ಅಪ್ಪು ಅಂದರೆ ಎಲ್ಲರಿಗೂ ಅಚ್ಚು ಮೆಚ್ಚು, ಆದರೆ ಪುನೀತ್ ರವರ ನೆಚ್ಚಿನ ನಟ ಯಾರು ಗೊತ್ತೇ?? ಯಾರು ಗೊತ್ತೇ ಆ ಅದ್ಭುತ ಕಲಾವಿದ.
ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಕಂಡಂತಹ ಅತ್ಯುತ್ತಮ ನಟರಲ್ಲಿ ಅಗ್ರಗಣ್ಯರಾಗಿದ್ದರು. ಇನ್ನೂ ಕೂಡ ಅವರಿಗೆ ಸಿನಿಮಾರಂಗದಲ್ಲಿ ಸಾಧಿಸುವಂತದ್ದು ಬಹಳಷ್ಟು ಇತ್ತು. ಆದರೂ ಕೂಡ ಅರ್ಧದಲ್ಲೇ ಬದುಕಿನ ಪಯಣವನ್ನು ಮುಗಿಸಿ ಬಾರದ ಲೋಕದತ್ತ ತೆರಳಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ರಾಜಕುಮಾರ್ ರವರ ಸ್ಥಾನಕ್ಕೆ ಹೋಲಿಸಲಾಗಿತ್ತು. ಅಣ್ಣಾವ್ರನ್ನು ಕಳೆದುಕೊಂಡ ಮೇಲೆ ಎಲ್ಲಾ ಕನ್ನಡಿಗರು ಕೂಡ ರಾಜಕುಮಾರ್ ರವರನ್ನು ಪುನೀತ್ ಅವರಲ್ಲಿ ಕಾಣುತ್ತಿದ್ದರು.
ಆದರೆ ಇಂದು ಪುನೀತ್ ರಾಜಕುಮಾರ್ ಅವರು ನಿಧನರಾಗುವ ಮೂಲಕ ಕನ್ನಡಿಗರು ಅಣ್ಣಾವ್ರನ್ನು ಎರಡನೇ ಬಾರಿ ಕಳೆದುಕೊಂಡಿದ್ದಾರೆ. ಸಾಮಾಜಿಕ ಕಾರ್ಯದಲ್ಲಿ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ ಮೂಲಕ ಜನರಿಗೆ ಸಹಾಯವನ್ನು ಮಾಡುತ್ತಿದ್ದರು. ಇನ್ನು ಪುನೀತ್ ನಮನ ಕಾರ್ಯಕ್ರಮದಲ್ಲಿ ಬಂದಂತಹ ಶಕ್ತಿ ಧಾಮದ ಹೆಣ್ಣುಮಕ್ಕಳು ಕೂಡ ಪುನೀತ್ ರವರ ಹಣದಲ್ಲಿ ಜೀವನವನ್ನು ಸಾಗಿಸುತ್ತಿದ್ದರು ಹೀಗೆ ಪುನೀತ್ ರಾಜಕುಮಾರ್ ರವರು ಸಮಾಜದಲ್ಲಿ ಅದೆಷ್ಟು ಜನರ ಊಟಕ್ಕೆ ಕಾರಣವಾಗಿದ್ದಾರೆ. ಇನ್ನು ನಾವು ಮಾತನಾಡಲು ಹೊರಟಿರುವುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನೆಚ್ಚಿನ ನಟ ಯಾರು ಎಂಬುದರ ಕುರಿತಂತೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನೆಚ್ಚಿನ ನಟ ನವರಸನಾಯಕ ಜಗ್ಗೇಶ್. ಜಗ್ಗೇಶ್ ರವರ ತರ್ಲೆ ನನ್ ಮಗ ಚಿತ್ರ ನೋಡಿದ ನಂತರ ಅಪ್ಪು ಜಗ್ಗಣ್ಣನ ಅಭಿಮಾನಿ ಆಗಿದ್ದಾರಂತೆ. ಈ ವಿಚಾರವನ್ನು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇನ್ನು ಇವರಿಬ್ಬರ ನಡುವೆ ಸಹೋದರತ್ವದ ಬಾಂಧವ್ಯ ಮೊದಲಿನಿಂದಲೂ ಕೂಡ ಇತ್ತು. ಆದರೆ ಈಗ ಪುನೀತ್ ರವರ ನಿಧನದ ನಂತರ ಕರ್ನಾಟಕದ ಪ್ರತಿಯೊಬ್ಬರಿಗೂ ಕೂಡ ತುಂಬಲಾರದ ದುಃಖ ಉಂಟಾಗಿದೆ. ನಾವೆಷ್ಟೇ ಅವರ ಕುರಿತಂತೆ ಯೋಚಿಸಿದರೂ ಕೂಡ ಅವರು ಮತ್ತೆಂದು ಹಿಂದಕ್ಕೆ ಬರಲಾರರು. ಆದರೂ ಕೂಡ ಅವರು ಸಮಾಜಕ್ಕೆ ನೀಡಿರುವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಬೇಕಾಗಿದೆ.