬೇಜಾರಾಗಿದ್ದ ಸಂಧ್ಯಾಗೆ ಸ್ವಾವಲಂಬಿ ಜೀವನವನ್ನು ನಡೆಸಲು ಕಂಪ್ಯೂಟರ್ ಕಲಿಯಬೇಕೆಂಬ ಆಸೆ ಮೂಡಿಬರುತ್ತದೆ. ಒಮ್ಮೆ ಕಂಪ್ಯೂಟರ್ ಕ್ಲಾಸಿಗೆ ಹೋದಾಗ ಮತ್ತೆ ಸಂಧ್ಯಾ ಮನೆಗೆ ವಾಪಸ್ ಬರಲೇ ಇಲ್ಲ ಆಕೆಯ ಗಂಡ ಕೂಡ ಜೀವನವನ್ನು ಮುಗಿಸಿಕೊಳ್ಳುವ ಪ್ರಯತ್ನವನ್ನು ಮಾಡಿ ಆಸ್ಪತ್ರೆಗೆ ದಾಖಲಾಗಿದ್ದ.

ಇನ್ನು ಸಂಧ್ಯಾಳನ್ನು ಹುಡುಕಿದಾಗ ನಾಲೆಯಲ್ಲಿ ಆಕೆ ಕಂಡುಬರುತ್ತಾಳೆ. ಇದನ್ನು ನೋಡಿದ ಆಕೆಯ ತಂದೆ ಷಡಕ್ಷರಿ ಮೇಲೆ ತೋರಿಸುತ್ತಾರೆ. ಷಡಕ್ಷರಿ ಆಸ್ಪತ್ರೆಯಿಂದ ಹೊರಬಂದಾಗ ಪೊಲೀಸರು ಆತನನ್ನು ವಿಚಾರಿಸಿದಾಗ ಮೊದಲಿಗೆ ತನಗೇನೂ ಗೊತ್ತಿಲ್ಲ ಎಂಬಂತೆ ನಟಿಸುತ್ತಾನೆ. ನಂತರ ಪೊಲೀಸರು ತಮ್ಮ ಸ್ಟೈಲ್ ತೋರಿಸಿದಾಗ ನಿಜಾಂಶವನ್ನು ಒಪ್ಪುತ್ತಾನೆ. ಕಂಪ್ಯೂಟರ್ ಕ್ಲಾಸ್ ಮುಗಿಸಿಕೊಂಡು ಹೊರಬರಬೇಕಾದರೆ ಆವತ್ತು ಸಂಧ್ಯಾಳನ್ನು ಮಾತನಾಡಿಸಬೇಕೆಂದು ಬೆಟ್ಟದ ಮೇಲೆ ಕರೆದುಕೊಂಡು ಹೋಗುತ್ತಾನೆ. ನಂತರ ಅಲ್ಲಿ ಮುಗಿಸಿ ಅಲ್ಲೇ ಇದ್ದ ನಾಲೆಗೆ ಎಸೆಯುತ್ತಾನೆ. ನಂತರ ಅನುಮಾನ ಬರಬಾರದೆ ಮುದಾಗಿ ತನ್ನ ಜೀವನವನ್ನು ತಾನೆ ಮುಗಿಸಿಕೊಂಡಂತೆ ನಾಟಕ ಮಾಡಿ ಆಸ್ಪತ್ರೆ ಸೇರುತ್ತಾನೆ. ಒಬ್ಬನ ಹುಚ್ಚುತನದಿಂದ ಬಾಳಿ ಬದುಕಬೇಕಿದ್ದ ಹೆಣ್ಣುಮಗಳ ಜೀವನದ ಹಾಳಾಗಿ ಹೋಯಿತು.