ನಿಶ್ಚಿತಾರ್ಥದ ನಂತರ ತಮ್ಮ ಹುಡುಗ ಯಾರು ಎನ್ನುವುದನ್ನು ರಿವೀಲ್ ಮಾಡಿದ್ದ ನಟಿ ರಶ್ಮಿ ಪ್ರಭಾಕರ್, ನಿಶ್ಚಿತಾರ್ಥದ ಅಪರೂಪದ ಕ್ಷಣಗಳು ಹೇಗಿವೆ ಗೊತ್ತೇ??

572

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಮದುವೆ ಸಮಾರಂಭಗಳ ಟ್ರೆಂಡ್ ಹೆಚ್ಚಾಗಿದೆ. ನೀವು ಇತ್ತೀಚಿಗೆ ನೋಡಿರುವಂತೆ ಕನ್ನಡ ಚಿತ್ರರಂಗದ ಖ್ಯಾತ ನಟಿಯಾಗಿರುವ ಪ್ರಣಿತ ಸುಭಾಷ್ ಹಾಗೂ ಕಿರುತೆರೆಯ ಸ್ಟಾರ್ ಜೋಡಿ ಗಳಾಗಿರುವ ಕವಿತಾ ಗೌಡ ಹಾಗೂ ಚಂದ ಇಬ್ಬರೂ ಕೂಡ ಸರಳವಾಗಿ ಮದುವೆಯಾಗಿದ್ದರು.

ಈಗ ಈ ಲಿಸ್ಟಿಗೆ ಇನ್ನೊಬ್ಬ ಖ್ಯಾತ ಕಿರುತೆರೆ ನಟಿ ಸೇರಿದ್ದಾರೆ. ಹೌದು ಕಲರ್ಸ್ ಕನ್ನಡ ವಾಹಿನಿಯ ಖ್ಯಾತ ಧಾರವಾಹಿ ಆಗಿರುವ ಲಕ್ಷ್ಮೀ ಬಾರಮ್ಮ ಧಾರವಾಹಿ ಲಚ್ಚಿ ಪಾತ್ರದಲ್ಲಿ ನಟಿಸಿರುವ ರಶ್ಮಿ ಪ್ರಭಾಕರ್ ರವರು ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದಾರೆ. ನಿನ್ನೆಯಷ್ಟೇ ರಶ್ಮಿ ಪ್ರಭಾಕರ್ ರವರು ನಿಖಿಲ್ ಭಾರ್ಗವ್ ರವರನ್ನು ಎಂಗೇಜ್ಮೆಂಟ್ ಆಗುವುದರ ಮೂಲಕ ವಿವಾಹಕ್ಕೆ ಸಿದ್ಧ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಸಾರಿದ್ದಾರೆ. ಇನ್ನು ನಿಕಿಲ್ ಭಾರ್ಗವ್ ಹಾಗೂ ರಶ್ಮಿ ಪ್ರಭಾಕರ್ ಇಬ್ಬರೂ ಕೂಡ ಹಲವಾರು ವರ್ಷಗಳಿಂದ ಚಿರಪರಿಚಿತರು. ಪರಿಚಯ ಪ್ರೀತಿಗೆ ಸೀದಾ ಮದುವೆಯ ಸಂಬಂಧಕ್ಕೆ ಬಡ್ತಿ ಪಡೆಯಲು ಸಿದ್ಧವಾಗಿದೆ.

ಇನ್ನು ಮೂಲಗಳ ಪ್ರಕಾರ ನಿಖಿಲ್ ಭಾರ್ಗವ್ ರವರು ಪ್ರತಿಷ್ಠಿತ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದಾರೆ. ನಿನ್ನೆಯಷ್ಟೇ ಇಬ್ಬರ ನಿಶ್ಚಿತಾರ್ಥ ನಡೆದಿದ್ದು ಅತಿಶೀಘ್ರದಲ್ಲೇ ಇಬ್ಬರು ಹಸೆಮಣೆ ಏರಲಿದ್ದಾರೆ. ಇನ್ನು ತಮ್ಮ ಪೋಸ್ಟ್ನಲ್ಲಿ ರಶ್ಮಿ ಪ್ರಭಾಕರ್ ಅವರು ನಿಖಿಲ್ ಭಾರ್ಗವ್ ಅವರನ್ನು ತಮ್ಮ ಜೀವನದ ರಾಜ ಎಂದು ಕರೆದಿದ್ದು, ಅವರೇ ನನ್ನ ಪ್ರಪಂಚ ಎಂಬುದಾಗಿ ಕೂಡಾ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಇವರಿಬ್ಬರ ನಿಶ್ಚಿತಾರ್ಥ ಕಾರ್ಯಕ್ರಮದ ಸುಂದರ ಫೋಟೋ ವಿಡಿಯೋಗಳನ್ನು ನೀವು ಈ ಕೆಳಗಡೆ ನೋಡಬಹುದಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಿ.