ಧರ್ಮಸ್ಥಳದಲ್ಲಿ ಮದುವೆಯಾದ ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ಮದುವೆ ಕರೆಯೋಲಿಯಲ್ಲಿ ಏನಿತ್ತು ಗೊತ್ತಾ? ನಿಜಕ್ಕೂ ಶಾಕಿಂಗ್ ಇದು

701

ನಮಸ್ಕಾರ ಸ್ನೇಹಿತರೇ ಡಿ ಬಾಸ್ ಅಂದ್ರೆ ಎಲ್ಲರಿಗೂ ಇಷ್ಟ. ಅವರ ಅಭಿಮಾನಿಗಳ ಸಾಂಝ್ಯೆಗೆ ಲೆಕ್ಕವಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಾವುದೇ ಚಿತ್ರ ರಿಲೀಸ್ ಆಗಲಿ ಜನ ಚಿತ್ರಮಂದಿರಗಳಿಗೆ ಮುಗಿಬೀಳುತ್ತಾರೆ. ಇನ್ನು ದರ್ಶನ್ ಅವರು ತಮ್ಮ ನಟನೆಗೆ ಮಾತ್ರವಲ್ಲ ಸಾಮಾಜಿಕ ಕಾರ್ಯಗಳಿಂದಲೂ ಹೆಸರು ಮಾಡಿದ್ದಾರೆ. ಸಿನಿಮಾಗಳಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿಯೂ ಒಬ್ಬ ಹಿರೋ ಇವರು. ದರ್ಶನ್ ತೂಗುದೀಪ್ ಹಾಗೂ ವಿಜಯಲಕ್ಷ್ಮಿಯವರ ವೈವಾಹಿಕ ಜೀವನದ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಗಳು ನಿಮಗಾಗಿ..

ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಪ್ರೀತಿಸಿ ಮದುವೆಯಾಗಿದ್ದು. ನಟ ದರ್ಶನ್ ತಾವು ಲವ್ ಮ್ಯಾರೇಜೆ ಆಗುವುದು ಎಂದು ತಾಯಿಯ ಬಳಿ ಹೇಳಿದ್ದರಂತೆ. ಅದನ್ನು ಒಪ್ಪಿದ ಅವರ ತಾಯಿ ಯಾರನ್ನೇ ಮದುವೆಯಾಗು ಆದರೆ ಹುಡುಗಿ ಮಾತ್ರ ತಮ್ಮ ಜಾತಿಯವಳೇ ಆಗಬೇಕು ಎಂದು ತಾಕೀರು ಮಾಡಿದ್ದರಂತೆ. ಇದಕ್ಕೆ ಒಪ್ಪಿಗೆ ಸೂಚಿಸಿದ್ದರು ಡಿ ಬಾಸ್!

ದರ್ಶನ್ ಅವರ ಮದುವೆ ಆಗಿ 17 ವರ್ಷಗಳೇ ಕಳೆದಿವೆ. ಸ್ನೇಹಿತನೊಬ್ಬನ ಮನೆಯಲ್ಲಿ ವಿಜಯಲಕ್ಷ್ಮಿ ಅವರನ್ನು ಕಂಡು ಮೆಚ್ಚಿದ ನಟ ದರ್ಶನ್ ಅವರನ್ನುಇಷ್ಟಪಟ್ಟರಂತೆ. ನಂತರ ವಿಜಯಲಕ್ಷ್ಮೀ ಕೂಡ ದರ್ಶನ್ ಅವರನ್ನು ಇಷ್ಟ ಪಡಲು ಶುರು ಮಾಡಿದ್ರು. ಇಬ್ಬರೂ ಪರಸ್ಪರ ಮೆಚ್ಚಿ ಮನೆಯವರೂ ಒಪ್ಪಿ ನಂತರ ಮದುವೆಯಾದ್ರು.

ಆಗಷ್ಟೇ ಸಿನಿ ಪ್ರಪಂಚಕ್ಕೆ ಕಾಲಿಟ್ಟವರು ದರ್ಶನ್. ಸಾಕಷ್ಟು ಏಳು ಬೀಳುಗಳನ್ನು ಕಂಡವರು. ಆದರೆ ಈ ಎಲ್ಲಾ ಕಷ್ಟದ ಸಂದರ್ಭದಲ್ಲೂ ದರ್ಶನ್ ಜೊತೆಯಾದವರು ವಿಜಯಲಕ್ಷ್ಮಿ. ಇಬ್ಬರೂ ಸಾಂಸಾರಿಕ ಜೀವನದಲ್ಲಿ ಸಾಕಷ್ಟು ತೊಂದರೆಯನ್ನು ಅನುಭವಿಸಿದರೂ ಎಲ್ಲವನ್ನೂ ಎದುರಿಸಿ ಇಂದು ತಮ್ಮ ಮಗ ವಿನೇಶ್ ಜೊತೆ ಖುಷಿಯಾಗಿದ್ದಾರೆ. ಇತ್ತೀಚಿಗೆ ತಮ್ಮ ಮದುವೆಯ ಆಮಂತ್ರಣ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಜಯಲಕ್ಷ್ಮಿ ಹಳೆಯ ನೆನಪುಗಳನ್ನು ಮೆಲಕು ಹಾಕಿದರು.