ರೈಲ್ವೆ ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆಯ ರಹಸ್ಯ ಬಯಲಾದ ಎಲ್ಲರಿಗೂ ಶಾಕ್, ಅಷ್ಟಕ್ಕೂ ಆಕೆ ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಹೆಣ್ಣುಮಕ್ಕಳು ಎಂದಾಗ ಲ್ಯಾಪ್ಟಾಪ್ ಹಿಡಿದುಕೊಂಡು ಯಾವುದೋ ಕಂಪನಿಯಲ್ಲಿ ಅಥವಾ ಮನೆಯಲ್ಲಿ ಹೌಸ್ವೈಫ್ ಆಗಿ ನೆಮ್ಮದಿಯಿಂದ ಇರೋದು ನಾವೆಲ್ಲಾ ನೋಡಿಕೊಂಡು ಬಂದಿರುವುದು. ಆದರೆ ಇಲ್ಲೊಬ್ಬ ಹೆಣ್ಣುಮಗಳ ಕಣ್ಣೀರ ಕಹಾನಿ ಕೇಳಿದರೆ ಖಂಡಿತವಾಗಿಯೂ ನಮಗೆ ಅವರ ಕುರಿತಂತೆ ಅನುಕಂಪವೂ ಕೂಡ ಬರುತ್ತದೆ ಹಾಗೂ ಆಕೆಯ ಕೆಲಸವನ್ನು ನೋಡಿದರೆ ಆಕೆ ಮೇಲೆ ಗೌರವ ಕೂಡ ಹೆಚ್ಚಾಗುತ್ತದೆ.
ಹೌದು ನಾವು ಎಂದು ಹೇಳಲು ಹೊರಟಿರುವ ಹೆಣ್ಣುಮಗಳ ಹೆಸರು ಸಂಧ್ಯಾ ಎಂದು. ಈಕೆ ಜಬಲ್ಪುರ ಎಂಬ ರೈಲ್ವೆ ಸ್ಟೇಷನ್ ನಲ್ಲಿ ಲಗೇಜು ಹೊರುವ ಕೂಲಿಯಾಳಾಗಿ ಕೆಲಸ ಮಾಡಿರುವ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿ ಸುದ್ದಿಯನ್ನು ಮಾಡುತ್ತಿದೆ. ಇನ್ನೂ ಸಂಧ್ಯಾ ರವರು ರೈಲ್ವೆ ಸ್ಟೇಷನ್ ನಲ್ಲಿ ಕೂಲಿಯಾಳಾಗಿ ಯಾಕೆ ಕೆಲಸ ಮಾಡುತ್ತಿದ್ದಾರೆ ಎಂದು ಕೇಳಿದಾಗ ಅವರು ಕೊಟ್ಟ ಉತ್ತರ ಖಂಡಿತವಾಗಿ ನಿಮ್ಮ ಕಣ್ಣಿನಲ್ಲಿ ನೀರು ತರಿಸುತ್ತದೆ.
ಹೌದು ಸ್ನೇಹಿತರೆ ಸಂಧ್ಯಾ ರವರು ಕೂಡ ಮದುವೆಯಾಗಿ ತಮ್ಮ ಗಂಡ ಹಾಗೂ ಮೂರು ಜನ ಮಕ್ಕಳೊಂದಿಗೆ ಸುಖ ಸಂಸಾರವನ್ನು ನಡೆಸುತ್ತಿದ್ದರು. ನಾನು ಕೆಲಸಕ್ಕೆ ಹೋಗುತ್ತೇನೆ ಎಂದರೂ ಕೂಡ ಅವರ ಗಂಡ ನೀನು ಮನೆಯಲ್ಲೇ ಇದ್ದು ಮಕ್ಕಳನ್ನು ನೋಡಿಕೊಳ್ಳು ನಾನು ದುಡಿದು ಹಾಕಿಸುತ್ತೇನೆ ಎಂದು ಹೇಳಿ ಕೆಲಸ ಮಾಡುತ್ತಿದ್ದರು. ಹೀಗೆ ಅವರ ಜೀವನ ಎಲ್ಲವೂ ಸರಿಯಾಗಿತ್ತು ಆದರೆ, ಒಮ್ಮೆ ಸಂಧ್ಯಾ ರವರ ಗಂಡ ಕೆಲಸಕ್ಕೆ ಹೋದಾಗ ವಾಪಸ್ಸು ಬಂದಿದ್ದು ಜೀವಂತವಾಗಿ ಅಲ್ಲ ಶವವಾಗಿ. ಇದಾದನಂತರ ಸಂಧ್ಯಾ ರವರ ಜೀವನದ ತಿರುವೆ ಬದಲಾಗಿಹೋಯಿತು. ಹೌದು ಸ್ನೇಹಿತರೆ ಮೂರು ಜನ ಮಕ್ಕಳನ್ನು ನೋಡಿಕೊಳ್ಳುವ ಹಾಗೂ ಅವರಿಗೆ ಉತ್ತಮ ಶಿಕ್ಷಣವನ್ನು ನೀಡುವ ಜವಾಬ್ದಾರಿ ಸಂಧ್ಯಾ ರವರ ಮೇಲೆ ಬಿದ್ದಿತ್ತು.
ಹೀಗಾಗಿ ವಿಧಿಯಿಲ್ಲದೆ ಗಂಡಸರು ಕೆಲಸ ಮಾಡುತ್ತಿದ್ದಂತಹ ರೈಲ್ವೆ ಸ್ಟೇಷನ್ ನಲ್ಲಿ ಲಗೇಜ್ ಹೊರುವ ಕೂಲಿಯಾಳು ಕೆಲಸವನ್ನು ಸಂಧ್ಯಾ ರವರು ಮಾಡತೊಡಗಿದರು. ಕೆಲವೊಮ್ಮೆ ಗಂಡಸರೇ ಹೊರಲು ಕಷ್ಟವಾಗುವಂತಹ ಭಾರವಾದಂತಹ ಲಗೇಜುಗಳನ್ನು ಸಂಧ್ಯಾ ರವರು ಸಲೀಸಾಗಿ ಎತ್ತಿಕೊಂಡು ಹೋಗುತ್ತಿದ್ದರು. ಅದಕ್ಕೆ ಕಾರಣ ಅವರು ತಮ್ಮ ಮಕ್ಕಳ ಮೇಲೆ ಇಟ್ಟಿದ್ದ ಪ್ರೀತಿಯ ಹಾಗೂ ಅವರಿಗೆ ಉತ್ತಮ ಶಿಕ್ಷಣವನ್ನು ನೀಡಬೇಕೆಂಬ ಮಹಾದಾಸೆ. ಇನ್ನು ಟಿವಿ ಮಾಧ್ಯಮಗಳು ಇವರನ್ನು ಯಾಕೆ ನೀವು ಈ ಕೆಲಸ ಮಾಡುತ್ತಿದೆ ಎಂದು ಹೇಳಿದಾಗ, ನನ್ನ ಮಕ್ಕಳಿಗಾಗಿ ಅವರ ಜೀವನವನ್ನು ಉತ್ತಮ ರೀತಿಯಲ್ಲಿ ನಡೆಸಲು ನಾನು ಕಷ್ಟಪಟ್ಟು ಕೆಲಸ ಮಾಡಲೇ ಬೇಕಾಗಿದೆ. ಹೀಗಾಗಿ ನನಗೆ ಯಾವ ಕೆಲಸವು ಚಿಕ್ಕದಲ್ಲ ಎಂಬುದಾಗಿ ಹೇಳಿದ್ದಾರೆ. ಸಂಧ್ಯಾ ರವರ ಮೇರು ವ್ಯಕ್ತಿತ್ವಕ್ಕೆ ನಮ್ಮದೊಂದು ಸಲಾಂ ಸ್ನೇಹಿತರೆ.