ಮತ್ತೊಮ್ಮೆ ಚರ್ಚೆ ಹುಟ್ಟು ಹಾಕಿದ ವಿನೋದ್ ರಾಜ್ ತರ್ಪಣ ಬಿಟ್ಟಿದ ವಿಚಾರ, ದೊಡ್ಮನೆ ಕುಡಿ ಶಿವಣ್ಣ ರವರಿಂದ ಶಾಕ್ ಹೇಳಿಕೆ. ಏನು ಗೊತ್ತೇ??

25,317

ನಮಸ್ಕಾರ ಸ್ನೇಹಿತರೇ ಹೋಗುವ ವಯಸ್ಸು ಅಲ್ಲದಿದ್ದರೂ ಕೂಡ ಅಕಾಲಿಕವಾಗಿ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು. ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಬಡವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಕನ್ನಡ ಚಿತ್ರರಂಗದ ಕುರಿತಂತೆ ಸಾಕಷ್ಟು ಯೋಜನೆಗಳನ್ನು ಪುನೀತ್ ರಾಜಕುಮಾರ್ ರವರು ತಮ್ಮ ಪಿ ಆರ್ ಕೆ ಪ್ರೊಡಕ್ಷನ್ ಮೂಲಕ ಹಾಕಿಕೊಂಡಿದ್ದರು. ತಮ್ಮ ಪ್ರೊಡಕ್ಷನ್ ಹೌಸ್ ಮೂಲಕ ಅದೆಷ್ಟೋ ಹೊಸ ಪ್ರತಿಭೆಗಳಿಗೆ ಕನ್ನಡ ಚಿತ್ರರಂಗದಲ್ಲಿ ಮಿಂಚುವ ಅವಕಾಶವನ್ನು ಮುಕ್ತವಾಗಿ ನೀಡಿದ್ದರು. ಇಷ್ಟು ಮಾತ್ರವಲ್ಲದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಾಮಾಜಿಕ ಕಳಕಳಿ ಹೊಂದಿರುವ ಸಮಾಜಸೇವೆಯನ್ನು ಕೂಡ ಮಾಡಿದ್ದರು.

ಆದರೆ ಯಾರೊಂದಿಗೂ ಕೂಡ ಅದರ ಕುರಿತಂತೆ ಮಾತನಾಡಿಕೊಂಡಿರಲಿಲ್ಲ. ಇನ್ನು ಪುನೀತ್ ರಾಜಕುಮಾರ್ ರವರ 11ನೇ ದಿನದಂದು ಪುನೀತ್ ರಾಜಕುಮಾರ್ ರವರ ಕುಟುಂಬಸ್ಥರು ಮನೆಯಲ್ಲಿ ಹಾಗೂ ಸಮಾಧಿಯಲ್ಲಿ ಪೂಜಾ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು. ಆದರೆ ವಿನೋದ್ ರಾಜ್ ಹಾಗೂ ಅವರ ತಾಯಿ ಲೀಲಾವತಿರವರು ಶ್ರೀರಂಗಪಟ್ಟಣದ ಸಂಗಮದಲ್ಲಿ ಪುನೀತ್ ರಾಜಕುಮಾರ್ ರವರ ಪೂರ್ವ ಕ್ರಿಯಾಕರ್ಮಗಳನ್ನು ಮಾಡಿ ತರ್ಪಣವನ್ನು ಬಿಟ್ಟಿದ್ದರು.

ಇದರ ಕುರಿತಂತೆ ಯಾಕೆ ಎಂದು ಕೇಳಿದಾಗ ವಿನೋದ್ ರಾಜ್ ರವರು, ಪುನೀತ್ ರವರು ನನಗೆ ಅಣ್ಣ ಇದ್ದ ಹಾಗೆ ಅವರಿಗೆ ಹೀಗಾದ ನಂತರ ನನ್ನ ತಾಯಿ ನಾವು ಕೂಡ ಇಂತಹ ಕಾರ್ಯವನ್ನು ಮಾಡೋಣ ಎಂದು ಹೇಳಿದ್ದರು. ಅದರ ಹಿನ್ನೆಲೆಯಲ್ಲಿ ಇಂದು ಬಂದು ನಾವು ತರ್ಪಣವನ್ನು ಬಿಟ್ಟಿದ್ದೇವೆ. ಈ ಕಾರ್ಯವನ್ನು ಯಾರು ಮಾಡಿದರೇನು ಅವರಿಗೆ ಶಾಂತಿ ಸಿಗುವುದು ಮುಖ್ಯ ಎಂಬುದಾಗಿ ಹೇಳಿದ್ದಾರೆ. ಇನ್ನು ಇದರ ಕುರಿತಂತೆ ಶಿವಣ್ಣನವರಿಗೆ ತಿಳಿದಾಗ ಅಪ್ಪು ಮಟ್ಟದ ಗೌರವವನ್ನು ಎಲ್ಲರಿಂದ ಕೂಡ ಸಂಪಾದಿಸಿದ್ದಾನೆ. ವಿನೋದ್ ರಾಜ್ ಹಾಗೂ ಲೀಲಾವತಿ ಅಮ್ಮನವರಿಗೆ ಈ ಕಾರ್ಯ ಮಾಡಿದ್ದಕ್ಕಾಗಿ ಧನ್ಯವಾದಗಳು ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ. ಎಲ್ಲರೂ ಇದನ್ನು ದೊಡ್ಡ ಚರ್ಚೆ ಸೃಷ್ಟಿ ಮಾಡುತ್ತದೆ ಎಂದು ಕೊಂಡಿದ್ದರು, ಆದರೆ ಶಿವಣ್ಣ ರವರ ತಮ್ಮ ಹೇಳಿಕೆಯ ಮೂಲಕ ಶಾಂತ ರೀತಿಯಲ್ಲಿ ಪರಿಹಾರ ಮಾಡಿದ್ದಾರೆ.