ಬಾಯ್ಸ್ ಹಾಸ್ಟೆಲ್ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ, ಆದರೆ ಗರ್ಲ್ಸ್ ಹಾಸ್ಟೆಲ್ ನಲ್ಲಿ ಹೇಗೆಲ್ಲ ಇರುತ್ತದೆ ಗೊತ್ತೇ?? ಹುಡುಗಿಯರು ಏನೇನು ಮಾಡುತ್ತಾರೆ ಗೊತ್ತೇ??

8,271

ನಮಸ್ಕಾರ ಸ್ನೇಹಿತರೆ ನಿಮಗೆಲ್ಲ ತಿಳಿದಿರುವಂತೆ ಹೆಣ್ಣು ಮಕ್ಕಳು ಮನೆಯಲ್ಲಿದ್ದರೆ ಸುಸಂಸ್ಕೃತರಾಗಿ ಬೆಳೆಯುತ್ತಾರೆ ಹಾಗೂ ಯಾವುದೇ ಕೆಟ್ಟ ಅಭ್ಯಾಸಗಳನ್ನು ರೂಡಿಸಿಕೊಳ್ಳುವುದಿಲ್ಲ‌. ಆದರೆ ಹೆಣ್ಣುಮಕ್ಕಳು ಹೆಚ್ಚಾಗಿ ಹಾಸ್ಟೆಲ್ನಲ್ಲಿ ಇರಲು ಇಷ್ಟಪಡುತ್ತಾರೆ ಯಾಕೆ ಗೊತ್ತಾ ಅಲ್ಲಿ ಇದ್ದರೆ ಅವರು ಮನಸ್ಸಿಗೆ ಬಂದಂತೆ ಬದುಕಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕಾಗಿ. ಮನೆಯಲ್ಲಾದರೆ ಪ್ರತಿಯೊಂದು ಕೆಲಸಕ್ಕೂ ಕೂಡ ಅನುಮತಿ ಹಾಗೂ ಅಡಚಣೆಗಳನ್ನು ಕಾಣುತ್ತಾರೆ.

ಆದರೆ ಹಾಸ್ಟೆಲ್ ನಲ್ಲಿ ಏನು ಬೇಕಾದರೂ ಮತ್ತೆ ಏನು ಮಾಡಬಹುದು ಹಾಗೂ ಬೇಕೆಂದಲ್ಲಿ ಹೊರಗೆ ತಿರುಗಾಡಲು ಹೋಗಬಹುದು. ಇನ್ನು ನಾವು ಇಂದಿನ ವಿಚಾರದಲ್ಲಿ ಹಾಸ್ಟೆಲ್ನಲ್ಲಿ ಇದ್ದಾಗ ಹುಡುಗಿಯರು ಏನು ಮಾಡುತ್ತಾರೆ ಎಂಬ ಕುರಿತಂತೆ ನಿಮಗೆ ವಿವರವಾಗಿ ಹೇಳಲು ಹೊರಟಿದೆ. ತಪ್ಪದೇ ಈ ವಿಚಾರವನ್ನು ಕೊನೆಯವರೆಗೂ ಓದಿ. ಮೊದಲಿಗೆ ಹೆಚ್ಚಿನ ಸಮಯದಲ್ಲಿ ಹಾಸ್ಟೆಲ್ ಹುಡುಗಿಯರು ತಮ್ಮ ಸೆಲ್ಫಿ ತೆಗೆದುಕೊಳ್ಳಲು ಇಷ್ಟಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಹುಡುಗಿಯರಲ್ಲಿ ಸೆಲ್ಫಿ ಹುಚ್ಚು ಹೆಚ್ಚಾಗಿರುವುದು ಇದಕ್ಕೆ ಕಾರಣವಾಗಿದೆ. ಇನ್ನು ತಮ್ಮ ಹಾಸ್ಟೆಲ್ ಗೆಳತಿಯರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಕೂಡ ಇಷ್ಟಪಡುತ್ತಾರೆ.

ಇನ್ನೊಂದು ಮನೆಯಲ್ಲಿ ತುಟಿಪಿಟಕ್ಕೆನ್ನದ ಹುಡುಗಿಯರು ಹಾಸ್ಟೆಲಿಗೆ ಬಂದ ನಂತರ ಲತಾ ಮಂಗೇಶ್ಕರ್ ಅವರಂತೆ ಮಾಡಲು ಪ್ರಾರಂಭ ಮಾಡುತ್ತಾರೆ. ಹೌದು ಗೆಳೆಯರೇ ಹಾಸ್ಟೆಲಿಗೆ ಬಂದ ನಂತರ ಎಲ್ಲೆಂದರಲ್ಲಿ ಹಾಡುತ್ತಾ ಅಥವಾ ಬಾತ್ರೂಮ್ ಸಿಂಗರ್ ಆಗಲು ಪ್ರಯತ್ನಿಸುತ್ತಾರೆ. ಇನ್ನು ಎಲ್ಲದಕ್ಕಿಂತ ಮುಖ್ಯವಾಗಿ ಹುಡುಗಿಯರು ಫೇಮಸ್ ಆಗಿರುವುದು ಇದೇ ವಿಷಯಕ್ಕೆ. ಅದೇನೆಂದರೆ ದಿನ ಪ್ರಾರಂಭವಾದರೆ ಸಾಕು ದಿನ ಮುಗಿಯುವ ತನಕ ಗಾಸಿಪ್ ಮಾಡಿಕೊಂಡಿರುತ್ತಾರೆ. ಹುಡುಗಿಯರ ನೆಚ್ಚಿನ ಕಾರ್ಯದಲ್ಲಿ ಇದು ಕೂಡ ಒಂದು.

ಈ ಕಾರ್ಯಕ್ರಮ ದಿನಾಲು ಕೂಡ ಹಾಸ್ಟೆಲ್ನಲ್ಲಿ ಹುಡುಗಿಯರಲ್ಲಿ ಕಾಣೋದಕ್ಕೆ ಸಿಗುತ್ತದೆ. ಇನ್ನು ಹಾಸ್ಟೆಲ್ ಹುಡುಗಿಯರಲ್ಲಿ ತೊಡಲು ಸಾಕಷ್ಟು ಬಟ್ಟೆಗಳು ಇದ್ದರೂ ಕೂಡ ಯಾವ ಬಟ್ಟೆಗಳನ್ನು ಹಾಕಿಕೊಳ್ಳಲಿ ಎಂಬುದಾಗಿ ಅಲೆಮಾರಿಯ ಮುಂದೆ ನಿಂತು ಬಟ್ಟೆಗಳನ್ನು ಪರೀಕ್ಷಿಸುತ್ತಾ ಇರುತ್ತಾರೆ. ಎಷ್ಟೇ ಚಂದದ ಬಟ್ಟೆಗಳು ಇದ್ದರೂ ಕೂಡ ಅದನ್ನು ಹಾಕಿಕೊಳ್ಳಲು ಸಾಕಷ್ಟು ಸಮಯವನ್ನು ತೆಗೆದುಕೊಂಡು ಯೋಚಿಸುತ್ತಾರೆ. ಇನ್ನು ಹುಡುಗಿಯರ ಹಾಸ್ಟೆಲ್ ನಲ್ಲಿ ಹೆಚ್ಚಾಗಿ ಚರ್ಚೆಯಾಗುವುದು ಊಟದ ವಿಷಯದಲ್ಲಿ.

ಪ್ರತಿಯೊಂದು ದಿನ ಕೂಡ ಊಟದ ಕುರಿತಂತೆ ಒಂದಲ್ಲ ಒಂದು ಕೊರತೆಗಳನ್ನು ಹೇಳುತ್ತಲೇ ಇರುತ್ತಾರೆ. ಹಾಸ್ಟೆಲ್ ಊಟ ಅಂದಮೇಲೆ ಕೇಳಬೇಕಾ ಸ್ನೇಹಿತರೆ ನಿಮಗೆಲ್ಲ ಗೊತ್ತಿರುವ ವಿಷಯವೇ. ಇನ್ನು ಹಾಸ್ಟೆಲ್ ಗೆ ಬಂದ ಹುಡುಗಿಯರು ತಮ್ಮನ್ನು ತಾವು ಮಿಸ್ ವಲ್ಡ್ ಎಂಬ ರೀತಿಯಲ್ಲಿ ಭಾವಿಸಿಕೊಂಡು ಮಾಡೆಲ್ ಬಟ್ಟೆಗಳನ್ನು ಧರಿಸಿಕೊಂಡು ರಾಂಪ್ ವಾಕ್ ಮಾಡುತ್ತಿರುತ್ತಾರೆ. ಇನ್ನು ಈ ವಿಷಯವಂತೆ ನಿಮಗೆಲ್ಲ ಗೊತ್ತಿರುವುದೇ.

ಅದೇನೆಂದರೆ ಬೆಳಗ್ಗೆ ಎದ್ದ ತಕ್ಷಣ ಹಿಡಿದುಕೊಂಡಿರುವ ಫೋನ್ ಸಂಜೆತನಕ ಹುಡುಗಿಯರ ಕೈಯಿಂದ ಹೊರಗೆ ಹೋಗುವುದಿಲ್ಲ ಎಂಬುದು. ಇವೆಲ್ಲ ವಿಷಯಗಳನ್ನು ನೀವು ಓದಿದ ನಂತರ ಈಗ ನಿಮಗೆ ತಿಳಿದಿರಬಹುದು ಹುಡುಗಿಯರ ಹಾಸ್ಟೆಲ್ ನಲ್ಲಿ ಹುಡುಗಿಯರು ಏನೆಲ್ಲ ಮಾಡುತ್ತಾರೆ ಎಂಬುದಾಗಿ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೆ ಹಂಚಿಕೊಳ್ಳಿ.