ಮೊದಲ ಬಾರಿಗೆ ತನ್ನ ಮಗಳ ಫೋಟೋಗಳನ್ನು ಬಿಡುಗಡೆ ಮಾಡಿದ ಕಿರುತೆರೆಯ ಖ್ಯಾತ ನಟಿ ಚೈತ್ರ ರೈ, ಮುದ್ದಾದ ಮಗು ಹೇಗಿದೆ ಗೊತ್ತೇ??

2,527

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ನಿಜ ಜೀವನದಲ್ಲೂ ಕೂಡ ಕಿರುತೆರೆ ನಟ ನಟಿಯರು ಜನಪ್ರಿಯತೆ ಸಾಕಷ್ಟು ಜಾಸ್ತಿಯಾಗಿದೆ. ಇತ್ತೀಚಿಗೆ ನಿಮಗೆಲ್ಲ ತಿಳಿದಿರುವಂತೆ ಸಾಕಷ್ಟು ನಟ-ನಟಿಯರು ಕಳೆದ ಕೆಲವು ಸಮಯಗಳಿಂದ ಮದುವೆಯಾಗಿ ಸುದ್ದಿ ಮಾಡುತ್ತಿದ್ದರು. ಈಗ ಒಬ್ಬ ಕಿರುತೆರೆಯ ನಟಿ ಬೇರೊಂದು ವಿಷಯಕ್ಕೆ ಸುದ್ದಿ ಮಾಡುತ್ತಿದ್ದಾರೆ.

ಜನಪ್ರಿಯ ರಾಧಾಕಲ್ಯಾಣ ಧಾರವಾಹಿಯಲ್ಲಿ ವಿಶೇಷ ಪಾತ್ರದಲ್ಲಿ ನಟಿಸುವ ಮೂಲಕ ಎಲ್ಲರ ಮನಗೆದ್ದಿರುವ ಚೈತ್ರ ರೈರವರು ಈಗಾಗಲೇ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದು ಮಗಳಿಗೆ ಫೋಟೋಶೂಟ್ ಮಾಡಿಸಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ. ಸದಾಕಾಲ ಧಾರವಾಹಿಗಳಲ್ಲಿ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಚೈತ್ರ ರೈ ರವರು ಗರ್ಭಿಣಿ ಆಗಿರುವ ಕಾರಣದಿಂದಾಗಿ ಧಾರವಾಹಿಯಿಂದ ದೂರವುಳಿದಿದ್ದರು. ಕುಸುಮಾಂಜಲಿ ಬೊಂಬೆಯಾಟವಯ್ಯ ಬಣ್ಣದ ಬುಗುರಿ ಪೌರ್ಣಮಿ ನಾಗಮಣಿಯಂತಹ ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಚೈತ್ರ ರೈ.

ಇನ್ನು ಕರಾವಳಿ ಮೂಲದವರಾಗಿದ್ದ ಚೈತ್ರ ಇತ್ತೀಚೆಗಷ್ಟೇ ಮಗುವಿಗೆ ಜನ್ಮ ನೀಡಿ ಫೋಟೋ ಶೂಟ್ ಹಾಗೂ ನಾಮಕರಣವನ್ನು ಕೂಡ ಮಾಡಿದ್ದಾರೆ. ಮಗುವಿಗೆ ನಿಷ್ಕ ಶೆಟ್ಟಿ ಎಂಬ ಹೆಸರನ್ನು ಇಟ್ಟಿದ್ದು ಮಗುವಿನ ಹೆಸರಿನಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಖಾತೆಯೊಂದನ್ನು ತೆರೆದು ಮಗುವಿನ ಫೋಟೋಗಳನ್ನು ಕೂಡ ಅಪ್ಲೋಡ್ ಮಾಡುತ್ತಿದ್ದಾರೆ. ಇನ್ನು ಇದೇ ತರಹ ಈ ಹಿಂದೆ ಮಯೂರಿ ಅವರು ಕೂಡ ಮಾಡಿದ್ದರು ಎಂಬುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು. ಚೈತ್ರಾ ರೈ ರವರ ಮಗುವಿನ ಫೋಟೋ ನೋಡಿ ನಿಮಗೆ ಏನನ್ನಿಸಿತು ಎಂಬುದನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿ.