ಏನೇ ಮಾಡಿದರೂ ಕುತ್ತಿಗೆ ಭಾಗ ಕಪ್ಪಾಗಿಯೇ ಇದೆಯೇ?? ಸರಿ ಮಾಡೋಕೆ ಇಲ್ಲಿದೆ ನೋಡಿ ಸೂಕ್ತ ಪರಿಹಾರ.

156

ನಮಸ್ಕಾರ ಸ್ನೇಹಿತರೇ ನಾವು ಸುಂದರವಾಗಿ ಕಾಣಲು ಮುಖ ಮಾತ್ರ ಚೆಂದ ಕಂಡರೆ ಸಾಲದು ನಮ್ಮ ದೇಹದ ಎಲ್ಲಾ ಭಾಗಗಳೂ ಕೂಡ ಆರೊಗ್ಯಕರವಾಗಿದ್ದು ಆ ಮೂಲಕ ಆಕರ್ಷಣೀಯ ಎನಿಸಬೇಕು. ಅದರಲ್ಲೂ ಮುಖದ ಕೆಳಭಾಗ, ಕುತ್ತಿಗೆಯ ಭಾಗ ಕೂಡ ಮುಖದಂತೆ ಸ್ವಚ್ಛವಾಗಿ ಕಾಂತಿಯಿಂದ ಕೂಡಿದ್ದರೆ ಕುತ್ತಿಗೆಗೆ ಸುಂದರವಾದ ಆಭರಣಗಳನ್ನು ತೊಟ್ಟು ಕುತ್ತಿಗೆಯ ಸೌಂದರ್ಯವನ್ನೂ ಹೆಚ್ಚಿಸಬಹುದು. ಆದರೆ ಕೆಲವರಿಗೆ ಕುತ್ತಿಗೆಯ ಹಿಂಭಾಗ ಅಥವಾ ಮುಂಬಾಗ ಕಪ್ಪಾಗಿರುವುದನ್ನು ಕಾಣಬಹುದು. ಇದು ಬೇಕಾದ ಬಟ್ಟೆ ಅಥವಾ ಆಭರಣಗಳನ್ನು ಧರಿಸಲು ಕೂಡ ಮುಜುಗರ ಉಂಟು ಮಾಡುತ್ತದೆ. ಹಾಗಾಗಿ ಈ ಸಮಸ್ಯೆಗೆ ಒಂದು ಸೂಕ್ತ ಪರಿಹಾರ ಇಲ್ಲಿದೆ ನೋಡಿ.

ನಾವು ಪ್ರತಿದಿನ ಬೆಳಗ್ಗೆ ಸ್ನಾನ ಮಾಡಬೇಕಾದರೆ ಕುತ್ತಿಗೆ ಭಾಗವನ್ನು ಚೆನ್ನಾಗಿ ತೊಳೆದುಕೊಳ್ಳದೇ ಇದ್ದರೆ ಕುತ್ತಿಗೆ ಭಾಗದಲ್ಲಿ ತುಂಬಾ ಕಿರಿಕಿರಿ ಮತ್ತು ಕೆರೆತ ಉಂಟಾಗುತ್ತದೆ. ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾದಾಗ ಕೂಡ ಕುತ್ತಿಗೆ ಕಪ್ಪಾಗುತ್ತದೆ. ಅಕ್ಯಾಂಥೋಸಿಸ್ ನಿಬ್ರಿಕನ್‌ಗಳು ಮತ್ತು ಇತರೆ ಚರ್ಮದ ಸಮಸ್ಯೆ ಕೂಡ ಕುತ್ತಿಗೆ ಭಾಗ ಕಪ್ಪಾಗಲು ಕಾರಣವಾಗಬಹುದು.

ಕುತಿಗೆಯ ಭಾಗ ಹೀಗೆ ಕಪ್ಪಾಗದಂತೆ ತಡೇಯಲು ದಿನವು ಕೆಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಪ್ರತಿದಿನ ಸ್ನಾನ ಮಾಡುವಾಗ ಅಥವಾ ಮುಖವನ್ನು ಸ್ವಚ್ಛಗೊಳಿಸುವಾಗೆಲ್ಲಾ ಕುತ್ತಿಗೆಯ ಭಾಗವನ್ನು ಕೂಡ ಚೆನ್ನಾಗಿ ಸ್ವಚ್ಛಗೊಳಿಸಿಕೊಳ್ಳಿ ಮತ್ತು ನಿಮ್ಮ ಕುತ್ತಿಗೆಯ ಮುಂಭಾಗ ಮತ್ತು ಹಿಂಭಾಗ ಎರಡೂ ಕಡೆ ತಪ್ಪದೇ ಸನ್‌ಸ್ಕ್ರೀನ್ ಕ್ರೀಂ ಅನ್ನು ಹಚ್ಚಿ. ಅದರಲ್ಲೂ ಬಿಸಿಲಿಗೆ ಮೈಒಡ್ಡಿಕೊಳ್ಳುವುದಾದರೆ ಸನ್ ಸ್ಕ್ರೀನ್ ಲೋಶನ್ ಸದಾ ಜೊತೆಗಿರಲಿ. ಇನ್ನು ಕಾಲರ್ ಇರುವ ಬಟ್ಟೆಗಳಿಂದ ಕುತ್ತಿಗೆಯಲ್ಲಿ ಕೊಳೆ ಕೂತಿದ್ದು ಹೋಗುವುದೇ ಇಲ್ಲ. ಹಾಗಿದ್ದಾಗ ಕಾಲರ್ ಇರುವ ಬಟ್ಟೆ, ಅಲರ್ಜಿ ಉಂಟು ಮಾಡುವ ಆಭರಣಗಳನ್ನು ಧರಿಸಬೇಡಿ. ಇನ್ನು ದೇಹದ ತೂಕ ಅಧಿಕವಾಗಿದ್ದರೆ ತೂಕ ಇಳಿಸಿದರೆ ಕುತ್ತಿಗೆಯ ಕಪ್ಪು ನಿಯಂತ್ರಣಕ್ಕೆ ಬರುತ್ತದೆ.