ವಿಧಿಯನ್ನು ಬದಲಿಸಲಾರೆ, ಆದರೆ ಹೊಸ ಅಧ್ಯಾಯ ಆರಂಭ ಮಾಡುವೆ ಎಂದು ದಿಟ್ಟ ಹೆಜ್ಜೆ ಇಟ್ಟ ಅಶ್ವಿನಿ, ಹೊರಡಿಸಿದ ಹೊಸ ಆದೇಶ ಏನು ಗೊತ್ತೇ??

4,800

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಧನದ ವಾರ್ತೆ ಈಗಾಗಲೇ ಕನ್ನಡ ಸೇರಿದಂತೆ ಬೇರೆ ಭಾಗದ ಗಣ್ಯರಲ್ಲು ಕೂಡ ಸಾಕಷ್ಟು ದುಃಖವನ್ನು ತಂದಿದೆ. ಇನ್ನು ಅಭಿಮಾನಿಗಳಾದ ನಮ್ಮ ದುಃಖಕ್ಕೆ ಎಣೆಯಿಲ್ಲ ಎಂದು ಹೇಳಬಹುದಾಗಿದೆ. ಈಗಾಗಲೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಇಪ್ಪತ್ತಕ್ಕೂ ಅಧಿಕ ದಿನಗಳು ಕಳೆದಿವೆ.

ಇನ್ನು ಅವರು ಕನ್ನಡ ಚಿತ್ರರಂಗದ ಕುರಿತಂತೆ ಪಿಆರ್ಕೆ ಪ್ರೊಡಕ್ಷನ್ಸ್ ವತಿಯಿಂದ ಸಾಕಷ್ಟು ಯೋಜನೆಗಳನ್ನು ಕೂಡ ಹಮ್ಮಿಕೊಂಡಿದ್ದರು. ಇಷ್ಟು ಮಾತ್ರವಲ್ಲದೆ ನಾಲ್ಕು ಹೊಸಬರ ಚಿತ್ರಕ್ಕೆ ಕೂಡ ನಿರ್ಮಾಣ ಮಾಡುವ ಕಾರ್ಯವನ್ನು ಪ್ರಾರಂಭಿಸಿದ್ದರು. ಒಮ್ಮೆ ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರಾಗಿರುವ ಪರಮೇಶ್ವರ್ ಗುಂಡ್ಕಲ್ ಅವರು ಅಪ್ಪು ಅವರ ಮನೆಗೆ ಹೋದಾಗ ಅವರ ಆಫೀಸಿನಲ್ಲಿ ಜನಜಂಗುಳಿ ಕಂಡುಬಂದಿತ್ತು.

ಆಗ ಪರಮೇಶ್ವರ್ ಗುಂಡ್ಕಲ್ ಅವರು ಪುನೀತ್ ರಾಜಕುಮಾರ್ ಅವರ ಬಳಿ ಏನ್ಸಾರ್ ಬ್ಯುಸಿನಾ ಎಂದು ಕೇಳಿದಾಗ 4 ಹೊಸ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ ಎಂಬುದಾಗಿ ಹೇಳಿದ್ದರಂತೆ. ಇನ್ನು ಪುನೀತ್ ರಾಜಕುಮಾರ್ ನಟನೆಯ ಜೇಮ್ಸ್ ಚಿತ್ರದ ಗುರುಗಳಿಗೆ ಕೂಡ ಸಾಕಷ್ಟು ಕಾರ್ಯಗಳು ಬಾಕಿ ಉಳಿದಿದ್ದವು. ಆದರೆ ಈ 4 ಚಿತ್ರಗಳ ಘೋಷಣೆ ಮಾಡುವ ಮೊದಲೇ ಪುನೀತ್ ರಾಜಕುಮಾರ್ ರವರು ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾರೆ. ಈಗ ಅವರು ಅರ್ಧಕ್ಕೆ ಬಿಟ್ಟು ಹೋದಂತಹ ಅವರ ಕನಸುಗಳನ್ನು ಅವರ ಪತ್ನಿ ಅಶ್ವಿನಿ ಅವರು ಪೂರ್ತಿ ಮಾಡಲು ನಿರ್ಧರಿಸಿದ್ದಾರೆ.

ಇನ್ನು ಪಿಆರ್ ಕೆ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣವಾಗುವ ಸಿನಿಮಾಗಳ ಕೆಲಸವನ್ನು ನಂಬಿಕೊಂಡು ಸಾವಿರಾರು ಕುಟುಂಬಗಳು ಅನ್ನ ತಿನ್ನುತ್ತಿದ್ದವು. ಪುನೀತ್ ರಾಜಕುಮಾರ್ ರವರ ನಿಧಾನವಾಗಿ ಈಗಾಗಲೇ ಹಲವಾರು ದಿನಗಳು ಕಳೆದಿದ್ದು ಕೂಡ ಕೆಲಸದ ನಿರೀಕ್ಷೆಲಿ ಇರುವ ಸಾವಿರಾರು ಕುಟುಂಬಗಳಿಗೆ ಇನ್ನೂ ಕಾಯಿಸಬಾರದು ಎಂಬ ನಿಟ್ಟಿನಲ್ಲಿ ಅಶ್ವಿನಿ ಅವರು ಒಂದು ನಿರ್ಧಾರವನ್ನು ಕೈಗೊಂಡಿದ್ದಾರೆ. ಹೌದು ಮೊನ್ನೆಯಷ್ಟೇ ಸಾಮಾಜಿಕ ಜಾಲತಾಣಗಳಿಗೆ ಕಾಲಿಟ್ಟಿರುವ ಅಶ್ವಿನಿ ಪುನೀತ್ ರಾಜಕುಮಾರ್ ರವರು ಪಿಆರ್ ಕೆ ಪ್ರೊಡಕ್ಷನ್ಸ್ ಹಾಗೂ ಪಿಆರ್ಕೆ ಆಡಿಯೋ ಸಂಸ್ಥೆಯ ಜವಾಬ್ದಾರಿಯನ್ನು ತಾನೇ ಮುಂದುವರಿಸಿಕೊಂಡು ಹೋಗಲು ನಿಶ್ಚಯಿಸಿದ್ದಾರೆ.

ಇನ್ನು ಈ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪತ್ರದಲ್ಲಿ ಕೂಡ ಬರೆದುಕೊಂಡಿದ್ದಾರೆ. ನಮಗೆ ಹಿಂದಿನದನ್ನು ಬದಲಾಯಿಸಲು ಸಾಧ್ಯವಿಲ್ಲ ಆದರೆ ಶ್ರೀ ಪುನೀತ್ ರಾಜಕುಮಾರ್ ರವರ ಆಶೀರ್ವಾದ ಹಾಗೂ ಸ್ಪೂರ್ತಿಯಿಂದಾಗಿ ಪಿ ಆರ್ ಕೆ ಪ್ರೊಡಕ್ಷನ್ಸ್ ಹಾಗೂ ಪಿಆರ್ ಕೆ ಆಡಿಯೋ ಸಂಸ್ಥೆಯ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಹಾಗೂ ಅವರ ಕನಸುಗಳನ್ನು ಈಡೇರಿಸಲು ನಿಮ್ಮ ಬೆಂಬಲವನ್ನು ಕೋರುತ್ತಿದ್ದೇವೆ. ಅವರ ಕನಸನ್ನು ಪೂರ್ಣಗೊಳಿಸಲು ಮತ್ತೊಮ್ಮೆ ನಮ್ಮ ಪ್ರಯಾಣವನ್ನು ಪುನರಾರಂಭಿಸುತ್ತದೆ ಎಂಬುದಾಗಿ ಪ್ರಕಟಣೆಯನ್ನು ಹೊರಡಿಸಿದ್ದಾರೆ.

ಸಾಕಷ್ಟು ದಿನಗಳಿಂದ ಬೇಸರದಲ್ಲಿದ್ದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಇಂತಹ ಕೆಲಸಗಳನ್ನು ಮತ್ತೊಮ್ಮೆ ಮರು ಚಾಲನೆ ನೀಡಲಿ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಇದು ಸಂತೋಷದ ಸುದ್ದಿಯಾಗಿದೆ. ಒಟ್ಟಾರೆಯಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ತಮ್ಮ ಪತಿ ಪುನೀತ್ ರಾಜಕುಮಾರ್ ಅವರ ಕನಸುಗಳನ್ನು ಈಡೇರಿಸಲು ದುಃಖ ಹೊಂದಿರುವ ಮನಸ್ಸಿದ್ದರೂ ಕೂಡ ಪರರಿಗೆ ಉಪಕಾರ ಆಗಬೇಕೆಂದು ಸಂಸ್ಥೆಗಳ ಮೂಲಕ ಕಾರ್ಯಪ್ರವೃತ್ತರಾಗಿರುವುದು ಅವರ ಅಭಿಮಾನಿಗಳಿಗೆ ಸಾಕಷ್ಟು ಸಂತೋಷ ತಂದಿದೆ ಎಂದು ಹೇಳಬಹುದಾಗಿದೆ.