ಟಾಪ್ ನಟಿಯಾಗಿ ಮಿಂಚಿ, ಜೀವನದಲ್ಲಿ ಸಾಕಷ್ಟು ಕಷ್ಟ ಕಂಡಿರುವ ರಾಧಿಕಾ ರವರ ಜೀವನ ಕಥೆ ತೋರಿಸ್ತೇವೆ ಕೇಳಿ.

176

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಹಲವಾರು ನಟಿಯರು ಇಲ್ಲಿಯವರೆಗೆ ನಟಿಸಿ ಬಂದು ಹೋಗಿದ್ದಾರೆ. ಆದರೆ ಅವರ ಕುರಿತಂತೆ ನಮಗೆ ಸಂಪೂರ್ಣವಾಗಿ ತಿಳಿದಿರುವುದಿಲ್ಲ. ಇಂದಿನ ವಿಷಯದಲ್ಲಿ ನಾವು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಮಿಂಚಿದಂತಹ ರಾಧಿಕಾ ಕುಮಾರಸ್ವಾಮಿ ಅವರ ಕುರಿತಂತೆ ಹೇಳಲು ಹೊರಟಿದ್ದೇವೆ.

ನಾವು ಏನು ಹೇಳಲು ಹೊರಟಿರುವ ವಿಷಯಗಳು ನಿಮಗೆ ಹೊಸದಾಗಿ ಗೊತ್ತಾಗುತ್ತಿರುವುದರಿಂದ ಹಾಗಾಗಿದ್ದರಿಂದ ಕೊನೆಯವರೆಗೂ ಪೂರ್ತಿಯಾಗಿ ಓದಿ. ಹೌದು ಸ್ನೇಹಿತರೆ ರಾಧಿಕಾ ರವರು ಮೂಲತಹ ಮಂಗಳೂರಿನವರು. ಇವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ನೀಲಮೇಘಶ್ಯಾಮ ಎಂಬ ಚಿತ್ರದ ಮೂಲಕ. ನಂತರ ರಾಘವೇಂದ್ರ ರಾಜಕುಮಾರ್ ನಟನೆಯ ನಿನಗಾಗಿ ಚಿತ್ರದ ಮೂಲಕ ಸಂಪೂರ್ಣ ನಾಯಕಿಯಾಗಿ ಕಾಣಿಸಿಕೊಂಡರು. ಇನ್ನು ಈ ಚಿತ್ರ ರಾಧಿಕಾ ರವರಿಗೆ ಸಾಕಷ್ಟು ಯಶಸ್ಸನ್ನು ತಂದುಕೊಟ್ಟಿತು. ನಂತರದ ದಿನಗಳಲ್ಲಿ ಇವರು ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಕೂಡ ಕುಟ್ಟಿ ರಾಧಿಕಾ ಎಂಬ ಹೆಸರಿನಿಂದ ಜನಪ್ರಿಯ ನಟಿಯಾಗಿದ್ದರು. ನಂತರ ರಾಧಿಕ ಹಾಗೂ ಶಿವರಾಜ್ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಂತಹ ತವರಿಗೆ ಬಾ ತಂಗಿ ಹಾಗೂ ಅಣ್ಣ-ತಂಗಿ ಚಿತ್ರಗಳು ಅವರನ್ನು ಕನ್ನಡ ಚಿತ್ರರಂಗದ ಟಾಪ್ ನಟಿಯನ್ನಾಗಿ ಮಾಡಿತು.

ಕೆಲವೇ ವರ್ಷಗಳಲ್ಲಿ ಕನ್ನಡ ಚಿತ್ರರಂಗದಿಂದ ದೂರ ಆಗಿ ಮತ್ತೆ ಲಕ್ಕಿ ಚಿತ್ರದ ಮೂಲಕ ನಿರ್ಮಾಪಕಿಯಾಗಿ ವಾಪಸಾದರು. ಇದಾದ ನಂತರ ಇತ್ತೀಚಿನ ದಿನಗಳಲ್ಲಿ ನಟಿಯಾಗಿ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ರಾಧಿಕಾ ರವರ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ಮೊದಲು ಇವರು ರತನ್ ಕುಮಾರ್ ಎಂಬುವವರನ್ನು ಮದುವೆಯಾಗಿದ್ದರು. ನಂತರ ಕೌಟುಂಬಿಕ ಸಮಸ್ಯೆಗಳಿಂದಾಗಿ ಈ ಮದುವೆ ವಿಚ್ಛೇದನದಲ್ಲಿ ಅಂತ್ಯವಾಯಿತು. ನಂತರ ಕುಮಾರಸ್ವಾಮಿ ಅವರನ್ನು ಮದುವೆಯಾದ ಅಂತಹ ರಾಧಿಕಾ ರವರು ಶಮಿಕಾ ಎಂಬ ಹೆಣ್ಣುಮಗಳನ್ನು ಪಡೆದರು. ಈಗ ಕನ್ನಡ ಚಿತ್ರರಂಗದಲ್ಲಿ ನಟಿ ಹಾಗೂ ನಿರ್ಮಾಪಕರಾಗಿ ಸಕ್ರಿಯರಾಗಿರುವ ರಾಧಿಕಾ ಕುಮಾರಸ್ವಾಮಿ ಅವರಿಗೆ ಶುಭವಾಗಲಿ ಎಂದು ಹಾರೈಸೋಣ ಸ್ನೇಹಿತರೇ.