ರಾಜರಾಣಿ ಶೋ ಗೆದ್ದ ಮುದ್ದಾದ ಜೋಡಿ ಸ್ನೇಹ ಹಾಗೂ ಚಂದನ್ ರವರಿಗೆ ನಿಜವಾಗಲೂ ಕೈಗೆ ಸಿಕ್ಕ ಹಣವೆಷ್ಟು ಗೊತ್ತೇ??

924

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ಕನ್ನಡ ಕಿರುತೆರೆಯಲ್ಲಿ ಮೂಡಿಬರುವ ಕಾರ್ಯಕ್ರಮಗಳೇ ಅತ್ಯಂತ ಹೆಚ್ಚು ಜನಪ್ರಿಯವಾಗಿವೆ. ಅವುಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಜ-ರಾಣಿ ಕಾರ್ಯಕ್ರಮ ಕೂಡ ಹೌದು. ನಟಿ ತಾರಾ ಹಾಗೂ ಸೃಜನ್ ಲೋಕೇಶ್ ಅವರ ತೀರ್ಪುಗಾರಿಕೆ ಯಲ್ಲಿ ಮೂಡಿ ಬರುತ್ತಿದ್ದ ಧಾರವಾಹಿ ಈಗಾಗಲೇ ಯಶಸ್ವಿಯಾಗಿ ಮುಕ್ತಾಯವಾಗಿದೆ. ಇನ್ನು ರಾಜ ರಾಣಿ ಕಾರ್ಯಕ್ರಮದಲ್ಲಿ ವಿಜೇತರಾಗಿ ನೇಹಾಗೌಡ ಹಾಗೂ ಚಂದನ್ ರವರ ಮೂಡಿಬಂದಿದ್ದಾರೆ.

ಈ ಕಾರ್ಯಕ್ರಮ ಕಿರುತೆರೆಯ ನಿಜ ಜೋಡಿಗಳನ್ನು ಪ್ರೇಕ್ಷಕರ ಮುಂದೆ ಕರೆತರುವ ಪ್ರಯತ್ನವಾಗಿತ್ತು. ಇಲ್ಲಿ ಕಾರ್ಯಕ್ರಮ ಹಲವಾರು ವಿಚಾರಗಳಿಗಾಗಿ ಸುದ್ದಿಯಾಗಿತ್ತು. ಈ ಕಾರ್ಯಕ್ರಮವನ್ನು ಕಿರುತೆರೆಯ ಪ್ರೇಕ್ಷಕರು ಕೂಡ ಸಾಕಷ್ಟು ಇಷ್ಟಪಟ್ಟಿದ್ದರು. ಇನ್ನು ಈಗ ಈ ಕಾರ್ಯಕ್ರಮವನ್ನು ನೇಹಾಗೌಡ ಹಾಗೂ ಚಂದನ್ ಜೋಡಿ ಗೆದ್ದಿರುವುದು ಕೂಡ ಎಲ್ಲರಿಗೆ ಸಂತೋಷವನ್ನು ಮೂಡಿಸಿದೆ. ಈ ಹಿಂದೆ ಲಕ್ಷ್ಮೀಬಾರಮ್ಮ ಧಾರಾವಾಹಿಯಲ್ಲಿ ನಟಿಸುವ ಮೂಲಕ ಎಲ್ಲರ ಮನ ಗೆದ್ದಂತಹ ನೇಹಾ ಗೌಡ ಈಗ ರಾಜ-ರಾಣಿ ಕಾರ್ಯಕ್ರಮದಲ್ಲಿ ಕೂಡ ವಿಜೇತರಾಗುವ ಮೂಲಕ ಇನ್ನಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ನೆಹಾಗೌಡ ಹಾಗೂ ಚಂದನ್ ವಿಜೇತರಾಗುವ ಮೂಲಕ ಎಷ್ಟು ಬಹುಮಾನ ಗಳಿಸಿಕೊಂಡಿದ್ದಾರೆ ಎಂಬುದರ ಕುರಿತು ವಿವರವಾಗಿ ಹೇಳಲು ಹೊರಟಿದ್ದೇವೆ ತಪ್ಪದೇ ಕೊನೆಯವರೆಗೂ ಓದಿ. ಇನ್ನು ರಾಜ-ರಾಣಿ ಕಾರ್ಯಕ್ರಮದಲ್ಲಿ ಎರಡನೇ ಸ್ಥಾನವನ್ನು ಪಡೆದವರು ಕಿರುತೆರೆ ನಟಿ ಇಶಿತಾ ಹಾಗೂ ಡ್ಯಾನ್ಸ್ ಕೊರಿಯೋಗ್ರಾಫರ್ ಮುರುಗನಂದ. ಈ ಜೋಡಿ ರನ್ನರ್-ಅಪ್ ಆಗಿದ್ದು ಇವರಿಗೆ 2.50 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ. ಇನ್ನು ಶೋನ ವಿಜೇತರಾಗಿರುವ ನೇಹಾಗೌಡ ಹಾಗೂ ಚಂದನ್ ಜೋಡಿಗೆ ಬರೋಬ್ಬರಿ 5 ಲಕ್ಷ ರೂಪಾಯಿ ನಗದು ಬಹುಮಾನ ದೊರೆತಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲರಿಗೂ ಕೂಡ ನಗದು ಬಹುಮಾನ ದೊರಕಿದೆ. ಈ ಕಾರ್ಯಕ್ರಮವು ಕೂಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದು ಈಗ ಯಶಸ್ವಿಯಾಗಿ ಮುಕ್ತಾಯವಾಗಿದೆ.