ಬಂಗಾರದಂತಹ ಹುಡುಗಿ ಕೊಟ್ಟು, ಚಿನ್ನ ಕಾರು ಕೊಟ್ಟು 20 ಲಕ್ಷ ಹಣ ಕೊಟ್ಟು ಮದುವೆಮಾಡಿದರು, ಆದರೆ ಮೂರು ತಿಂಗಳಿಗೆ ಏನಾಯಿತು ಗೊತ್ತೇ??

4,722

ನಮಸ್ಕಾರ ಸ್ನೇಹಿತರೇ ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಕೂಡ ಪ್ರಮುಖವಾದ ಘಟನೆ ಆಗಿರುತ್ತದೆ. ಹೀಗಾಗಿ ಈ ವಿಚಾರದಲ್ಲಿ ಯೋಚಿಸಿ ಹೆಜ್ಜೆ ಇಡಬೇಕಾಗುತ್ತದೆ. ಇನ್ನು ಇಂದು ಕೂಡ ನಾವು ಹೇಳಲು ಹೊರಟಿರುವುದು ಒಂದು ಮದುವೆ ಕುರಿತಂತೆ. ದೇವರ ನಾಡು ಎಂದೇ ಖ್ಯಾತವಾಗಿರುವ ಕೇರಳದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವಾರು ಮದುವೆಗಳು ಮುರಿದು ಬಿದ್ದಿವೆ. ಈ ಮದುವೆಯಲ್ಲಿ ಒಂದೋ ಆ ಹೆಣ್ಣುಮಗಳು ತನ್ನ ಪ್ರಾಣವನ್ನು ಬಿಡುತ್ತಾಳೆ ಇಲ್ಲವೇ ದೌ’ರ್ಜನ್ಯಕ್ಕೆ ಒಳಗಾಗುತ್ತಾಳೆ. ಇಂದು ನಾವು ಹೇಳಹೊರಟಿರುವ ಕಥೆ ಕೂಡ ಇದಕ್ಕೆ ತದ್ವಿರುದ್ಧವಾಗಿ ಇಲ್ಲ.

ಹೌದು ಕೆಲವು ಸಮಯಗಳ ಹಿಂದಷ್ಟೇ ಕೇರಳದಲ್ಲಿ ವಿಸ್ಮಯ ರವರ ಪ್ರಕರಣ ಹಾರಿ ಹೋಗುವ ಮುನ್ನವೇ ಇನ್ನೊಂದು ಹೆಣ್ಣುಮಗಳ ಜೀವನದ ಬೆಳಕು ಕೂಡ ಹಾರಿಹೋಗಿದೆ. ಕೇರಳದ ನಿವಾಸಿಯಾಗಿರುವ ಸುಚಿತ್ರ ಎಂಬುವವಳು ಮುನ್ನಾದಿನ ರಾತ್ರಿಯಷ್ಟೇ ತಾಯಿಯೊಂದಿಗೆ ಮಾತನಾಡಿ ಮಲಗಿರುತ್ತಾಳೆ ಬೆಳಗ್ಗೆ ತಾಯಿಗೆ ಹನ್ನೊಂದು ಗಂಟೆಯ ಹೊತ್ತಿಗೆ ಮಗಳು ಈ ಲೋಕವನ್ನು ಬಿಟ್ಟು ಹೋಗಿದ್ದಾರೆ ಎಂಬ ಕರೆ ಬರುತ್ತದೆ. ರಾತ್ರಿಯಷ್ಟೇ ನಮ್ಮೊಂದಿಗೆ ಮಾತನಾಡಿದ ಮಗಳು ಬೆಳಿಗ್ಗೆ ಕೊನೆ ಉಸಿರು ಎಳೆಯಲು ಹೇಗೆ ಸಾಧ್ಯ ಎಂಬುದಾಗಿ ತಾಯಿ-ತಂದೆ ಇನ್ನಿಲ್ಲದಂತೆ ಕಂಗಾಲಾಗಿದ್ದರು.

ಹೌದು ತಮ್ಮ ಮಗಳಾಗಿರುವ 19 ವರ್ಷದ ಸುಚಿತ್ರ ಳನ್ನು ಅವಳ ತಂದೆ ತಾಯಿ ಆಗಿರುವ ಸುನಿಲ್ ಹಾಗೂ ಸುನಿತಾ ರವರು ಜ್ಯೋತಿಷಿ ಹೇಳಿರುವ ಮಾತು ಕೇಳಿ ತಪ್ಪು ಕೆಲಸ ಮಾಡಿದ್ದರು. ಹೌದು ಸುಚಿತ್ರ ಳಿಗೆ 20 ವರ್ಷ ಆಗುವುದಕ್ಕಿಂತ ಮುಂಚೆ ಮದುವೆ ಮಾಡಿಬಿಡಿ ಇಲ್ಲವಾದರೆ 27 ವರ್ಷದವರೆಗೂ ಕೂಡ ಆಕೆಗೆ ಕಂಕಣಭಾಗ್ಯ ಇಲ್ಲ ಎಂಬುದಾಗಿ ಜ್ಯೋತಿಷಿಗಳು ಸುಚಿತ್ರ ರವರ ತಂದೆತಾಯಿಗಳಿಗೆ ಹೇಳಿರುತ್ತಾರೆ. ಇದರಿಂದ ಚಿಂತಿತರಾದ ಸುಚಿತ್ರ ರವರ ತಂದೆ-ತಾಯಿಯರು ಸುಚಿತ್ರ ರವರನ್ನು ಆರ್ಮಿಯಲ್ಲಿ ಕೆಲಸಮಾಡುತ್ತಿದ್ದ ವಿಷ್ಣು ಗೆ ಮದುವೆ ಮಾಡಲು ಯೋಚಿಸುತ್ತಾರೆ.

ಎರಡು ಕುಟುಂಬದ ಒಪ್ಪಿಗೆ ಮೇರೆಗೆ ಅವರ ಮದುವೆ ನಡೆಯುವುದು ನಿಶ್ಚಯವಾಗುತ್ತದೆ. ಇನ್ನು ನಿಮಗೆಲ್ಲ ತಿಳಿದಿರುವಂತೆ ವರದಕ್ಷಿಣೆ ವಿರುದ್ಧ ಹಲವಾರು ಕಾನೂನು ಕ್ರಮಗಳು ಬಂದರೂ ಕೂಡ ವರದಕ್ಷಿಣೆ ಇನ್ನೂ ಜೀವಂತವಾಗಿದೆ ಈ ಮದುವೆಯನ್ನು ಕೂಡ ಜೀವಂತವಾಗಿತ್ತು. 80 ಲಕ್ಷ ಚಿನ್ನ ಹಾಗೂ ಒಂದು ಕಾರನ್ನು ನೀಡಬೇಕಾಗಿ ವಿಷ್ಣು ಮನೆಯವರು ಬೇಡಿಕೆಯನ್ನು ಇಡುತ್ತಾರೆ. ಆದರೆ ಸುಚಿತ್ರ ಮನೆಯವರು ಮಧ್ಯಮವರ್ಗದವರ ಆಗಿರುವುದರಿಂದ ಆಗಿ ಅಷ್ಟೊಂದು ನೀಡಲು ಸಾಧ್ಯವಾಗುವುದಿಲ್ಲ ಸ್ವಲ್ಪ ಕಡಿಮೆ ಮಾಡಿಕೊಳ್ಳಿ ಎಂದಾಗ 20 ಲಕ್ಷ ರೂ ಮೌಲ್ಯದ ಚಿನ್ನ ಹಾಗೂ 7 ಲಕ್ಷ ರೂಪಾಯಿಯ ಗಾಡಿಯನ್ನು ನೀಡಿ ಒಟ್ಟು 32 ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಡುತ್ತಾರೆ.

ಇನ್ನು ನಿಶ್ಚಿತಾರ್ಥ ಸಂದರ್ಭದಲ್ಲಿ ವಿಷ್ಣುವಿನ ತಾಯಿ ಸುಚಿತ್ರ ಳವರ ತಂದೆಯ ಬಳಿ 10ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು ಆಗ ಅವಳ ತಂದೆ ಪಿಂಚಣಿ ಹಣ ಬಂದಾಕ್ಷಣ ನಾನು ನೀಡುತ್ತೇನೆ ಎಂಬುದಾಗಿ ಹೇಳಿ ಸಮಾಧಾನ ಮಾಡಿದ್ದರು. ಮದುವೆ ನಂತರ ಸುಚಿತ್ರ ಗಂಡ ವಿಷ್ಣು ಉತ್ತರಖಾಂಡಕ್ಕೆ ಸೇನೆಯ ಕೆಲಸಕ್ಕೆಂದು ಹೋದಾಗ ಮನೆಯಲ್ಲಿ ಸುಚಿತ್ರ ಇದ್ದಾಗ ಹಣ ಬೇಕೆಂದು ಆಕೆ ಅತ್ತೆ ಪೀಡಿಸುತ್ತಲೇ ಇದ್ದಳು. ಇನ್ನು ಸುಚಿತ್ರ ಬಳಿಯಿದ್ದ ಆಕೆಯ ಬ್ಯಾಂಕ್ ಲಾಕರ್ ನ ಕೀಯನ್ನು ಕೂಡ ಆಕೆಯ ಅತ್ತೆ ಕಸಿದಿಟ್ಟುಕೊಂಡು ನಿನ್ನ ತಂದೆ ಯಾವಾಗ 10 ಲಕ್ಷ ಹಣ ಕೊಡುತ್ತಾರೆ ಅವಾಗ ನೀಡುತ್ತೇನೆ ಎಂಬುದಾಗಿ ಹೇಳಿದ್ದಳು‌.

ಮನೆಯಲ್ಲಿ ಒಂದಲ್ಲ ಒಂದು ಕಾರಣಕ್ಕಾಗಿ ಆಕೆಯ ಅತ್ತೆ ಸುಚಿತ್ರ ಳಿಗೆ ಕಾಟವನ್ನು ನೀಡುತ್ತಿದ್ದರು. ಇನ್ನು ಇದನ್ನು ತಾಳಲಾರದೆ ಸುಚಿತ್ರ ತಮ್ಮ ತಾಯಿಯ ಬಳಿ ಹೇಳಿಕೊಂಡಿದ್ದರು. ಇದಾದ ಕೆಲವು ಸಮಯಗಳ ನಂತರ ಕೇರಳದಲ್ಲಿ ವಿಸ್ಮಯ ರವರ ಪ್ರಕರಣ ನಡೆದ ಮೇಲೆ ಅಂದಿನ ರಾತ್ರಿ ತಮ್ಮ ಮಗಳೊಂದಿಗೆ ಸುನೀತಾ ಮಾತನಾಡಿದ್ದರು. ಆದರೆ ಬೆಳಗ್ಗೆ ತಮ್ಮ ಮಗಳು ಸುಚಿತ್ರ ಬಾರದ ಲೋಕದತ್ತ ತೆರಳಿದ್ದಳು. ಇನ್ನು ಸುಚಿತ್ರ ತಂದೆ-ತಾಯಿಗಳು ಸುಚಿತ್ರಳ ಅತ್ತೆಯ ಮೇಲೆ ದೂರನ್ನು ದಾಖಲಿಸಿ ವಿಚಾರಣೆ ನಡೆಸುವಂತೆ ಹಾಗೂ ನ್ಯಾಯ ಕೊಡಿಸುವಂತೆ ಪೊಲೀಸರಲ್ಲಿ ಕೇಳಿಕೊಂಡಿದ್ದರು. ಕೇರಳದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಆದರೆ ಅದಕ್ಕೆ ಕೊನೆಯಿಲ್ಲದಂತೆ ಇನ್ನು ಕೂಡ ನಡೆಯುತ್ತಲೇ ಇದೆ ಹೊರತು ನಿಲ್ಲುತ್ತಿಲ್ಲ.