ತಾನೇ ಎಲ್ಲ ತನ್ನಿಂದ ಎಲ್ಲ ಎಂದು ಬೀಗುತ್ತಿರುವ ಅರಬ್ ದೇಶಗಳಿಗೆ ಮಹಾ ಶಾಕ್, ಇನ್ನು ಕೆಲವೇ ವರ್ಷಗಳಲ್ಲಿ ಏನಾಗಲಿದೆ ಗೊತ್ತೇ??

112

ನಮಸ್ಕಾರ ಸ್ನೇಹಿತರೇ ಅತ್ಯಂತ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಜಗತ್ತಿನಲ್ಲಿ ಅರಬ್ ರಾಷ್ಟ್ರಗಳು ಕೂಡ ಸಾಕಷ್ಟು ಮುಂಚೂಣಿಯಲ್ಲಿ ಕಾಣಸಿಗುತ್ತದೆ. ಇದಕ್ಕೆ ಮುಖ್ಯ ಕಾರಣವಾಗಿರುವುದು ಜಗತ್ತಿನ ಬಹುತೇಕ ತೈಲ ಮಾರಾಟ ಪ್ರಾರಂಭವಾಗುವುದು ಇಲ್ಲಿಯೇ. ಪೆಟ್ರೋಲ್ ಹಾಗೂ ಡೀಸೆಲ್ ಗಳಿಂದಾಗಿ ಜಾಗತಿಕವಾಗಿ ಅತ್ಯಂತ ಐಶ್ವರ್ಯ ಭರಿತ ದೇಶಗಳಾಗಿವೆ ಇವುಗಳು.

ಆದ 2050 ರ ಹೊತ್ತಿಗೆ ಅರಬ್ ರಾಷ್ಟ್ರಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ ಬಹುದಾದಂತಹ ಎಲ್ಲಾ ಸಾಧ್ಯತೆಗಳು ಇವೆ. ಇಲ್ಲಿ ನೆಲೆಸಿರುವ 200 ಮಿಲಿಯನ್ ಗಿಂತಲೂ ಅಧಿಕ ಜನರು ವಲಸೆ ಹೋಗಬೇಕಾದ ಅಂತಹ ಪರಿಸ್ಥಿತಿ ಬರಬಹುದು. ಉತ್ತರ ಅಜರ್ಬೈಜಾನ್ ಹಾಗೂ ದಕ್ಷಿಣ ಅಜರ್ಬೈಜಾನ್ ನಡುವಿನ ಪ್ರದೇಶದಲ್ಲಿ ಇರುವ ಉಪ್ಪು ನೀರಿನ ಸರೋವರ ಎಂದೇ ಖ್ಯಾತವಾಗಿರುವ ಉರ್ಮಿ ಲೇಕ್ ಪ್ರಾದೇಶಿಕವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಬರುತ್ತಾ ಇದೆ. ಇದರ ಪ್ರಮುಖ ಕಾರಣ ಎಂದರೆ ನದಿ ನೀರಿನ ಅಸಮರ್ಪಕ ಬಳಕೆ ಎಂದು ಹೇಳಲಾಗುತ್ತಿದೆ.

ಹೌದು ಗೆಳೆಯರೇ ಇಲ್ಲಿ ಅಡ್ಡಕ್ಕೆ ಡ್ಯಾಮ್ ಕಟ್ಟಿ ಸರೋವರಕ್ಕೆ ನೀರು ಹರಿಯದಂತೆ ಮಾಡಲಾಗಿತ್ತು. ಹೀಗಾಗಿ ಇಲ್ಲಿ ನೀರು ಬರದೇ ಕೇವಲ ಉಪ್ಪು ಮಾತ್ರ ಉಳಿದುಕೊಂಡು ಸರೋವರ ಬರಿದಾಗುತ್ತಾ ಬಂದಿದೆ. ಇಲ್ಲಿ ಇತ್ತೀಚೆಗಷ್ಟೇ ಇರಾನ್ ಇದನ್ನು ಪುನಶ್ಚೇತನ ಮಾಡುವ ಇರಾದೆಯನ್ನು ತೋರಿಸಿ ಅದಕ್ಕೆ ಪೂರಕವಾದಂತಹ ಪ್ರಾಕೃತಿಕ ಲಾಭವನ್ನು ಕೂಡ ಪಡೆದುಕೊಂಡಿತ್ತು. ಇದು ಕೇವಲ ಉದಾಹರಣೆಯಷ್ಟೇ ವಿಶ್ವಬ್ಯಾಂಕ್ ಹೇಳುವಂತೆ 2050 ರ ಹೊತ್ತಿಗೆ ಮಧ್ಯಪ್ರಾಚ್ಯ ದೇಶಗಳಲ್ಲಿ ನೀರಿನ ಅಭಾವ ಸಾಕಷ್ಟು ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಲಾಗುತ್ತಿದೆ.

ಇದಕ್ಕೆ ಕಾರಣ ಪೆಟ್ರೋಲ್ ಹಾಗೂ ಡೀಸೆಲ್ ನಲ್ಲಿ ದುಡ್ಡು ಕಾಣುತ್ತಿರುವ ಧನಿಗಳು ಶುದ್ಧಕುಡಿಯುವ ನೀರಿನ ಕುರಿತಂತೆ ಯಾವುದೇ ತಲೆಕೆಡಿಸಿಕೊಂಡಿಲ್ಲ. ಇನ್ನೂ ಕೃಷಿ ಕಾರ್ಯಗಳಿಗಾಗಿ ನೀರನ್ನು ಇಲ್ಲಿ ಬಳಸುತ್ತಾರೆ ಹೊರತು ಕುಡಿಯುವ ನೀರಿನ ವ್ಯವಸ್ಥೆಗೆ ಇನ್ನೂ ಕೂಡ ಸರಿಯಾದ ಹಾಗೂ ಶಾಶ್ವತ ಪರಿಹಾರವನ್ನು ಕಂಡುಕೊಂಡಿಲ್ಲ. ನೀರಿನ ಹಾಹಾಕಾರ ಉಂಟಾಗಿದೆ ದಿನ ದಿನಗಳಲ್ಲಿ ನೀರಿಗಾಗಿ ದೊಡ್ಡ ದೊಡ್ಡ ಘಟನೆಗಳು ಕೂಡ ನಡೆದರೆ ಯಾವುದೇ ಅನುಮಾನವಿಲ್ಲ. ಹೀಗೆ ನಡೆದಲ್ಲಿ ಖಂಡಿತವಾಗಿಯೂ ಮಧ್ಯಪ್ರಾಚ್ಯ ದಲ್ಲಿರುವ 200 ಮಿಲಿಯನ್ ಗೂ ಅಧಿಕ ಜನರು ಪ್ರದೇಶಗಳಿಗೆ ವಲಸೆ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ದುಬೈನಲ್ಲಿ ಕೂಡ ಶ್ರೀಮಂತರು ಬೇಕಾಬಿಟ್ಟಿಯಾಗಿ ಇದ್ದರೂ ಕೂಡ ಇಲ್ಲಿ ಕೂಡ ಕುಡಿಯುವ ನೀರಿನ ಅಭಾವವಿದೆ. ಇದಕ್ಕಾಗಿ ಇಲ್ಲಿ ಸಮುದ್ರದ ಉಪ್ಪು ನೀರನ್ನು ಶುದ್ಧೀಕರಿಸಿ ಬಳಸುವ ಕಾರ್ಯ ನಡೆಯುತ್ತಿದೆ. ಆದರೆ ಇದರಿಂದಾಗಿ ಸಮುದ್ರ ಜೀವಿಗಳಿಗೆ ತೊಂದರೆ ಆಗುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಆದಷ್ಟು ಮಧ್ಯಪ್ರಾಚ್ಯ ದೇಶದ ಜನರು ನೀರಿನ ಅಸಮರ್ಪಕ ಹಾಗೂ ಅವೈಜ್ಞಾನಿಕ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸದಿದ್ದರೆ,

ಇನ್ನು ಕೆಲವೇ ವರ್ಷಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುವುದು ಖಂಡಿತ. ಮೆಸಪಟೋಮಿಯಾ ನಾಗರಿಕತೆ ಉಂಟಾಗಿರುವ ಈ ನಾಡಿನಲ್ಲಿ ಈಗ ನೀರಿನ ಅಭಾವ ಉಂಟಾಗಿರುವುದು ಖಂಡಿತವಾಗಿ ಮನುಷ್ಯನು ಮಾಡಿರುವ ತಪ್ಪಾಗಿದೆ. ಇನ್ನಾದರೂ ಇದರ ಕುರಿತಂತೆ ಯೋಚನೆ ಮಾಡೋದ್ ಇಲ್ಲವಾದರೆ ಖಂಡಿತವಾಗಿ ಇದರ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.