ಫೇಸ್ಬುಕ್ ಅಲ್ಲಿ ನೋಡಿ ಪ್ರೀತಿ ಮಾಡಿ ಮದುವೆಯಾದಳು, ಮನೆಯವರನ್ನು ಒಪ್ಪಿಸಿ ಮದುವೆಯಾದ ನಂತರ ನಡೆದ್ದದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಂಬಂಧಗಳು ಸಾಕಷ್ಟು ಹುಟ್ಟಿಕೊಳ್ಳುತ್ತಿವೆ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಆದರೆ ಸಾಮಾಜಿಕ ಜಾಲತಾಣ ಎಂಬುದು ನಿಮ್ಮ ಎದುರಿರುವ ವ್ಯಕ್ತಿತ್ವ ನಿಮಗೆ ಪೂರ್ಣವಾಗಿ ತಿಳಿಯುವುದು ಸಾಧ್ಯವೇ ಇಲ್ಲ. ಅದನ್ನು ಮೀರಿ ಇಲ್ಲಿ ಪ್ರೀತಿ ಪ್ರೇಮಗಳ ನಡೆದು ಮದುವೆ ಮಟ್ಟಕ್ಕೂ ಹೋಗಿ ನಂತರ ಕಹಿ ಘಟನೆಯನ್ನು ಅನುಭವಿಸುವ ಸಾಧ್ಯತೆಗಳು ಹಾಗೂ ಈ ತರಹದ ಘಟನೆಗಳು ನಡೆದಿರುವುದು ನೀವೆಲ್ಲ ನೋಡಿರಬಹುದು ಇನ್ನು ಮುಂದೆ ಕೂಡ ನೋಡ ಬಹುದು. ಬನ್ನಿ ಸ್ನೇಹಿತರೆ ಇದೇ ಮಾದರಿಯ ವಿಷಯವನ್ನು ಹಿಂದಿನ ವಿಷಯದಲ್ಲಿ ಹೇಳಲು ಹೊರಟಿದ್ದೇನೆ.
ಆಕೆಯ ಹೆಸರು ಕೃತಿ ಎಂದು. ಆಕೆ ತಂದೆ ಗ್ರಾಮ ಪಂಚಾಯತ್ ಆಫೀಸರ್ ಹಾಗೂ ಆಕೆಯ ತಾಯಿ ಬ್ಯೂಟಿಷಿಯನ್. ಒಬ್ಬಳೇ ಮಗಳೆಂದು ಪ್ರೀತಿಯಿಂದ ಸಾಕಿದ್ದರು. ನಂತರ ಮಗಳನ್ನು ಒಳ್ಳೆಯ ಕುಟುಂಬಕ್ಕೆ ಮದುವೆ ಮಾಡಿ ಸಾಕಷ್ಟು ವರದಕ್ಷಿಣೆ ಹಾಗೂ ವರೋಪಚಾರ ಗಳನ್ನು ಮಾಡಿಕೊಟ್ಟಿದ್ದರು. ಆದರೆ ಕೃತಿಯ ವರೆಗೆ ಈ ಮದುವೆ ಹಿಡಿಸಲಿಲ್ಲ ಹಾಗೂ ಆರು ತಿಂಗಳಲ್ಲಿ ವಿವಾಹ ವಿಚ್ಛೇದನವನ್ನು ನೀಡಿ ಮನೆಗೆ ಬಂದರು. ಆಗ ಅವರು ನಾಲ್ಕು ತಿಂಗಳು ಗರ್ಭಿಣಿಯಾಗಿದ್ದರು. ಹೀಗೆ ತವರುಮನೆಯಲ್ಲಿ ಮೂರು ವರ್ಷಗಳು ಕಳೆದು ಹೋಗುತ್ತದೆ ಹೀಗೆ ಮಗುವಿನ ಲಾಲನೆ ಪಾಲನೆ ಮಾಡುತ್ತಾ ಕೃತಿ ಅವರು ಕಾಲವನ್ನು ಕಳೆಯುತ್ತಿರುತ್ತಾರೆ.
ಆದರೆ ಇದೇ ಸಂದರ್ಭದಲ್ಲಿ ಕೃತಿ ಅವರಿಗೆ ಫೇಸ್ಬುಕ್ನಲ್ಲಿ ವೈಶಾಖ್ ಎನ್ನುವ ಹುಡುಗನ ಪರಿಚಯವಾಗಿ ಪರಿಚಯ ಗಾಢವಾದ ಸ್ನೇಹಕ್ಕೆ ತಿರುಗುತ್ತದೆ. ಅವನು ತಾನು ಗಲ್ಫ್ ದೇಶದಲ್ಲಿ ಕೆಲಸ ಮಾಡುವ ವ್ಯಕ್ತಿ ಎಂದು ಪರಿಚಯ ಮಾಡಿಕೊಳ್ಳುತ್ತಾನೆ. ಇವರ ಸ್ನೇಹ ಎಷ್ಟರಮಟ್ಟಿಗೆ ಕ್ಲೋಸ್ ಆಗುತ್ತದೆ ಎಂದರೆ ಕೃಷಿ ಅವರು ತಮ್ಮ ಮಗಳ ಮೂರನೇ ವರ್ಷದ ಜನ್ಮದಿನ ಆಚರಣೆಗೆ ವೈಶಾಖ ನನ್ನು ಆಹ್ವಾನಿಸುತ್ತಾಳೆ ಹಾಗೂ ಮನೆಯವರಿಗೆ ಪರಿಚಯವನ್ನು ಕೂಡ ಮಾಡಿಕೊಡುತ್ತಾಳೆ. ಆದರೆ ಮನೆಯವರಿಗೆ ಅವನ ಕುರಿತಂತೆ ಅಷ್ಟೊಂದು ಇಷ್ಟವಾಗುವುದಿಲ್ಲ.
ಇನ್ನು ಕೃತಿ ವೈಶಾಖ ರನ್ನು ಮದುವೆಯಾಗಬೇಕೆಂದು ಅಂದುಕೊಳ್ಳುತ್ತಾಳೆ. ಮನೆಯವರ ವಿರೋಧದ ನಡುವೆಯೂ ಕೂಡ ವೈಶಾಖ ರವರನ್ನು ಕೃತಿ ಸಿಸ್ಟರ್ ಮ್ಯಾರೇಜ್ ಆಗುತ್ತಾಳೆ. ನಂತರ ಮಗಳ ಆಸೆಗೆ ಇಲ್ಲವೆನ್ನಲಾಗದೆ ಇಬ್ಬರನ್ನು ಕೂಡ ಶಾಸ್ತ್ರವಾಗಿ ಮದುವೆ ಮಾಡಿಕೊಡುತ್ತಾರೆ. ಮದುವೆಯಾದ ಸ್ವಲ್ಪ ದಿನಗಳಲ್ಲೇ ಗಲ್ಫ್ ನಲ್ಲಿ ಇದ್ದ ಕೆಲಸವನ್ನು ಬಿಟ್ಟು ಮತ್ತೆ ಊರಿನಲ್ಲೇ ಬಂದು ಬಿಸಿನೆಸ್ ಮಾಡಲು ಪ್ರಾರಂಭಿಸುತ್ತಾನೆ ವೈಶಾಕ್. ಇದಕ್ಕಾಗಿ ಕೃತಿ ಹಾಗೂ ಅವರ ತಾಯಿಯ ಬಳಿ ಇದ್ದ ಒಟ್ಟು 10 ಲಕ್ಷ ಹಣವನ್ನು ಕೂಡ ಹೂಡಿಕೆ ಮಾಡಿ ನಷ್ಟವನ್ನು ಅನುಭವಿಸುತ್ತಾನೆ.
ಇದಕ್ಕಾಗಿ ಪ್ರತಿದಿನ ದುಡ್ಡಿನ ಬೇಡಿಕೆಯನ್ನು ಕೃತಿ ಬಳಿಯಿಟ್ಟು ಪೀಡಿಸುತ್ತಾನೆ. ಇವನ ಕಾಟ ದಿನೇದಿನೇ ಮೀರಿ ಮಿತಿಮೀರುತ್ತದೆ. ಇದನ್ನು ತಾಳಲಾರದೆ ಕೃತಿ ತವರು ಮನೆಗೆ ವಾಪಸಾಗುತ್ತಾಳೆ. ಕೆಲವು ದಿನಗಳ ನಂತರ ಮತ್ತೆ ಕೃತಿಯ ಮನೆಗೆ ಬರುವ ವೈಶಾಕ್ ಕೃತಿಯ ಬಳಿ ಮಾತಾಡಬೇಕು ಎಂದು ವಿನಂತಿಸಿಕೊಳ್ಳುತ್ತಾನೆ. ಮೊದಲಿಗೆ ಒಪ್ಪದಿದ್ದರು ನಂತರ ಅವಕಾಶ ನೀಡುತ್ತಾರೆ ಕೃತಿಯ ತಂದೆ-ತಾಯಿ. ಮಗಳು ಹಾಗೂ ಅಳಿಯ ಕೋಣೆಯೊಳಗೆ ಹೋಗಿ ಚರ್ಚಿಸಲು ಪ್ರಾರಂಭಿಸುತ್ತಾರೆ. ಮೊದಲ ಬಾರಿಗೆ ತಾಯಿ ರಾತ್ರಿಯ ಸಮಯದಲ್ಲಿ ಊಟಕ್ಕೆ ಕರೆಯುತ್ತಾರೆ.
ಈಗ ಹಸಿವಿಲ್ಲ ಸ್ವಲ್ಪ ಸಮಯದ ನಂತರ ಬರುತ್ತೇವೆ ಎಂದು ಹೇಳುತ್ತಾನೆ. ಹೀಗೆ ತಡರಾತ್ರಿಯವರೆಗೂ ಮುಂದೂಡಿಕೊಂಡು ಬರುವ ವೈಶಾಖ ನ ನಡವಳಿಕೆ ಕೃತಿ ಅವರ ತಾಯಿಗೆ ಆಲೋಚನೆ ಬಂದು ಒಳಗೆ ಬಂದು ನೋಡಿದಾಗ ಕೃತಿ ಯವರು ಮಲಗಿರುವ ಸ್ಥಿತಿಯಲ್ಲಿ ಕಾಣುತ್ತಾರೆ. ಆಗ ವೈಶಾಖ್ ವೈದ್ಯರನ್ನು ಕರೆದು ತರುತ್ತೇನೆಂದು ಕಾರು ತೆಗೆದುಕೊಂಡು ಹೋಗುತ್ತಾರೆ. ಆಗ ಬಂದು ನೋಡಿದಾಗ ಕೃತಿ ಅದಾಗಲೇ ಇಹಲೋಕವನ್ನು ತ್ಯಜಿಸಿ ಇರುತ್ತಾರೆ. ನೋಡಿದ್ರ ಸ್ನೇಹಿತರೆ ಫೇಸ್ಬುಕ್ನ ಪ್ರೀತಿಗೆ ಪ್ರಾ ‘ಣವನ್ನೇ ತ್ಯಜಿಸಿದರು ಕೃತಿ. ಇದನ್ನು ನಾವು ನಿಜ ಜೀವನದಲ್ಲೂ ಕೂಡ ಒಂದು ಪಾಠವಾಗಿ ತೆಗೆದುಕೊಳ್ಳಬೇಕಾಗಿದೆ.